15 ವರ್ಷ ಪೂರೈಸಿದ ಸರ್ಕಾರಿ ವಾಹನಗಳು ಗುಜರಿಗೆ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಹತ್ವದ ಘೋಷಣೆ, ಹಳೆಯ ಖಾಸಗಿ ವಾಹನಗಳ ಮೇಲು ಕೇಂದ್ರ ಸರ್ಕಾರ ಕಣ್ಣು

ನ್ಯೂಸ್‌ ಆ್ಯರೋ : 15 ವರ್ಷ ಪೂರೈಸಿದ ಭಾರತ ಸರ್ಕಾರಕ್ಕೆ ಸೇರಿದ ಎಲ್ಲಾ ವಾಹನಗಳನ್ನು ಗುಜರಿಗೆ (ಸ್ಕ್ರ್ಯಾಪ್‌) ಹಾಕಲಾಗುವುದು. ಈ ಸಂಬಂಧ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಕಳುಹಿಸಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ನಾಗಪುರದಲ್ಲಿ ಶುಕ್ರವಾರ ವಾರ್ಷಿಕ ಕೃಷಿ-ವಿಷನ್, ಕೃಷಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ 15 ವರ್ಷ ಪೂರೈಸಿರುವ ಎಲ್ಲ ಸರ್ಕಾರಿ ವಾಹನಗಳನ್ನು ಸ್ಕ್ರ್ಯಾಪ್‌ ಮಾಡುವ ಕಡತಕ್ಕೆ ಗುರುವಾರ ಸಹಿ ಮಾಡಿದ್ದೇನೆ. ಕೇಂದ್ರ ಸರ್ಕಾರವು ಈ ನೀತಿಯನ್ನು ಎಲ್ಲ ರಾಜ್ಯಗಳಿಗೂ ಕಳುಹಿಸಿದ್ದು, ಅದನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಇದು ಬಸ್‌ಗಳು, ಟ್ರಕ್‌ಗಳು ಮತ್ತು ಕಾರುಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳನ್ನು ಒಳಗೊಂಡಿದೆ. ಮಾಲಿನ್ಯವನ್ನು ನಿಗ್ರಹಿಸಲು ಸರ್ಕಾರವು ಈ ವರ್ಷದ ಆರಂಭದಲ್ಲಿ ವಾಹನಗಳನ್ನು ಗುಜರಿಗೆ ನೀಡುವ ಕ್ರಮವನ್ನು ಘೋಷಿಸಿತು.

ಕಳೆದ ತಿಂಗಳು ವಾಹನಗಳ ಹಿಂಬದಿ ಸೀಟಿನಲ್ಲಿ ಕುಳಿತವರಿಗೂ ಸೀಟ್‌ ಬೆಲ್ಟ್‌ ಹಾಕುವ ಪ್ರಮುಖ ಯೋಜನೆಯನ್ನು ಗಡ್ಕರಿ ಘೋಷಿಸಿದ್ದರು. ವಾಹನ ಸ್ಕ್ರಾಪೇಜ್ ನೀತಿಯು ಹಳೆಯ ಮತ್ತು ಯೋಗ್ಯವಲ್ಲದ ವಾಹನಗಳನ್ನು ರಸ್ತೆಗಳಲ್ಲಿ ಆಧುನಿಕ ಮತ್ತು ಹೊಸ ವಾಹನಗಳನ್ನು ಗುಜರಿಗೆ ಹಾಕಬೇಕೆಂದು ಹೇಳುತ್ತದೆ. ಈ ನೀತಿಯು ಏಪ್ರಿಲ್ 1, 2022 ರಂದು ಜಾರಿಗೆ ಬಂದಿದೆ.

ದುಬಾರಿ ದಂಡ?:

20 ವರ್ಷ ಪೂರೈಸಿದ ಖಾಸಗಿ ವಾಹನಗಳನ್ನೂ ಕಡ್ಡಾಯ ಗುಜರಿಗೆ ಹಾಕುವ ಪ್ರಸ್ತಾಪವೂ ಕೇಂದ್ರ ಸರ್ಕಾರದ ಮುಂದಿದೆ. ಆದರೆ , ಅದರ ಜಾರಿಗೆ ಇನ್ನೂ ನಿರ್ದಿಷ್ಟ ಕಾಲಮಿತಿ ಜಾರಿಯಾಗಿಲ್ಲ. ಹೀಗೆ ಅವಧಿ ಮೀರಿದ ಸರ್ಕಾರಿ ಮತ್ತು ಖಾಸಗಿ ವಾಹನಗಳ ನೋಂದಣಿ ಪ್ರಮಾಣ ಪತ್ರ ನವೀಕರಣ ಶುಲ್ಕವು 8 ಪಟ್ಟು ಹೆಚ್ಚಾಗಲಿದೆ. ನವೀಕರಣ ವಿಳಂಬವಾದರೆ ಪ್ರತಿ ತಿಂಗಳೂ ದಂಡ ವಿಧಿಸುವುದು ಸೇರಿದಂತೆ ಹಲವು ಕಠಿಣ ನಿಯಮಗಳು ಅನ್ವಯವಾಗಲಿದೆ.

ಗುಜರಿಗೆ ಏಕೆ?:

ಹೊಸ ವಾಹನಗಳಿಗೆ ಹೋಲಿಸಿದರೆ ಹಳೆಯ ವಾಹನಗಳು ಶೇ 10-12ರಷ್ಟು ಹೆಚ್ಚು ವಾಯು ಮಾಲಿನ್ಯ ಉಂಟು ಮಾಡುತ್ತವೆ. ಇವುಗಳನ್ನು ನಿಷೇಧಿಸುವ ಮೂಲಕ ಮಾಲಿನ್ಯ ತಡೆಯುವುದರ ಜೊತೆಗೆ, ಇಂಧನ ವೆಚ್ಚ ಉಳಿಸಬಹುದು. ಹಳೆಯ ವಾಹನಗಳ ಸೂಕ್ತ ನಿರ್ವಹಣೆ ಯೋಜನೆ ಜಾರಿಯಾದರೆ, ಅದರಲ್ಲಿ ಅಂದಾಜು ₹ 10,000 ಕೋಟಿ ಹೊಸ ಬಂಡವಾಳ ಹೂಡಿಕೆಯಾಗುತ್ತದೆ. 5 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಲೆಕ್ಕಾಚಾರ ಕೇಂದ್ರ ಸರ್ಕಾರದ್ದು.

ಕರ್ನಾಟಕ ಮೊದಲ ಸ್ಥಾನ: ಸರ್ಕಾರಿ ಮತ್ತು ಖಾಸಗಿ ವಾಹನಗಳನ್ನು ಒಟ್ಟಾಗಿ ಸೇರಿಸಿದರೆ 15 ವರ್ಷಕ್ಕಿಂತ ಹೆಚ್ಚು ಅವಧಿ ಪೂರೈಸಿರುವ ರಾಜ್ಯಗಳ ಪೈಕಿ ಕರ್ನಾಟಕ ದೇಶದಲ್ಲೇ ನಂ 1 ಸ್ಥಾನದಲ್ಲಿದೆ. ಕಳೆದ ವರ್ಷ ಕೇಂದ್ರ ಸರ್ಕಾರ ಸಂಸತ್ತಿಗೆ ಸಲ್ಲಿಸಿದ ವರದಿ ಅನ್ವಯ ಕರ್ನಾಟಕದಲ್ಲಿ 15 ವರ್ಷ ಪೂರೈಸಿದ 70 ಲಕ್ಷ ವಾಹನಗಳು ಇವೆ. ನಂತರದ ಸ್ಥಾನಗಳಲ್ಲಿ ಉತ್ತರಪ್ರದೇಶ (56 ಲಕ್ಷ), ದೆಹಲಿ (50) ಇವೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *