ಇನ್ಮುಂದೆ ಒಂದು ವೇಳೆ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಮರುಪಾವತಿಯಾಗುತ್ತಾ..? – ಏನ್ ಹೇಳುತ್ತೆ ಗೊತ್ತಾ ರೈಲ್ವೇ ಹೊಸ ರೂಲ್ಸ್….!

ನ್ಯೂಸ್ ಆ್ಯರೋ : ಎಷ್ಟೋ ಬಾರಿ ರೈಲ್ವೇ ಟಿಕೆಟ್ ನಾವು ಮಾಡಿರುತ್ತೇವೆ. ಆದರೆ ನಾವು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಿಲ್ಲದೆಯೋ ಅಥವಾ ಇನ್ನ್ಯಾವುದೋ ಕಾರಣಕ್ಕೆ ಟಿಕೆಟ್ ಕ್ಯಾನ್ಸಲ್ ಮಾಡಬೇಕಾಗುವ ಪ್ರಮೇಯ ಒದಗಿಬರುತ್ತದೆ. ಆ ಸಂದರ್ಭ ಕಟ್ಟಿದ ಹಣ ಕೂಡಾ ನಮಗೆ ಮರುಪಾವತಿಯಾಗುತ್ತದೆ. ಆದರೆ ಇನ್ನು ಮುಂದೆ ಕೂಡಾ ಅದೇ ರೀತಿ ಆಗುತ್ತಾ…!! ಹೊಸ ನಿಯಮ ಜಾರಿಗೆ ಬಂದಿದೆ. ಈ ನಿಯಮ ಏನು ಹೇಳುತ್ತೆ ನೋಡೋಣ.

ಭಾರತೀಯ ರೈಲ್ವೆ ಪ್ರಕಾರ ಚಾರ್ಟ್ ಸಿದ್ಧವಾದ ನಂತರ ಇಂಟರ್ನೆಟ್ ಟಿಕೆಟ್ ಅನ್ನು ರದ್ದುಗೊಳಿಸಲಾಗುವುದಿಲ್ಲ. ಆಗ ಬಳಕೆದಾರರು ಆನ್‌ಲೈನ್‌ನಲ್ಲಿ TDR ಅನ್ನು ಫೈಲ್ ಮಾಡಬಹುದು. IRCTC ಒದಗಿಸಿದ ಟ್ರ್ಯಾಕಿಂಗ್ ಸೇವೆಯ ಮೂಲಕ ಮರುಪಾವತಿ ಸ್ಥಿತಿಯನ್ನು ಚೆಕ್ ಮಾಡಬೇಕು. ರೈಲ್ವೆ ನಿಯಮಗಳ ಪ್ರಕಾರ ನೀವು ಟಿಡಿಆರ್ ಅನ್ನು ಸಲ್ಲಿಸಬಹುದು.

ಹೆಚ್ಚಿನ ಜನರು ರೈಲಿನ ಮೂಲಕವೇ ಪ್ರಯಾಣಿಸಲು ಇಷ್ಟ ಪಡುತ್ತಾರೆ. ರೈಲ್ವೆಯನ್ನು ಭಾರತದ ಸಾರಿಗೆಯ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ನಿಮ್ಮ ಬಳಿ ರೈಲಿನ ಕಂಫರ್ಮ್ ಟಿಕೆಟ್ ಇದ್ದು, ನೀವು ಆ ರೈಲಿನ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಬೇಕಾದರೆ ರೈಲಿನ ಚಾರ್ಟ್ ಸಿದ್ದಗೊಳಿಸುವ ಮೊದಲೇ ಮಾಡಬೇಕು. ಒಮ್ಮೆ ರೈಲಿನ ಚಾರ್ಟ್ ಸಿದ್ದವಾದ ಮೇಲೆ ಮತ್ತೆ ಟಿಕೆಟ್ ಕ್ಯಾನ್ಸಲ್ ಮಾಡುವುದು ಸಾಧ್ಯವಾಗುವುದಿಲ್ಲ. ಆದರೆ ನೀವು ಮರುಪಾವತಿಗೆ ಅರ್ಹರಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನೀವು ಟಿಕೆಟ್ ಠೇವಣಿ ರಸೀದಿಯನ್ನು (ಟಿಡಿಆರ್) ಸಲ್ಲಿಸಬಹುದು.

ಅಂತಹ ಸಂದರ್ಭಗಳಲ್ಲಿ, ಮರುಪಾವತಿಯು ವಲಯ ರೈಲ್ವೆ ವಿಭಾಗವನ್ನು ಅವಲಂಬಿಸಿರುತ್ತದೆ. TDR ಕ್ಲೈಮ್ ಅನ್ನು ಸಲ್ಲಿಸುವ ಕಾರಣವನ್ನು ಅವರು ಸ್ವೀಕರಿಸುತ್ತಾರೆಯೇ ಅಥವಾ ಇಲ್ಲವೇ ಎನ್ನುವುದರ ಮೇಲೆ ನಿಮಗೆ ರಿ ಫಂಡ್ ಆಗುತ್ತದೆಯೇ ಎನ್ನುವುದು ಕೂಡಾ ನಿರ್ಧಾರವಾಗುತ್ತದೆ.

ಏನು ಹೇಳುತ್ತದೆ ರೈಲ್ವೆ ನಿಯಮ ?

“ಬಳಕೆದಾರರು ಆನ್‌ಲೈನ್ ಟಿಡಿಆರ್ ಫೈಲ್ ಮಾಡಲು ಮತ್ತು IRCTC ಒದಗಿಸಿದ ಟ್ರ್ಯಾಕಿಂಗ್ ಸೇವೆಯ ಮೂಲಕ ಮರುಪಾವತಿ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ಸೂಚಿಸುತ್ತದೆ. ರೈಲ್ವೆ ನಿಯಮಗಳ ಪ್ರಕಾರ ನೀವು ಯಾವ ಪರಿಸ್ಥಿತಿಯಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಿದರೂ ಡಿಟಿಆರ್ ಸಲ್ಲಿಸಬಹುದು.

ಆದರೆ ನಿಮ್ಮ ಟಿಡಿಆರ್ ಸ್ವೀಕಾರ/ನಿರಾಕರಣೆ ಅಥವಾ ಮರುಪಾವತಿಗೆ ಸಂಬಂಧಿಸಿದ ನಿರ್ಧಾರವನ್ನು ಭಾರತೀಯ ರೈಲ್ವೇಯ ಚಾಲ್ತಿಯಲ್ಲಿರುವ ಮರುಪಾವತಿ ನಿಯಮಗಳ ಪ್ರಕಾರವೇ ತೆಗೆದುಕೊಳ್ಳಲಾಗುವುದು. ಸಂಬಂಧಪಟ್ಟ ವಲಯ ರೈಲ್ವೆ ಈ ನಿರ್ಧಾರ ತೆಗೆದುಕೊಳ್ಳುತ್ತದೆ.

ದೃಢೀಕರಿಸಿದ ರೈಲ್ವೇ ಟಿಕೆಟ್ ಅನ್ನು ರದ್ದುಗೊಳಿಸಿದ ನಂತರವಷ್ಟೇ TDR ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ನೀವು ಇ-ಟಿಕೆಟ್‌ ಅನ್ನು ಆನ್‌ಲೈನ್‌ನಲ್ಲಿ ರದ್ದುಗೊಳಿಸಬಹುದು ಮತ್ತು TDR ಅನ್ನು ನೋಂದಾಯಿಸಬಹುದು.

ರೈಲ್ವೇ ಕೌಂಟರ್‌ನಲ್ಲಿ ಟಿಕೆಟ್ ಖರೀದಿಸಿದ್ದರೆ, ಮೊದಲು ನಿಮ್ಮ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಿ ನಂತರ TDR ಅನ್ನು ನೋಂದಾಯಿಸಿಕೊಳ್ಳಬೇಕು. ನಿಮ್ಮ ಟಿಕೆಟ್ ಅನ್ನು ರದ್ದುಗೊಳಿಸಲು, ಹತ್ತಿರದ ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್‌ಗೆ ಭೇಟಿ ನೀಡಬಹುದು. “ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲು ಟಿಡಿಆರ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸದ ಹೊರತು ಕನ್ಫರ್ಮ್ ಆದ ಟಿಕೆಟ್‌ಗಳಿಗೆ ಯಾವುದೇ ಮರುಪಾವತಿ ಇರುವುದಿಲ್ಲ.

ಆದರೆ, RAC ಟಿಕೆಟ್‌ಗಳಿಗಾಗಿ, ರೈಲು ಹೊರಡುವ 30 ನಿಮಿಷಗಳ ಮೊದಲು ಟಿಕೆಟ್ ಅನ್ನು ರದ್ದುಗೊಳಿಸಿ, TDR ಅನ್ನು ಸಲ್ಲಿಸಬೇಕು” ಚಾರ್ಟ್ ಸಿದ್ಧಪಡಿಸಿದ ನಂತರ, ರೈಲು ಟಿಕೆಟ್‌ಗಳ ರದ್ದತಿಯ ಸಂದರ್ಭದಲ್ಲಿ ಮರುಪಾವತಿಗಾಗಿ TDR ಅನ್ನು ಮಾತ್ರ ಬಳಸಬೇಕು. ಚಾರ್ಟ್ ಸಿದ್ಧಪಡಿಸುವ ಮೊದಲು ರೈಲ್ವೆ ಟಿಕೆಟ್ ರದ್ದುಗೊಳಿಸಿದರೆ, TDR ಅನ್ನು ಸಲ್ಲಿಸಬೇಕಾಗಿಲ್ಲ.