2024ನೇ ನೊಬೆಲ್​​ ಪ್ರಶಸ್ತಿ: ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ಒಲಿದ ಶಾಂತಿ ನೊಬೆಲ್​​ ಪ್ರಶಸ್ತಿ

nobel peace prize 2024
Spread the love

ನ್ಯೂಸ್ ಆ್ಯರೋ: ಜಪಾನಿನ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ಈ ಬಾರಿ 2024ನೇ ಶಾಂತಿ ನೊಬೆಲ್​​ ಪ್ರಶಸ್ತಿ ಬಂದಿದೆ. ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತ ಜಗತ್ತನ್ನು ಸಾಧಿಸುವ ಪ್ರಯತ್ನ ಹಾಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತೆ ಎಂದಿಗೂ ಬಳಸಬಾರದು ಎಂದು ಸಾಕ್ಷಿ ಸಾಕ್ಷ್ಯದ ಮೂಲಕ ಪ್ರದರ್ಶಿಸುತ್ತಿರುವುದಕ್ಕೆ ಪ್ರಶಸ್ತಿ ನೀಡಿಲಾಗಿದೆ.

ಹಿರೋಷಿಮಾ ಮತ್ತು ನಾಗಾಸಾಕಿಯಿಂದ ಪರಮಾಣು ಬಾಂಬ್​​ ದಾಳಿಯಿಂದ ಬದುಕಿ ಜನರ ಸ್ಥಿತಿಯನ್ನು ಕಂಡು, ಇನ್ನು ಮುಂದೆ ಯಾವ ದೇಶವು ಪರಮಾಣು ಬಾಂಬ್​​ ದಾಳಿಯನ್ನು ನಡೆಸಬಾರದು ಎಂದು ಈ ಕಂಪನಿ ಜಾಗೃತಿಯನ್ನು ಮೂಡಿಸಿದೆ. ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಯು ಈ ಪ್ರಶಸ್ತಿಯನ್ನು ನೀಡಿದೆ.

ನಾರ್ವೆಯ ಓಶೋದಲ್ಲಿ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ನಿಹಾನ್ ಹಿಡಾಂಕ್ಯೊ ಸಹ ಮುಖ್ಯಸ್ಥರು ಇದು ನಮ್ಮ ಗೆಲುವು, ನೊಬೆಲ್ ಗೆಲ್ಲುತ್ತೇನೆ ಎಂದು ಕನಸು ಕಂಡಿರಲಿಲ್ಲ ಎಂದು ಹೇಳಿದ್ದಾರೆ. ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಮೆರಿಕ ನಡೆಸಿದ ಪರಮಾಣು ದಾಳಿಯ ಸಂತ್ರಸ್ತರ ಬಗ್ಗೆ ಅನೇಕ ಸಾಕ್ಷ್ಯ ಚಿತ್ರಗಳನ್ನು ಮಾಡಿದೆ.

ಈ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಜತೆಗೆ ಮುಂದಿನ ದಿನಗಳಲ್ಲಿ ಯಾವ ದೇಶವು ಪರಮಾಣು ದಾಳಿಗಳನ್ನು ನಡೆಸಬಾರದು ಎಂದು ಹೇಳಿದೆ. ಪರಮಾಣು ನಿಶ್ಯಸ್ತ್ರೀಕರಣ ಮತ್ತು ಶಸ್ತ್ರಾಸ್ತ್ರ ನಿಯಂತ್ರಣದ ಪ್ರತಿಪಾದಕರಿಗೆ ಸಮಿತಿಯು ನೀಡಿದ ಮಾನ್ಯತೆ ಬಗ್ಗೆ ಈ ಮೂಲಕ ಧನ್ಯವಾದಗಳನ್ನು ತಿಳಿಸಿದೆ.

Leave a Comment

Leave a Reply

Your email address will not be published. Required fields are marked *

error: Content is protected !!