
ನನ್ನ ತಲೆಗೆ 10 ಕೋಟಿ ರೂ. ಬೇಡ, 10 ರೂ. ಸಾಕು! – ಹಿಂದೂ ಧರ್ಮ ಹೀಗಳೆದ ಉದಯನಿಧಿ ಸ್ಟಾಲಿನ್ ಹೀಗೆ ಹೇಳಿದ್ಯಾಕೆ?
- ರಾಷ್ಟ್ರೀಯ ಸುದ್ದಿ
- September 5, 2023
- No Comment
- 137
ನ್ಯೂಸ್ ಆ್ಯರೋ : ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಪುತ್ರ, ಸಚಿವ ಉದಯನಿಧಿ ಸ್ಟಾಲಿನ್ ಅವರ ತಲೆಗೆ ಅಯೋಧ್ಯೆಯ ಪರಮಹಂಸ ಆಚಾರ್ಯ 10 ಕೋಟಿ ರೂ. ನಗದು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಹೇಳಿಕೆ ನೀಡಿರುವ ಉದಯನಿಧಿ ನನ್ನ ತಲೆಗೆ 10 ರೂ. ಬಾಚಣಿಗೆ ಸಾಕು ಎಂದಿದ್ದಾರೆ.
ಬೆದರಿಕೆಗೆ ಬಗ್ಗಲ್ಲ
ತಮಿಳುನಾಡಿಗೆ ಜೀವನವನ್ನೇ ಮುಡಿಪಾಗಿಟ್ಟ ಕರುಣಾನಿಧಿ ಅವರ ಮೊಮ್ಮಗನಾದ ನಾನು ಇಂತಹ ಬೆದರಿಕೆಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ಚಾಪ್ ಅಥವಾ ಸ್ಲೈಸ್ ಎಂಬ ಪದಕ್ಕೆ ತಮಿಳಿನಲ್ಲಿ ಕೂದಲು ಬಾಚುವುದು ಎಂಬರ್ಥವಿದೆ. ಹೀಗಾಗಿ ನನ್ನ ಕೂದಲು ಬಾಚಲು 10 ರೂಪಾಯಿಯ ಬಾಚಣಿಗೆ ಸಾಕು ಎಂದು ಹೇಳಿದ್ದಾರೆ.
ಉದಯನಿಧಿ ಹೇಳಿದ್ದೇನು?
ಶನಿವಾರ ಚೆನ್ನೈಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಉದಯನಿಧಿ, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿರುದ್ದವಾಗಿದೆ. ನಾವು ಡೆಂಗ್ಯೂ, ಮಲೇರಿಯಾ, ಕೊರೊನಾವನನು ಎದುರಿಸಬಾರದು. ಅವುಗಳನ್ನು ಶಾಶ್ವತವಾಗಿ ತೊಡೆದುಹಾಕಬೇಕು. ಅದರಂತೆ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಇದು ದೇಶಾದ್ಯಂತ ಹಲವರ ಕೆಂಗಣ್ಣಿಗೆ ಕಾರಣವಾಗಿದೆ.
ಆಚಾರ್ಯ ಮಾಡಿದ ಘೋಷಣೆಯೇನು?
ವಿವಾದಾತ್ಮಕವಾಗಿ ಹೇಳಿಕೆ ನೀಡಿರುವ ಉದಯನಿಧಿ ತಲೆಯನ್ನು ಕಡಿದವರಿಗೆ 10 ಕೋಟಿ ರೂ. ಕೊಡುತ್ತೇನೆ. ಆತನನ್ನು ಕೊಲ್ಲುವವರು ಯಾರೂ ಇಲ್ಲದಿದ್ದರೆ ನಾನೇ ಕೊಲೆ ಮಾಡುವುದಾಗಿ ಪರಮಹಂಸ ಆಚಾರ್ಯ ಸೋಮವಾರ ಘೋಷಿಸಿದ್ದರು.