ನಿಮ್ಮ ಹುಟ್ಟಿದ ದಿನಕ್ಕೆ ಅನುಗುಣವಾಗಿ 2025 ಹೇಗಿದೆ?: ಕೆಲಸ, ಪ್ರೀತಿ, ಮದುವೆ, ಲಾಭ- ನಷ್ಟ ಹೇಗಿದೆ

numerology
Spread the love

ನ್ಯೂಸ್ ಆ್ಯರೋ: ಸಂಖ್ಯಾಶಾಸ್ತ್ರವು ಭಾರತೀಯರು ಅನುಸರಿಸಿಕೊಂಡು ಬಂದಿರುವ ಭವಿಷ್ಯ ಸೂಚಕ ವಿಜ್ಞಾನವಾಗಿದೆ. ಕೆಲವರು ಇದನ್ನು ಗಣಿತ ವಿಜ್ಞಾನ ಎನ್ನುವರು. ಇನ್ನೂ ಕೆಲವರು ಅಂಕಿಅಂಶದ ಸಂಗ್ರಹಣೆ, ವ್ಯಾಖ್ಯಾನ ಎಂದು ಪರಿಗಣಿಸಿದ್ದಾರೆ. ಗಣಿತಶಾಸ್ತ್ರದ ಭಾಗವೆಂದೂ ಹೇಳುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿ ಸಂಖ್ಯೆಯು ಕೆಲವು ಶಕ್ತಿ ಅಥವಾ ಶಕ್ತಿಯನ್ನು ಹೊಂದಿರುತ್ತದೆ ಅದು ವ್ಯಕ್ತಿಯ ವ್ಯಕ್ತಿತ್ವದ ಲಕ್ಷಣಗಳು ಮತ್ತು ಅವನ/ಅವಳ ಜೀವನದ ಘಟನೆಗಳ ಮೇಲೆ ಪ್ರಭಾವ ಬೀರಬಹುದು.

ನಮ್ಮ ಬದುಕು ಕೂಡ ಒಂದು ಸಂಖ್ಯೆಯ ಆಧಾರದ ಮೇಲೆಯೇ ನಡೆಯುತ್ತಿರುತ್ತದೆ. ಆದ್ದರಿಂದ ಸಂಖ್ಯಾಶಾಸ್ತ್ರವೆನ್ನುವುದು ನಿತ್ಯ ಬದುಕಿನ ಸೂಚಕವಾಗಿದೆ. ಹುಟ್ಟಿದ ದಿನಾಂಕದ ಪ್ರಕಾರ ಸಂಖ್ಯಾಶಾಸ್ತ್ರವು ನಮ್ಮನ್ನು ಒಂಬತ್ತು ವಿಭಿನ್ನ ಪ್ರಕಾರಗಳಾಗಿ ವಿಂಗಡಿಸುತ್ತದೆ. 1 ರಿಂದ 9ರ ಅಂಕೆಯೇ ಇದರ ಮೂಲಾಧಾರ. ಈ ಒಂಬತ್ತು ಅಂಕೆಗೆ ತಕ್ಕಂತೆ ಕೆಲವರು ಭಾವುಕರಾಗಿರುತ್ತಾರೆ, ಕೆಲವರು ಪ್ರೇಮದಲ್ಲಿ ಪ್ರಾಕ್ಟಿಕಲ್ ಆಗಿದ್ದರೆ, ಇನ್ನು ಕೆಲವರು ಸೌಂದರ್ಯದ ಹುಡುಕಾಟದಲ್ಲಿರುತ್ತಾರೆ, ಮತ್ತೆ ಕೆಲವರು ಪ್ರೀತಿಗೆ ಹಂಬಲಿಸಿದರೆ, ಕೆಲವರು ದುಡ್ಡಿನ ವ್ಯಾಮೋಹಕ್ಕೆ ಒಳಗಾಗಿರುತ್ತಾರೆ. ಇದು ನೀವು ಯಾವಾಗ ಜನಿಸಿದಿರಿ ಎಂಬುದರ ಮೇಲೆ ಅವಲಂಬಿತವಾಗಿದೆ.

ಯಾವುದೇ ತಿಂಗಳ ದಿನಾಂಕ 1, 10, 19 ಮತ್ತು 28 ರಂದು ಜನಿಸಿದ ಜನರು ಸಂಖ್ಯೆ 1 ಎಂದು ಹೇಳಲಾಗುತ್ತದೆ. ಈ ವರ್ಷವು ನೀವು ಜೀವನದಲ್ಲಿ ಪ್ರಗತಿ ಕಾಣುವಿರಿ. ಸ್ವಯಂ ಅನ್ವೇಷಣೆಗಳಿಗೆ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಬದಲಾವಣೆಯ ಗಾಳಿ ಈ ವರ್ಷ ನಿಮಗೆ ಬೀಸಲಿದೆ. ಈ ಬದಲಾವಣೆಯನ್ನು ಸ್ವೀಕರಿಸಲು ಮತ್ತು ಮುಂದೆ ದಿಟ್ಟ ಹೆಜ್ಜೆಗಳನ್ನು ಇಡಲು ಇದು ಸೂಕ್ತ ಸಮಯ.

