ವಿಜಯ್ ಮಲ್ಯ ಸಂಪೂರ್ಣ ಆಸ್ತಿ ‌ಜಪ್ತಿಗೆ ಸುಪ್ರೀಂ ಅನುಮತಿ ‌- ಮಲ್ಯ ಪರ ವಕೀಲರು ನುಡಿದ ಆ ಮಾತೇ ಜಪ್ತಿಯಾಗಲು ಕಾರಣ. ಏನದು?

ವಿಜಯ್ ಮಲ್ಯ ಸಂಪೂರ್ಣ ಆಸ್ತಿ ‌ಜಪ್ತಿಗೆ ಸುಪ್ರೀಂ ಅನುಮತಿ ‌- ಮಲ್ಯ ಪರ ವಕೀಲರು ನುಡಿದ ಆ ಮಾತೇ ಜಪ್ತಿಯಾಗಲು ಕಾರಣ. ಏನದು?

ನ್ಯೂಸ್ ಆ್ಯರೋ‌ : ಭಾರತದ ಹಲವು ಬ್ಯಾಂಕ್‌ ಗಳಿಗೆ ಪಂಗನಾಮ‌ ಹಾಕಿ ಪರಾರಿಯಾಗಿದ್ದ ಉದ್ಯಮಿ ವಿಜಯ್‌ ಮಲ್ಯಗೆ ಸುಪ್ರೀಂ ಕೋರ್ಟ್‌ ಆಘಾತ ನೀಡಿದೆ. ವಿಜಯ್‌ ಮಲ್ಯ ಅವರನ್ನು ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿದ್ದ ಮುಂಬೈ ಕೋರ್ಟ್‌ ಅದರ ಬೆನ್ನಲ್ಲಿಯೇ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೂಡ ಅನುಮತಿ ನೀಡಿತ್ತು.

ಆದರೆ ಮುಂಬೈ ಕೋರ್ಟ್‌ನ ಈ ಆದೇಶದ ವಿರುದ್ಧ ವಿಜಯ್‌ ಮಲ್ಯ ಸುಪ್ರೀಂ ಕೋರ್ಟ್‌ನ ಕದ ತಟ್ಟಿದ್ದರು. ಅದರೆ, ವಿಜಯ್‌ ಮಲ್ಯಗೆ ಸುಪ್ರೀಂ ಕೋರ್ಟ್‌ನಲ್ಲೂ ರಿಲೀಫ್‌ ಸಿಕ್ಕಿಲ್ಲ. ವಿಜಯ್‌ ಮಲ್ಯ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡುವುದರೊಂದಿಗೆಸ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಇನ್ನಷ್ಟು ಸರಾಗವಾಗಿದೆ.

ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಮುಂಬೈ ಕೋರ್ಟ್‌ ಘೋಷಣೆ ಮಾಡಿದ ಅದರ ಪ್ರಕ್ರಿಯೆ ಭಾಗವಾಗಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಿತ್ತು. ಆದರೆ, ತಮ್ಮನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಿದ ಮುಂಬೈ ಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಇವರ ಅರ್ಜಿಯನ್ನು ವಜಾ ಮಾಡುವುದರೊಂದಿಗೆ ಮಲ್ಯರನ್ನು ಸುಪ್ರೀಂ ಕೋರ್ಟ್‌ ಕೂಡ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿದ್ದು ಮಾತ್ರಲ್ಲದೆ, ಅವರ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳೋದಕ್ಕೂ ಅನುಮತಿ ನೀಡಿದಂತಾಗಿದೆ.

ಒಂದೇ ಅರ್ಜಿಯ ನಿರ್ಧಾರದೊಂದಿಗೆ ಮಲ್ಯಗೆ ಎರಡು ದೊಡ್ಡ ಶಾಕ್‌ ಸಿಕ್ಕಿದೆ. ಒಂದೆಡೆ ಆರ್ಥಿಕ ಅಪರಾಧಿಯಾಗಿ ಅವರು ಉಳಿಯಲಿದ್ದರೆ, ಅವರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಇನ್ನೂ ಅಚ್ಚರಿಯ ಸಂಗತಿ ಏನೆಂದರೆ, ಸುಪ್ರೀಂ ಕೋರ್ಟ್‌ ವಿಚಾರಣೆಯ ವೇಳೆ ಮಲ್ಯ ಪರ ವಕೀಲರನ್ನು ಹಲವು ವಿಚಾರದಲ್ಲಿ ಪ್ರಶ್ನೆ ಮಾಡಿತು. ಈ ವೇಳೆ ತಮ್ಮ ಕಕ್ಷಿದಾರ ಈ ಕುರಿತಾಗಿ ಯಾವುದೇ ರೀತಿಯ ಸಂಪರ್ಕದಲ್ಲಿಲ್ಲ ಎಂದರು. ಇದರ ಬೆನ್ನಲ್ಲಿಯೇ ಸುಪ್ರೀಂ ಕೋರ್ಟ್‌ ಅವರ ಅರ್ಜಿಯನ್ನು ವಜಾ ಮಾಡುವ ತೀರ್ಮಾನ ಮಾಡಿತು.

ಈ ವಿಚಾರದಲ್ಲಿ ಅರ್ಜಿದಾರರಿಂದ ಯಾವುದೇ ಸೂಚನೆಗಳನ್ನು ಪಡೆಯುತ್ತಿಲ್ಲ ಎಂದು ಮಲ್ಯ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು, ನಂತರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸಿದೆ. ಅರ್ಜಿದಾರರು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದಲ್ಲಿ ಹೇಳಿದ ಈ ಹೇಳಿಕೆಯನ್ನು ಪರಿಗಣಿಸಿ, ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ರಾಜೇಶ್ ಬಿಂದಾಲ್ ಅವರ ಪೀಠವು ಪ್ರಾಸಿಕ್ಯೂಷನ್ ಮಾಡದಿರುವ ಅರ್ಜಿಯನ್ನು ವಜಾಗೊಳಿಸಿದ್ದು, ವಿಜಯ್ ಮಲ್ಯ ಅವರಿಗೆ ಸಂಕಟ ತಂದಿಕ್ಕಿದೆ.

Related post

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ ಸುತ್ತ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ…

ನ್ಯೂಸ್‌ ಆ್ಯರೋ : ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಇದೀಗ ಜೀವ ಬೆದರಿಕೆಯೊಡ್ಡಿ ಇ ಮೇಲ್‌ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕಳೆದ ವರ್ಷ…
ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ ಉದ್ಘಾಟಿಸಿ ಪೋಷಕರಿಗೆ ಕಿವಿಮಾತು ಹೇಳಿದ್ದೇನು?

ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ…

ನ್ಯೂಸ್‌ ಆ್ಯರೋ : ಸರ್ಕಾರಿ ಶಾಲೆ ಉಳಿವಿಗಾಗಿ ಮಕ್ಕಳು, ಗ್ರಾಮಸ್ಥರು ಹೋರಾಡುವ ಕಥೆಯನ್ನು ಸಿನಿಮಾ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ನಾನು…
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ ಸಾಧ್ಯತೆ, ಪಕ್ಷಗಳಲ್ಲಿ ಚಟುವಟಿಕೆ ಬಿರುಸು

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ…

ನ್ಯೂಸ್‌ ಆ್ಯರೋ : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ತಿಂಗಳ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಮೇ…

Leave a Reply

Your email address will not be published. Required fields are marked *