Shraddha Walker murder case : 6,600 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ, ಶ್ರದ್ಧಾ ದೇಹವನ್ನು ಕತ್ತರಿಸಲು ಗರಗಸ, ಎರಡು ಚಾಕು ಬಳಸಿದ್ದ ಪಾಪಿ

Shraddha Walker murder case : 6,600 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ, ಶ್ರದ್ಧಾ ದೇಹವನ್ನು ಕತ್ತರಿಸಲು ಗರಗಸ, ಎರಡು ಚಾಕು ಬಳಸಿದ್ದ ಪಾಪಿ

ನ್ಯೂಸ್ ಆ್ಯರೋ : ದೇಶಾದ್ಯಂತ ಭಾರೀ ಸುದ್ದಿ ಮತ್ತು ಆಕ್ರೋಶಕ್ಕೆ ಕಾರಣವಾಗಿದ್ದ ಶ್ರದ್ಧಾ ವಾಲ್ಕರ್​ ಕೊಲೆಗೆ ಸಂಬಂಧಿಸಿದಂತೆ ಭಯಾನಕ ಮಾಹಿತಿ ಚಾರ್ಜ್ ಶೀಟ್ ನಲ್ಲಿ ಬಯಲಾಗಿದೆ. ಶ್ರದ್ಧಾಳನ್ನು ಕೊಂದು ದೇಹವನ್ನು 35 ತುಂಡುಗಳಾಗಿ ಮಾಡಲು ಒಂದು ಗರಗಸ ಹಾಗೂ ಎರಡು ಚಾಕು ಬಳಸಿಕೊಂಡಿದ್ದೇನೆ ಎಂಬುದಾಗಿ ಕೊಲೆಗಾರ ಅಫ್ತಾಬ್​ ಪೂನಾವಾಲ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

ಇದೀಗ ಘಟನೆಯ ಕುರಿತು 6,600 ಪುಟಗಳ ಚಾರ್ಜ್ ಶೀಟ್ ನಲ್ಲಿ ಇನ್ನೂ ಅನೇಕ ಭಯಾನಕ ವಿವರಗಳು ಬಹಿರಂಗವಾಗಿದೆ.

ಶ್ರದ್ಧಾಳನ್ನು ಕೊಲೆ ಮಾಡಿದ್ದ ಆಕೆಯ ಲಿವ್‌ಇನ್ ಪಾರ್ಟ್ನರ್ ಅಫ್ತಾಬ್ ಪೂನಾವಾಲ ಆಕೆಯ ಮೂಳೆಗಳನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿದ್ದ. ಮೇ 18 ರಂದು ಅಫ್ತಾಬ್ ಕೊಲೆ ಮಾಡಿದ ಬಳಿಕ ಝೊಮಾಟೋದಿಂದ ಚಿಕನ್ ರೋಲ್ ಅನ್ನು ತರಿಸಿಕೊಂಡು ಊಟ ಮಾಡಿದ್ದ ಎಂದು ಉಲ್ಲೇಖಿಸಲಾಗಿದೆ. ಜತೆಗೆ ಅರೋಪಿ ಅಫ್ತಾಬ್​ ಹಲವು ಬಾರಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿರುವುದೂ ಗೊತ್ತಾಗಿದೆ.

ಆರೋಪಿ ಅಪ್ತಾಬ್​ ಪೊಲೀಸರಿಗೆ ಸೆರೆ ಸಿಕ್ಕಿದ ಬಳಿಕ ನಡೆದ ವಿಚಾರಣೆಯಲ್ಲಿ ತನಿಖಾಧಿಕಾರಿಗಳದ್ದೇ ದಾರಿ ತಪ್ಪಿಸಲು ಯತ್ನಿಸಿದ್ದ. ಶ್ರದ್ಧಾಳ ಮೂಳೆಯನ್ನು ಸುಟ್ಟು ಬಿಸಾಕಿದ್ದೇನೆ ಎಂದು ಹೇಳಿದ್ದೆ. ಅದೇ ರೀತಿ ನಾನು ಹಿಂದೆ ನೀಡಿರುವ ಹೇಳಿಕೆಗಳು ಸಂಪೂರ್ಣವಾಗಿ ಸತ್ಯವಲ್ಲ ಎಂಬುದಾಗಿ ಹೇಳಿರುವುದು ಚಾರ್ಜ್​ಶೀಟ್​ನಲ್ಲಿ ದಾಖಲಾಗಿದೆ.

ಆರೋಪಿ ಹೇಳಿದ್ದೇನು?

