ಅಮೆರಿಕದ ವೈಟ್ಹೌಸ್ನಲ್ಲೂ ದೀಪಾವಳಿ ಸಂಭ್ರಮ; ಭಕ್ತಿಗೀತೆ ನುಡಿಸಿದ ಮಿಲಿಟರಿ ಬ್ಯಾಂಡ್
ನ್ಯೂಸ್ ಆ್ಯರೋ: ಹಿಂದೂಗಳ ಪವಿತ್ರ ಬೆಳಕಿನ ಹಬ್ಬ ದೀಪಾವಳಿ ಆಚರಣೆ ಆರಂಭವಾಗಿದೆ. ಕೇವಲ ನಮ್ಮ ದೇಶಗಳಲ್ಲಿ ಮಾತ್ರವಲ್ಲದೆ ವಿದೇಶಿಯರು ಕೂಡ ದೀಪಗಳ ಹಬ್ಬವನ್ನು ಆಚರಿಸಿ ಸಂಭ್ರಮಿಸುವುದುಂಟು. ಅಮೆರಿಕಾದ ಶಕ್ತಿಭವನ ಶ್ವೇತಭವನದಲ್ಲಿ “ಅಮೆರಿಕ-ಭಾರತ ಸಂಬಂಧ”ಗಳ ದ್ಯೋತಕವಾಗಿ ಆಚರಿಸಲಾಗುತ್ತದೆ.
ಮುಂದಿನ ತಿಂಗಳು ಅಧ್ಯಕ್ಷೀಯ ಚುನಾವಣೆ ಕಾಣುತ್ತಿರುವ ಅಮೆರಿಕದಲ್ಲಿ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನೇತೃತ್ವದಲ್ಲಿ ಭಾರತೀಯ ಅಮೆರಿಕನ್ನರ ಕೊಡುಗೆಗಳನ್ನು ಗೌರವಿಸುವ ದೀಪಾವಳಿ ಆಚರಣೆಯನ್ನು ಆಯೋಜಿಸಲಾಗಿತ್ತು. ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಕಾರ್ಯಕ್ರಮವನ್ನು ಶ್ಲಾಘಿಸಿ ದೀಪಾವಳಿ ಮತ್ತು ಭಾರತೀಯ ಅಮೆರಿಕನ್ನರ ಅಮೂಲ್ಯ ಕೊಡುಗೆಗಳ ಮಹತ್ವವನ್ನು ಎತ್ತಿ ತೋರಿಸಿದರು.
ಇನ್ನು ಶ್ವೇತಭವನದಲ್ಲಿ ದೀಪಾವಳಿ ಪ್ರಯುಕ್ತ ಅಲ್ಲಿ ಮಿಲಿಟರಿ ಬ್ಯಾಂಡ್ನಿಂದ ಭಕ್ತಿಗೀತೆಯಾದ “ಓಂ ಜೈ ಜಗದೀಶ್ ಹರೇ” ನುಡಿಸಲಾಯಿತು. ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ನ ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಗೀತಾ ಗೋಪಿನಾಥ್ ಅವರು ಈ ವೀಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್ ಮತ್ತು ಅಧ್ಯಕ್ಷ ಜೋ ಬಿಡೆನ್ ಅವರು ಶ್ವೇತಭವನದಲ್ಲಿ ದೀಪಾವಳಿ ಆಚರಣೆಯನ್ನು ಆಯೋಜಿಸಿ ಅಮೆರಿಕಾದ್ಯಂತ ಇರುವ ಭಾರತೀಯ ಅಮೆರಿಕನ್ನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. 600ಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
2016 ರಲ್ಲಿ ಶ್ವೇತಭವನದಲ್ಲಿ ಆಯೋಜಿಸಲಾದ ಮೊದಲ ದೀಪಾವಳಿ ಆಚರಣೆಯನ್ನು ನೆನಪಿಸಿಕೊಂಡ ಬೈಡೆನ್, “ದಕ್ಷಿಣ ಏಷ್ಯಾದ ಅಮೆರಿಕನ್ನರು ಸೇರಿದಂತೆ ವಲಸಿಗರ ಮೇಲಿನ ದ್ವೇಷ ಮತ್ತು ಹಗೆತನದಿಂದ ರೂಪುಗೊಂಡ ಕಪ್ಪು ಮೋಡವು 2024 ರಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದೆ” ಎಂದು ಹೇಳಿದರು.
Leave a Comment