ಯಾವುದೇ ತಿಂಗಳ ದಿನಾಂಕ 2, 11, 20 ಮತ್ತು 29 ರಂದು ಜನಿಸಿದ ಜನರು ಸಂಖ್ಯೆ 2 ಎಂದು ಹೇಳಲಾಗುತ್ತದೆ. ಈ ವರ್ಷವು ಸಹಕಾರದ ಮೂಲಕ ನೀವು ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಈ ವರ್ಷ ನಿಮಗೆ ಉದ್ಯೋಗ, ಪ್ರೀತಿ ಮತ್ತು ಪ್ರಣಯ ವಿಷಯಗಳಲ್ಲಿ ಪ್ರಗತಿ ಕಾಣಲಿದೆ. ಪರಸ್ಪರ ತಿಳುವಳಿಕೆ ಮತ್ತು ಟೀಮ್‌ವರ್ಕ್ ನಿಂದ ನೀವು ಉದ್ಯೋಗ ಸ್ಥಳದಲ್ಲಿ ಕೆಲಸ ನಿರ್ವಹಿಸಿದರೆ, ಪ್ರಗತಿ ಕಾಣಬಹುದಾಗಿದೆ.

ಯಾವುದೇ ತಿಂಗಳ ದಿನಾಂಕ 1, 12, 21 ಮತ್ತು 30 ರಂದು ಜನಿಸಿದ ಜನರು ಸಂಖ್ಯೆ 3 ಎಂದು ಹೇಳಲಾಗುತ್ತದೆ. ಈ ವರ್ಷ ನೀವು ಸೃಜನಶೀಲತೆಯತೆಯಲ್ಲಿ ಅಭಿವೃದ್ಧಿ ಕಾಣುವ ವರ್ಷ. ಈ ವರ್ಷವು ಸ್ವಯಂ ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸುತ್ತದೆ. ಕಲಾವಿದರು ಮತ್ತು ರಚನೆಕಾರರಿಗೆ ವಿಶೇಷವಾಗಿ ಮಹತ್ವ ತಂದುಕೊಡುವ ವರ್ಷ ಇದಾಗಿದೆ. ಸ್ವಯಂ-ಅನುಮಾನವನ್ನು ಹೋಗಲಾಡಿಸಿದರೆ ಕೆಲಸಗಳಲ್ಲಿ ಪ್ರಗತಿ ಕಾಣಬಹುದಾಗಿದೆ.

ಯಾವುದೇ ತಿಂಗಳ 4, 13, 22 ಮತ್ತು 31 ರಂದು ಜನಿಸಿದ ಜನರು ಸಂಖ್ಯೆ 4 ಎಂದು ಹೇಳಲಾಗುತ್ತದೆ. ಈ ವರ್ಷ ನಿಮಗೆ ದೀರ್ಘಾವಧಿಯ ಯೋಜನೆಗಳನ್ನು ಹಾಕಿಕೊಳ್ಳಲು ಪ್ರಶಸ್ತ ವರ್ಷವಾಗಿದೆ. ಯಾವುದೇ ಉತ್ತಮ ಕೆಲಸ ಮಾಡಲು ಭದ್ರವಾದ ಅಡಿಪಾಯವನ್ನು ಸೃಷ್ಟಿಸಿಕೊಳ್ಳಲು ಇದು ನಿಮಗೆ ಉತ್ತಮ ವರ್ಷವಾಗಿದ್ದು, ಧೈರ್ಯದಿಂದ ಮುಂದಿನ ಹೆಜ್ಜೆ ಇಡಬಹುದಾಗಿದೆ.

ಯಾವುದೇ ತಿಂಗಳ ದಿನಾಂಕ 5, 14 ಮತ್ತು 23 ರಂದು ಜನಿಸಿದ ಜನರು ಸಂಖ್ಯೆ 5 ಎಂದು ಹೇಳಲಾಗುತ್ತದೆ. ವೈಯಕ್ತಿಕ ವಿಕಸನಕ್ಕೆ ಹೇಳಿ ಮಾಡಿದ ವರ್ಷವಿದು. ಹೊಸ ಹೊಸ ಅನುಭವಗಳನ್ನು ಪಡೆದುಕೊಳ್ಳುವಿರಿ. ವರ್ಷಾಂತ್ಯದ ವೇಳೆಗೆ, ಅನೇಕ ವ್ಯಕ್ತಿಗಳು ನಿಮಗೆ ಪರಿಚಯವಾಗಲಿದ್ದು, ನೀವು ವರ್ಷವಿಡೀ ಸಾಧಿಸಿರುವ ಬೆಳವಣಿಗೆಯ ಬಗ್ಗೆ ಶ್ಲಾಘನೆಯ ಮಾತುಗಳನ್ನಾಡುವುದನ್ನು ಕೇಳಬಹುದು.

ಯಾವುದೇ ತಿಂಗಳ ದಿನಾಂಕ 6, 15 ಮತ್ತು 24 ರಂದು ಜನಿಸಿದ ಜನರು ಸಂಖ್ಯೆ 6 ಎಂದು ಹೇಳಲಾಗುತ್ತದೆ. ಸಾಮರಸ್ಯ ಮತ್ತು ಸಮತೋಲನ ಈ ವರ್ಷ ನಿಮಗೆ ಅತ್ಯಂತ ಮುಖ್ಯವಾಗಿದೆ. ಆದಾಗ್ಯೂ, ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳಲ್ಲಿ ಶಾಂತಿಯನ್ನು ಕಾಪಾಡುವುದು ಮುಖ್ಯವಾಗಿದೆ. ವಿನಾ ಕಾರಣ ಯಾವುದೇ ವಿವಾದಕ್ಕೆ ಸಿಲುಕದೇ ಸಾಮರಸ್ಯ ಕಾಪಾಡಿಕೊಂಡು ಹೋಗಬೇಕಿದೆ.

ಯಾವುದೇ ತಿಂಗಳ ದಿನಾಂಕ 7, 16 ಮತ್ತು 25 ರಂದು ಜನಿಸಿದ ಜನರು ಸಂಖ್ಯೆ 7 ಎಂದು ಹೇಳಲಾಗುತ್ತದೆ. ಆಧ್ಯಾತ್ಮಿಕ ಪ್ರಯಾಣವು ಈ ವರ್ಷ ನಿಮ್ಮ ಜೀವನದಲ್ಲಿ ಕೇಂದ್ರಬಿಂದುವಾಗಿದೆ. ಈ ವರ್ಷ ಆಳವಾದ ಮಟ್ಟದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲಿರುವಿರಿ. ಆಧ್ಯಾತ್ಮಿಕ ಜಾಗೃತಿ ಮತ್ತು ವೈಯಕ್ತಿಕ ಬೆಳವಣಿಗೆಯು ಕೂಡ ಈ ಸಾಲಿನಲ್ಲಿ ನಿಮಗೆ ಲಭ್ಯವಾಗಲಿದೆ.

ಯಾವುದೇ ತಿಂಗಳ ದಿನಾಂಕ 8, 17 ಮತ್ತು 26 ರಂದು ಜನಿಸಿದ ಜನರು ಸಂಖ್ಯೆ 8 ಎಂದು ಹೇಳಲಾಗುತ್ತದೆ. ಸಂಖ್ಯೆ 8 ಕರ್ಮ ಮತ್ತು ಪ್ರತಿಫಲವನ್ನು ಈ ವರ್ಷ ತೋರಿಸುತ್ತಿದೆ. ಹಿಂದಿನ ವರ್ಷಗಳ ಪ್ರಯತ್ನಗಳು ಫಲ ಕಾಣುವ ವರ್ಷ ಇದಾಗಿದೆ. ಯಶಸ್ಸು ಈ ವರ್ಷ ನಿಮಗೆ ಬೆನ್ನೆಲುಬಾಗಿ ನಿಲ್ಲಲಿದೆ.

ಯಾವುದೇ ತಿಂಗಳ ದಿನಾಂಕ 9, 18 ಮತ್ತು 27 ರಂದು ಜನಿಸಿದ ಜನರು ಸಂಖ್ಯೆ 9 ಎಂದು ಹೇಳಲಾಗುತ್ತದೆ. ಈ ವರ್ಷ ನಿಮಗೆ ಅತ್ಯಂತ ನಿರ್ಣಾಯಕವಾಗಿದೆ. ಹೊಸ ಆರಂಭಕ್ಕೆ ಇದು ಮುನ್ನುಡಿ ಬರೆಯಲಿದ್ದು, ಮುಂದಿನ ನಿಮ್ಮ ಯೋಜನೆಗಳ ಸಿದ್ಧತೆಯನ್ನು ನೀವು ಮಾಡಿಕೊಳ್ಳಲು ದಾರಿ ತೋರುವ ವರ್ಷವಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!