ಸಂಜೆ 7.45 ನಿಮಿಷಕ್ಕೆ ನಾನು ಶ್ರದ್ಧಾಳನ್ನು ಕೊಲೆ ಮಾಡಿದ್ದೆ. ಬಳಿಕ 60 ಅಡಿ ದೂರದ ರಸ್ತೆಯಲ್ಲಿರುವ ಹಾರ್ಡ್​ವೇರ್​ ಅಂಗಡಿಗೆ ತೆರಳಿ ಒಂದು ಗರಗಸ ಹಾಗೂ ಎರಡು ಚಾಕುವನ್ನು ಖರೀದಿಸಿ ತಂದಿದ್ದೆ. ಬಳಿಕ ಶ್ರದ್ಧಾಳ ದೇಹವನ್ನು ಬಾತ್​ರೂಮ್​ಗೆ ತೆಗೆದುಕೊಂಡು ಹೋಗಿ ಒಂದೊಂದೇ ಭಾಗವನ್ನು ಕತ್ತರಿಸಲು ಆರಂಭಿಸಿದೆ. ಮೊದಲಿಗೆ ಮಣಿಕಟ್ಟಿನ ಭಾಗವನ್ನು ಕತ್ತರಿಸಲು ಆರಂಭಿಸಿದ್ದೆ. ಈ ವೇಳೆ ನನ್ನ ಕೈಗೂ ಗಾಯವಾಯಿತು ಎಂದು ಅಫ್ತಾಬ್ ನೀಡಿರುವ ಹೇಳಿಕೆ ಚಾರ್ಜ್​ಶೀಟ್​ನಲ್ಲಿ ದಾಖಲಾಗಿದೆ.

ಕೊಲೆ ಮಾಡಿದ ದಿನವೇ ಶ್ರದ್ಧಾಳ ಮೃತದೇಹದ ತೊಡೆ ಭಾಗವನ್ನು ಕಾಡೊಂದರಲ್ಲಿ ಎಸೆದಿದ್ದೆ. ನಂತರದ ನಾಲ್ಕೈದು ದಿನಗಳಲ್ಲಿ ದೇಹವನ್ನು 17 ತುಂಡುಗಳಾಗಿ ತುಂಡರಿಸಿದೆ. ಬಳಿಕ ಅವುಗಳನ್ನು ಫ್ರಿಜ್​ನಲ್ಲಿ ಇಟ್ಟಿದ್ದೆ. ನನಗೆ ಸಮಯ ಸಿಕ್ಕಾಗೆಲ್ಲ ಒಂದೊಂದೇ ಭಾಗಗಳನ್ನು ಎಸೆದು ಬರುತ್ತಿದ್ದೆ ಎಂದು ಆತ ಹೇಳಿರುವುದು ಚಾರ್ಜ್​ಶೀಟ್​ನಲ್ಲಿ ದಾಖಲಾಗಿದೆ.

ಕಳೆದ ಜನವರಿ 24ರಂದು ಡೆಲ್ಲಿ ಪೊಲೀಸರು 6629 ಪುಟಗಳ ಚಾರ್ಜ್​ಶೀಟ್​ ಅನ್ನು ಕೋರ್ಟ್​ಗೆ ಸಲ್ಲಿಸಿದ್ದರು. ಜತೆಗೆ ಅಫ್ತಾಬ್​ನ ಹೇಳಿಕೆಗಳ ವಿಡಿಯೊವನ್ನು ಕೂಡ ಸಲ್ಲಿಕೆ ಮಾಡಲಾಗಿತ್ತು.

ಕಳೆದ ವರ್ಷ ಮೇ ತಿಂಗಳಿನಲ್ಲಿ ಶ್ರದ್ಧಾ ವಾಕರ್ ಮತ್ತು ಆಫ್ತಾಬ್ ಪೂನಾವಾಲಾ ದೆಹಲಿಗೆ ತೆರಳಿದ್ದರು. ಆದರೆ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿತ್ತು. ತಮ್ಮ ಖರ್ಚು ವೆಚ್ಚಗಳು ಹಾಗೂ ಅಫ್ತಾಬ್ ಗೆ ಇತರ ಯುವತಿಯರೊಂದಿಗಿದ್ದ ಸಂಬಂಧದ ಬಗ್ಗೆ ಆಗಾಗ ಜಗಳವಾಗುತ್ತಿತ್ತು. ಆತನಿಗೆ ದೆಹಲಿಯಿಂದ ದುಬೈ ತನಕವೂ ಗೆಳತಿಯರಿದ್ದರು ಎನ್ನಲಾಗಿದೆ.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *