
‘ನಾನು ಭಾರತೀಯನೇ, ನನ್ನನ್ನೂ ಹಿಂದೂ ಎಂದು ಕರೆಯಿರಿ’ – ಹೀಗ್ಯಾಕಂದ್ರು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್..?
- ರಾಷ್ಟ್ರೀಯ ಸುದ್ದಿ
- January 29, 2023
- No Comment
- 197
ನ್ಯೂಸ್ ಆ್ಯರೋ : ಸಿನಿ ತಾರೆಯರು ರಾಜಕಾರಣಿಗಳು ಸದಾ ಒಂದೊಂದು ಹೇಳಿಕೆಯಿಂದ ವಿವಾದಕ್ಕೆ, ಮೆಚ್ಚುಗೆಗೆ ಗುರಿಯಾಗುತ್ತಲೇ ಇರುತ್ತಾರೆ. ಸದ್ಯ ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. ಅವರು ನೀಡಿದ ಹೇಳಿಕೆಯೇನು, ಈ ಹೇಳಿಕೆ ನೀಡಲು ಕಾರಣವೇನು? ಈ ವರದಿ ಓದಿ.
ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಅವರು ‘ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯನ್ನು ಕೂಡ ಹಿಂದೂ ಎಂದು ಕರೆಯಬೇಕು. ನನ್ನನ್ನೂ ಕೂಡ ಹಿಂದೂ ಎಂದು ಕರೆಯಬೇಕು’ ಎಂದಿದ್ದಾರೆ. ಕೇರಳದ ತಿರುವನಂತಪುರದಲ್ಲಿ ಉತ್ತರ ಅಮೆರಿಕದ ಕೇರಳ ಹಿಂದೂಗಳು ಆಯೋಜಿಸಿದ್ದ, ಹಿಂದೂ ಸಮಾವೇಶದಲ್ಲಿ ಭಾಗಿಯಾದ ಆರಿಫ್ ಖಾನ್, ʻನೀವು ನನ್ನನ್ನು ಕಡ್ಡಾಯವಾಗಿ ಹಿಂದೂ ಎಂದು ಕರೆಯಬೇಕುʼ ಈ ಹಿಂದೆ ಸೈಯದ್ ಅಹ್ಮದ್ ಖಾನ್ ಈ ಮಾತನ್ನು ಹೇಳಿದ್ದರು ಎಂದು ಅವರ ಮಾತುಗಳನ್ನು ಸ್ಮರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಆರಿಫ್ ಮೊಹಮ್ಮದ್ ಖಾನ್ ‘ತನ್ನ ಗಂಭೀರ ಆರೋಪ ಇರುವುದು ಆರ್ಯ ಸಮಾಜದ ಸದಸ್ಯರ ಮೇಲೆ. ನೀವು ನನ್ನನ್ನು ಹಿಂದೂ ಎಂದು ಗುರುತಿಸುತ್ತಿಲ್ಲ. ಹಿಂದೂ ಎನ್ನುವ ಪದವನ್ನು ನಾನು ಧಾರ್ಮಿಕ ಸೂಚಕ ಎಂದು ಭಾವಿಸುವುದಿಲ್ಲ. ಬದಲಾಗಿ ಹಿಂದೂ ಎಂಬುದು ಭೌಗೋಳಿಕ ಪದವಾಗಿದೆ. ಭಾರತದಲ್ಲಿ ಹುಟ್ಟಿ, ಇಲ್ಲಿನ ಅನ್ನ ತಿಂದು , ಇಲ್ಲಿನ ಪವಿತ್ರ ನದಿಯ ನೀರನ್ನು ಕುಡಿಯುವ ನಾನು ನನ್ನನ್ನು ಹಿಂದೂ ಎಂದು ಕರೆದುಕೊಳ್ಳಲು ಬಯಸುತ್ತೇನೆ’ ಎಂದಿದ್ದಾರೆ.