ಎಚ್​ಎಸ್​ಬಿಸಿ ಇತಿಹಾಸದಲ್ಲೇ ಮೊದಲ ಮಹಿಳಾ ಎಕ್ಸಿಕ್ಯೂಟಿವ್; ಇದು ಭಾರತಕ್ಕೆ ಹೆಮ್ಮೆಯ ವಿಚಾರ ಯಾಕೆ ಗೊತ್ತಾ ?

Meet Pam Kaur
Spread the love

ನ್ಯೂಸ್ ಆ್ಯರೋ: ಒಂದೂವರೆ ಶತಮಾನದಷ್ಟು ಹಳೆಯದಾದ ಎಚ್​ಎಸ್​ಬಿಸಿ ಹೋಲ್ಡಿಂಗ್ಸ್ ಸಂಸ್ಥೆಯ ಚೀಫ್ ಫೈನಾನ್ಷಿಯಲ್ ಆಫೀಸರ್ ಆಗಿ ಭಾರತ ಮೂಲದ ಪಾಮ್ ಕೌರ್ ನೇಮಕವಾಗಿದ್ದಾರೆ. ಹಲವು ಜಾಗತಿಕ ಪ್ರಮುಖ ಸಂಸ್ಥೆಗಳಿಗೆ ಭಾರತ ಮೂಲದ ಸಿಇಒಗಳೇ ಹಲವರಿದ್ದಾರೆ.

ಇದರಲ್ಲೇನು ವಿಶೇಷ ಎನಿಸಬಹುದು. ಆದರೆ, ಪಾಮ್ ಕೌರ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಯೂರೋಪ್​ನ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಚ್​ಎಸ್​ಬಿಸಿ ಸ್ಥಾಪನೆಯಾಗಿ 159 ವರ್ಷವಾಗಿದೆ. ಹದಿನಾರು ದಶಕಗಳಷ್ಟು ಸುದೀರ್ಘ ಇತಿಹಾಸ ಇರುವ ಎಚ್​ಎಸ್​ಬಿಸಿಯಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಎಕ್ಸಿಕ್ಯೂಟಿವ್ ಹುದ್ದೆ ಪಡೆದಿದ್ದಾರೆ. ಅದೂ ಆ ಸಾಧನೆ ಬಂದಿದ್ದು ಭಾರತ ಮೂಲದ ವ್ಯಕ್ತಿಯಿಂದ ಎಂಬುದು ಹೆಮ್ಮೆಯ ವಿಚಾರ.

ಈ ಮುಂಚೆ ಸಿಎಫ್​ಒ ಆಗಿದ್ದ ಜಾರ್ಜಸ್ ಎಲೆಡೆರಿ ಅವರು ಸಿಇಒ ಆಗಿ ಜವಾಬ್ದಾರಿ ಪಡೆದಿದ್ದರು. ಈ ವರ್ಷದಿಂದ ಸಿಎಫ್​ಒ ಸ್ಥಾನ ಹಾಗೇ ಉಳಿದುಕೊಂಡಿತ್ತು. 2013ರಿಂದಲೂ ಎಚ್​ಎಸ್​ಬಿಸಿ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿರುವ ಪಾಮ್ ಕೌರ್ ಅವರ ಹೆಸರನ್ನು ಜಾರ್ಜಸ್ ಅವರೇ ಸೂಚಿಸಿದ್ದರು. ಅಕ್ಟೋಬರ್ 22, ಇಂದು ಕೌರ್ ಸಿಎಫ್​ಒ ಆಗಿ ನೇಮಕವಾಗಿದ್ದಾರೆ.

ಪಂಜಾಬ್​ನಲ್ಲಿ ಹುಟ್ಟಿದ ಪಾಮ್ ಕೌರ್ ಅವರು ಪಂಜಾಬ್ ಯೂನಿವರ್ಸಿಟಿಯಿಂದ ಬಿಕಾಂ ಮತ್ತು ಎಂಬಿಎ ಮಾಡಿದ್ದಾರೆ. ಇಂಗ್ಲೆಂಡ್​ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಓದಿದ್ದಾರೆ. ಸಿಟಿ ಗ್ರೂಪ್, ಡಾಯ್ಷೆ ಬ್ಯಾಂಕ್ ಮೊದಲಾದ ಬ್ಯಾಂಕುಗಳಲ್ಲಿ ಗ್ರೂಪ್ ಆಡಿಟ್​ನ ಮುಖ್ಯ ಹುದ್ದೆಗಳನ್ನು ನಿಭಾಯಿಸಿದ್ದಾರೆ. ರಾಯಲ್ ಬ್ಯಾಂಕ್ ಆಫ್ ಸ್ಕಾಟ್​ಲ್ಯಾಂಡ್ ಗ್ರೂಪ್​ನಲ್ಲಿ ಸಿಎಫ್​ಒ ಮತ್ತು ಸಿಒಒ ಹುದ್ದೆ ಕೂಡ ಹೊಂದಿದ್ದರು.

2013ರಲ್ಲಿ ಅವರು ಇಂಟರ್ನಲ್ ಆಡಿಟ್​ನ ಗ್ರೂಪ್ ಹೆಡ್ ಆಗಿ ನೇಮಕಗೊಂಡು ಎಚ್​ಎಸ್​ಬಿಸಿ ಸಂಸ್ಥೆಗೆ ಅಡಿ ಇಟ್ಟಿದ್ದರು. 2020ರಲ್ಲಿ ಅವರನ್ನು ಗ್ರೂಪ್ ಚೀಫ್ ರಿಸ್ಕ್ ಆಫೀಸರ್ ಆಗಿ ನೇಮಕ ಮಾಡಲಾಯಿತು. ಪಾಮ್ ಕೌರ್ ಅವರು ಬ್ಯಾಂಕ್​ನ ಗ್ರೂಪ್ ಎಂಡಿ ಆಗಿದ್ಧಾರೆ. ಹಾಗೆಯೇ, ಗ್ರೂಪ್ ಎಕ್ಸಿಕ್ಯೂಟಿವ್ ಕಮಿಟಿಯ ಒಬ್ಬ ಸದಸ್ಯೆಯೂ ಹೌದು.

Leave a Comment

Leave a Reply

Your email address will not be published. Required fields are marked *

error: Content is protected !!