ಮಗುವಿನ ಚಿಕಿತ್ಸೆಗೆ ₹11 ಕೋಟಿ ನೀಡಿ, ಹೆಸರು ಬಹಿರಂಗ ಪಡಿಸಬೇಡಿ ಎಂದ ಆಧುನಿಕ ಕರ್ಣ!; ಈ ವಿಚಿತ್ರ ಕತೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ!

ಮಗುವಿನ ಚಿಕಿತ್ಸೆಗೆ ₹11 ಕೋಟಿ ನೀಡಿ, ಹೆಸರು ಬಹಿರಂಗ ಪಡಿಸಬೇಡಿ ಎಂದ ಆಧುನಿಕ ಕರ್ಣ!; ಈ ವಿಚಿತ್ರ ಕತೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ!

ನ್ಯೂಸ್‌ ಆ್ಯರೋ : ಬೆನ್ನುಮೂಳೆಯ ಸ್ನಾಯು ಕ್ಷೀಣತೆ ರೋಗದಿಂದ ಬಳಲುತ್ತಿರುವ 15 ತಿಂಗಳ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಬರೊಬ್ಬರಿ ₹17.5 ಕೋಟಿ ರೂ. ಅವಶ್ಯಕತೆಯಿದೆ. ಅದಕ್ಕಾಗಿ ಪೋಷಕರು ಸರ್ಕಾರ ಹಾಗೂ ಕ್ರೌಡ್ ಫಂಡಿಂಗ್ ಸಹಾಯ ಕೋರಿದ್ದರು. ಆದರೆ ಈಗ ಹೆಸರು ಹೇಳಲಿಚ್ಚಿಸದ ಅನಾಮಧೇಯ ವ್ಯಕ್ತಿಯೊಬ್ಬ ₹11.6 ಕೋಟಿ ರೂ. ನೀಡಿ ಮಾನವೀಯ ಮೆರೆದಿದ್ದಾರೆ. ಈ ಸಹಾಯದಿಂದಾಗಿ ಮಗುವಿನ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.

11ಕೋಟಿ ಕೊಟ್ಟು ಹೆಸರು ಹೇಳದ ವ್ಯಕ್ತಿ

ಕೇರಳ ಮೂಲದ ದಂಪತಿಯ ಮಗು ನಿರ್ವಾನ್ ಅಪರೂಪದಲ್ಲಿ ಅಪರೂಪ ಎಂಬಂತಹ ಖಾಯಿಲೆಗೆ ತುತ್ತಾದಾಗ ಹೆಸರು ಹೇಳದ ವ್ಯಕ್ತಿ ಬರೊಬ್ಬರಿ 11 ಕೋಟಿ ರೂ. ಗಳನ್ನು ಕ್ರೌಡ್ ಫಂಡಿಂಗ್ ವೇದಿಕೆಗೆ ಹಸ್ತಾಂತರಿಸಿ ‘ನನಗೆ ಹೆಸರು ಅಥವಾ ಗೌರವ ಬೇಡ. ಅನಾರೋಗ್ಯದಿಂದ ಬಳಲುತ್ತಿರುವ ಮಗು ಗುಣಮುಖವಾದರೆ ಸಾಕು’ ಎಂದಿದ್ದಾರಂತೆ.

ಚಿಕಿತ್ಸೆಗೆ ಒಟ್ಟು ₹17 ಕೋಟಿ ಬೇಕಿದೆ

ಸದ್ಯ, ಮಗುವಿಗೆ 17.5 ಕೋಟಿ ರೂಪಾಯಿಗೂ ಹೆಚ್ಚು ಬೆಲೆಯ ಜೀನ್ ರಿಪ್ಲೇಸ್ಮೆಂಟ್ ಡ್ರಗ್ ಝೋಲ್ಗೆನ್ಸ್ಮಾ ಎಂಬ ಔಷಧವನ್ನು ನೀಡುವ ಅಗತ್ಯವಿದ್ದು, ಈ ಔಷದವನ್ನು ಅಮೆರಿಕದಿಂದ ತರಿಸಬೇಕಿದೆ. ಇದಕ್ಕಾಗಿ ಮಗುವಿನ ಪೋಷಕರು ಕ್ರೌಡ್ ಫಂಡಿಂಗ್ ನ ಮೊರೆ ಹೋಗಿದ್ದಾರೆ. ಮಗುವಿಗೆ ಏಳು ತಿಂಗಳೊಳಗೆ ಲಸಿಕೆ ಹಾಕುವ ಅಗತ್ಯವಿದೆ. ಮಗುವಿನ ತಂದೆ ಸಾರಂಗ್ ಮೆನನ್ ಮತ್ತು ತಾಯಿ ಅದಿತಿ ನಾಯರ್ ಕೂಟ್ನಾಡ್ ಮಲಾಲತ್‌ನಲ್ಲಿ ವಾಸಿಸುತ್ತಿದ್ದು, ಮುಂಬೈನಲ್ಲಿ ಎಂಜಿನಿಯರ್‌ಗಳಾಗಿದ್ದಾರೆ. ಇದೀಗ ಮಗುವಿಗೆ ಖಾಯಿಲೆಯಿರುವುದು ದೃಢಪಟ್ಟ ನಂತರ ಹಣ ಹೊಂದಿಸಲು ಪರದಾಡುತ್ತಿದ್ದಾರೆ.

ರೋಗ ದೃಢಪಟ್ಟಿದ್ದು ಯಾವಾಗ?

ಹುಟ್ಟುವಾಗ ನಿರ್ವಾನ್ ಎಲ್ಲಾ ಮಕ್ಕಳಂತೆಯೆ ಇದ್ದ. ಆದರೆ ಒಂದು ವರ್ಷವಾದರೂ ತಮ್ಮ ಮಗ ಕುಳಿತುಕೊಳ್ಳಲು ಮತ್ತು ನಿಲ್ಲಲು ಕಷ್ಟಪಡುತ್ತಿದ್ದರಿಂದ ಪೋಷಕರು ಪರೀಕ್ಷೆ ನಡೆಸಿದ್ದಾರೆ. ಮೊದಲ ಪರೀಕ್ಷೆಗಳಲ್ಲಿ, ನರದಲ್ಲಿ ಸಮಸ್ಯೆ ಇದೆ ಎಂದು ಮಾತ್ರ ಕಂಡುಬಂದಿತ್ತು. ಜೊತೆಗೆ ಮಗುವಿನ ಬೆಳವಣಿಗೆಯಲ್ಲಿ ಸಮಸ್ಯೆ ಕಂಡುಬಂದಿದ್ದರಿಂದ, ಡಿಸೆಂಬರ್ 19 ರಂದು ಮತ್ತೆ ಪರೀಕ್ಷೆ ನಡೆಸಲಾಯಿತು. ಜನವರಿ 6 ರಂದು ಮಗುವಿಗೆ ಎಸ್‌ಎಂಎ ಟೈಪ್ 2 ಇರುವುದು ದೃಢಪಟ್ಟಿತು. ಇದೀಗ ದುಬಾರಿ ಬೆಲೆಯ ಔಷಧಿಯ ಅಗತ್ಯವಿದ್ದಯ, ಎರಡು ವರ್ಷಕ್ಕಿಂತ ಮೊದಲು ಮಗುವಿಗೆ ಈ ಔಷಧವನ್ನು ನೀಡಿದರೆ ಮಾತ್ರ ಇದು ಉಪಯುಕ್ತವಾಗಿದೆ. ಇಲ್ಲದಿದ್ದರೆ ಪ್ರತಿದಿನ ರೋಗ ಉಲ್ಬಣಗೊಳ್ಳುತ್ತಾ ಹೊಗುತ್ತದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಕ್ರೌಡ್ ಫಂಡಿಂಗ್ ಮೂಲಕ ₹16 ಕೋಟಿ ಸಂಗ್ರಹ

ಸದ್ಯ, ಪೋಷಕರ ಹರಸಾಹಸದಿಂದಾಗಿ ಕ್ರೌಡ್ ಫಂಡಿಂಗ್ ನಿಂದ ಒಟ್ಟಾರೆಯಾಗಿ ಹಾಗೂ ಅನಾಮಧೇಯ ವ್ಯಕ್ತಿ ಕೊಟ್ಟ ₹11 ಕೋಟಿ ರೂ. ಹಣದಿಂದಾಗಿ ಒಟ್ಟಾರೆ 16 ಕೋಟಿ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ. ಇನ್ನುಳಿದಂತೆ ನಿರ್ವಾನ್ ಚಿಕಿತ್ಸೆಗೆ 1.3ಕೋಟಿ ರೂ. ಅಗತ್ಯವಿದ್ದು, ಪೋಷಕರು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರನ್ನು‌ ಭೇಟಿಯಾಗಿ ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಸಲ್ಲಿಸಿದ್ದಾರಂತೆ.

ಬೆನ್ನುಮೂಳೆ ಸ್ನಾಯು ಕ್ಷೀಣತೆಯ ಬಗ್ಗೆ ಇರಲಿ ಎಚ್ಚರಿಕೆ!

ಇದು ಮಕ್ಕಳಲ್ಲಿ ಕಂಡುಬರುವ ಅಪರೂಪದ ಕಾಯಿಲೆಯಾಗಿದೆ. ಈ ಕಾಯಿಲೆ ಆವರಿಸಿಕೊಂಡ ನಂತರ ಮಕ್ಕಳಿಗೆ ಸರಿಯಾಗಿ ನಡೆಯಲು, ಕುಳಿತಯಕೊಳ್ಳಲು ಕಷ್ಟವಾಗುತ್ತದೆ. ಜೊತೆಗೆ ದೇಹದ ಸ್ನಾಯು ಹಾಗೂ ನರಗಳನ್ನು ದುರ್ಬಲಗೊಳ್ಳುತ್ತದೆ. ಜೊತೆಗೆ ಮೆದುಳಿನ ನರಕೋಶಗಳು ಕ್ರಮೇಣ ಕೊಳೆಯುತ್ತ ಬರುತ್ತದೆ. ಸಮಯ ಕಳೆದಂತೆ ಬೆನ್ನಿನ ಸ್ನಾಯುಗಳು ಕ್ಷೀಣಿಸುತ್ತದೆ. ಈ‌ ಕಾಯಿಲೆಗೆ ಸೀಮಿತ ಅವದಿಯಲ್ಲಿ ಚಿಕಿತ್ಸೆ ನೀಡಬೇಕಾಗಿದ್ದು, ಚಿಕಿತ್ಸೆಗೂ ಕೂಡ ದುಬಾರಿ ವೆಚ್ಚ ಭರಿಸಬೇಕಾಗುತ್ತದೆ‌.

Related post

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 15-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಲೋನ್ ತೆಗೆದುಕೊಂಡಿರುವ ಜನರಿಗೆ ಲೋನ್ ನ ಮೊತ್ತವನ್ನು ಮರುಪಾವತಿಸುವಲ್ಲಿ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ…
ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 14-04-2024 ಭಾನುವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನೀವು ಧೀರ್ಘಕಾಲೀನ ಅನಾರೋಗ್ಯದಿಂದ ಬಳಲಬಹುದು. ಇಂದು ಯಾವುದೇ ಸಹಾಯವಿಲ್ಲದೆ, ನೀವು ಹಣವನ್ನು ಗಳಿಸುವಲ್ಲಿ ಸಾಮರ್ತ್ಯರಾಗಿರುತ್ತೀರಿ. ಯಾರಾದರೂ ನಿಮಗೆ ಹಾನಿ ಮಾಡಲು ಪ್ರಯತ್ನಿಸಬಹುದು – ಬಲವಾದ ಶಕ್ತಿಗಳು ನಿಮ್ಮ ವಿರುದ್ಧ…
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ NIA ಅಧಿಕಾರಿಗಳು

ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣ – ಇಬ್ಬರು ಬಂಧಿತ ಉಗ್ರರನ್ನು…

ನ್ಯೂಸ್ ಆ್ಯರೋ : ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಉಗ್ರರನ್ನು NIA ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಅಬ್ದುಲ್ ಮತೀನ್ ತಾಹಾ ಹಾಗೂ ಮುಜಾವಿರ್ ಹುಸೇನ್…

Leave a Reply

Your email address will not be published. Required fields are marked *