‘ಇಸ್ರೇಲ್​ ಟ್ರಾವೆಲ್ಸ್​’ನಿಂದ ‘ಜೆರುಸಲೆಂ’: ಮಂಗಳೂರಿನಲ್ಲಿ ಚರ್ಚೆಗೆ ಕಾರಣವಾಯ್ತು ಬಸ್‌ ಹೆಸರು

israel to jerusalem
Spread the love

ನ್ಯೂಸ್ ಆ್ಯರೋ: ಖಾಸಗಿ ಬಸ್​ನ ಹೆಸರನ್ನು ‘ಇಸ್ರೇಲ್​ ಟ್ರಾವೆಲ್ಸ್​’ನಿಂದ ‘ಜೆರುಸಲೆಂ’ ಎಂದು ಬದಲಾಯಿಸಲು ಒತ್ತಾಯಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಇಸ್ರೇಲ್​ನ ಪ್ರತಿಸ್ಪರ್ಧಿಯಾದ ಇರಾನ್​ ಮತ್ತು ಪಾಲೆಸ್ತೀನ್​ ನಡುವೆ ಭೌಗೋಳಿಕ ಮತ್ತು ರಾಜಕೀಯ ಉದ್ವಿಗ್ನತೆ ನಡೆಯುತ್ತಿದೆ . ಹೀಗಿರುವಾಗ ಭಾರತದಲ್ಲಿ ಈ ಕುರಿತಾಗಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲೂ ಈ ಕುರಿತಾಗಿ ಪೋಸ್ಟ್​ ಹಂಚಿಕೊಳ್ಳುತ್ತಿದ್ದಾರೆ.

ಇಂತಹ ಸಮಯದಲ್ಲಿ ಮೂಡಬಿದಿರೆ-ಕಿನ್ನಿಗೋಳಿ-ಮುಲ್ಕಿ ಮಾರ್ಗದಲ್ಲಿ ಚಲಿಸುವ ಖಾಸಗಿ ಬಸ್​ನ ಹೆಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಇಸ್ರೇಲ್​​​ ಟ್ರಾವೆಲ್ಸ್​’ ಎಂಬ ಹೆಸರನ್ನು ನೋಡಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ‘ಜೆರುಸಲೆಂ’ ಎಂದು ಬದಲಾಯಿಸಿ ಎಂದು ಒತ್ತಾಯಿಸಿದ್ದಾರೆ. ಮಾತ್ರವಲ್ಲದೆ ಈ ಕುರಿತಾಗಿ ಪ್ರಕರಣ ದಾಖಲಿಸುವಂತೆ ಪೊಲೀಸರನ್ನು ಕೇಳಿದ್ದಾರೆ.

ಬಸ್​​ ಮಾಲಕರಾದ ಲೆಸ್ಟರ್​ ಕಟೀಲ್​​ ಈ ಕುರಿತಾಗಿ ಮಾತನಾಡಿದ್ದಾರೆ. ‘12 ವರ್ಷದಿಂದ ನಾನು ಇಸ್ರೇಲ್​ನಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ ಟ್ರಾವೆಲ್​ ಏಜೆನ್ಸಿಗೆ ನಾನು ಇಸ್ರೇಲ್​ ಎಂದು ಹೆಸರಿಟ್ಟಿದ್ದೇನೆ. ನಾನು ಇಸ್ರೇಲ್​​ನಲ್ಲಿ ಇದ್ದಾಗ ಹಲವು ಕೆಲಸ ಮಾಡಿದ್ದೇನೆ. ನಾನು ನನ್ನ ಟ್ರಾವೆಲ್​ ಏಜೆನ್ಸಿ ಪ್ರಾರಂಭಿಸಿದಾಗ ಅದಕ್ಕೆ ಇಸ್ರೇಲ್​ ಎಂದು ಹೆಸರಿಡಲು ಯೋಚಿಸಿದೆ. ಆದರೆ ಕೆಲವು ವರ್ಗದವರು ಇದನ್ನು ವಿರೋಧಿಸಿರೋದು ನನಗೆ ತಿಳಿದಿಲ್ಲ. ನನಗೆ ಉದ್ಯೋಗ ನೀಡಿದ ದೇಶವನ್ನು ಗೌರವಿಸಿ ಹೆಸರಿಟ್ಟಿದ್ದೇನೆ’ ಎಂದು ಹೇಳಿದ್ದಾರೆ.

ಲೆಸ್ಟರ್​ ಕಟೀಲ್ ಸದ್ಯ ತಮ್ಮ ಬಸ್​ನ ಹೆಸರು ಬದಲಾಯಿಸಿದ್ದಾರೆ. ‘ಇಸ್ರೇಲ್​ ಟ್ರಾವೆಲ್ಸ್​’ನಿಂದ ‘ಜೆರಿಸೇಲಂ’ ಎಂದು ಹೊಸದಾಗಿ ಹೆಸರಿಟ್ಟಿದ್ದಾರೆ.ಪೊಲೀಸರು ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಆದರೆ ಸಮಸ್ಯೆ ಆಗಬಾರದೆಂದು ಹೆಸರು ಬದಲಾಯಿಸಿದ್ದೇನೆ’ ಎಂದು ಹೇಳಿದ್ದಾರೆ.

Leave a Comment

Leave a Reply

Your email address will not be published. Required fields are marked *