
ಫ್ಯಾಷನ್ ಶೋ ಪ್ರದರ್ಶನಕ್ಕೆ ವೇದಿಕೆಯಾದ ಮೆಟ್ರೋ, ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ – ನಿಜಕ್ಕೂ ಅಲ್ಲಿ ಏನಾಗಿತ್ತು ಗೊತ್ತಾ?
- ರಾಷ್ಟ್ರೀಯ ಸುದ್ದಿ
- September 2, 2023
- No Comment
- 60
ನ್ಯೂಸ್ ಆ್ಯರೋ : ನಗರಗಳಲ್ಲಿನ ವಾಹನ, ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಜಾರಿಯಾಗಿರುವ ಮೆಟ್ರೋ ಕೆಲವು ದಿನಗಳಿಂದ ಕೆಟ್ಟ ಕಾರಣಗಳಿಗೆ ಸುದ್ದಿಯಾಗುತ್ತಿದೆ. ದಿಲ್ಲಿ ಮೆಟ್ರೋದಲ್ಲಿ ಕೆಲವು ದಿನಗಳ ಹಿಂದೆ ಒಂದಿಬ್ಬರು ವಿಲಕ್ಷಣ ವರ್ತನೆ ತೋರಿ ಪ್ರಯಾಣಿಕರಿಗೆ ಮುಜುಗರ ತಂದಿಟ್ಟಿದ್ದರು. ಇದೀಗ ನಾಗಪುರ ಮೆಟ್ರೋ ಇನ್ನೊಂದು ರೀತಿಯಲ್ಲಿ ಸದ್ದು ಮಾಡುತ್ತಿದೆ.
ಫ್ಯಾಷನ್ ಶೋ
ಅಷ್ಟಕ್ಕೂ ಆಗಿದ್ದೇನು ಗೊತ್ತ? ನಾಗಪುರ ಮೆಟ್ರೋದೊಳಗೆ ಫ್ಯಾಷನ್ ಶೋ ಆಯೋಜಿಸಲಾಗಿತ್ತು. ಮಕ್ಕಳು, ಯುವಕ-ಯುವತಿಯರು ಬಣ್ಣ ಬಣ್ಣದ ಬಟ್ಟೆ ತೊಟ್ಟುಕೊಂಡು ಮೆಟ್ರೋ ಒಳಗೆ ಹೆಜ್ಜೆ ಹಾಕಿರುವ ವೀಡಿಯೋ ವೈರಲ್ ಆಗಿದೆ.
ಬೆಸ್ಟ್ ಫ್ಯಾಷನ್ ಡಿಸೈನರ್ ಇಂಡಿಯಾ ಆಯೋಜಿಸಿದ್ದ ಈ ವಿಭಿನ್ನ ಫ್ಯಾಷನ್ ಶೋ ಕೆಲವು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ್ದು ಸುಳ್ಳಲ್ಲ. ವೈರಲ್ ಆಗಿರುವ ಈ ವೀಡಿಯೋವನ್ನು ಸುಮಾರು 1.7 ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕಿಸಿದ್ದರೆ, 1.5 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ತರಹೇವಾರಿ ಕಮೆಂಟ್
ಗ್ರಾಹಕರನ್ನು ಸೆಳೆಯುವ ಹೊಸ ತಂತ್ರ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ಪ್ರಯಾಣಿಕರಿಗೆ ತೊಂದರೆಯಾಗದಂತೆ ಮಾಡಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಮಗದೊಬ್ಬರು ಈ ಫ್ಯಾಷನ್ ಶೋ ಉದ್ದೇಶವೇನು? ಎಂದು ಕೇಳಿದ್ದಾರೆ.
ಮುಂದಿನ ಶೋ ವಿಮಾನದಲ್ಲಿ ಎಂದು ಮತ್ತೊಬ್ಬರು ಊಹಿಸಿದ್ದಾರೆ. ಪ್ರಯಾಣಿಕರಿಗೆ ತೊಂದರೆ ಕೊಡುವ ಇಂತಹ ಕೆಲಸಕ್ಕೆ ಸರಕಾರ ಶಿಕ್ಷೆ ಕೊಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಈ ಭಿನ್ನ ಫ್ಯಾಷನ್ ಶೋ ಚರ್ಚೆ ಹುಟ್ಟು ಹಾಕಿದ್ದಂತು ಸುಳ್ಳಲ್ಲ.