
ವಿವಿಧ ಬ್ಯಾಂಕ್ ಗಳಲ್ಲಿ ಕೊಳೆಯುತ್ತಿರುವ ಈ ಕೋಟ್ಯಂತರ ರೂಪಾಯಿಗಳಿಗೆ ಅಡ್ರೆಸ್ಸೇ ಇಲ್ಲ!
- ಹಣಕಾಸು
- July 16, 2023
- No Comment
- 467
ನ್ಯೂಸ್ ಆ್ಯರೋ : ಇದೊಂಥರಾ ವಿಚಿತ್ರ ಪರಿಸ್ಥಿತಿ. ನಮ್ಮ ದೇಶದಲ್ಲಿ ಬಡತನ ಒಂದು ಕಡೆಯಾದರೆ ಇನ್ನೊಂದು ಕಡೆ ಕೋಟಿಗಟ್ಟಲೆ ಹಣ ವಾರಸುದಾರರಿಲ್ಲದೆ ವಾಣಿಜ್ಯ ಬ್ಯಾಂಕ್ ಗಳಲ್ಲಿ ಹಾಗೆಯೇ ಬಿದ್ದುಕೊಂಡಿದೆ.
ಬರೋಬ್ಬರಿ 35 ಸಾವಿರ ಕೋಟಿ ರೂ.
ಹೀಗೆ ದೇಶಾದ್ಯಂತ ಇರುವ ಬ್ಯಾಂಕ್ ಗಳಲ್ಲಿ ನಿರ್ವಹಣೆಯಿಲ್ಲದ ನಿಷ್ಕ್ರಿಯ ಖಾತೆಗಳಲ್ಲಿ ಒಂದೆರಡು ಕೋಟಿ ರೂ. ಅಲ್ಲ; ಬದಲಾಗಿ ಬರೋಬ್ಬರಿ 35,012 ಕೋಟಿ ರೂ. ಇದೆ. ಇದೀಗ ಇವುಗಳ ಸೂಕ್ತ ವಿಲೇವಾರಿಗಾಗಿ ಆರ್.ಬಿ.ಐ. ಬ್ಯಾಂಕ್ ಗಳಿಗೆ ಗುರಿ ನಿಗದಿಪಡಿಸಿದೆ.
ಹೀಗೆ 2023ರ ಜೂ. 1ರಂದು ಆರಂಭವಾದ 100 ಡೇಸ್, 100 ಪೇಸ್ ಅಭಿಯಾನ ಸೆ. 8ರ ವರೆಗೆ ನಡೆಯಲಿದೆ. ಪ್ರತಿ ಜಿಲ್ಲೆಯ ಬ್ಯಾಂಕ್ ಗಳಲ್ಲಿರುವ 100 ನಿಷ್ಕ್ರಿಯ ಖಾತೆಗಳ ವಾರಸುದಾರರನ್ನು 100 ದಿನದೊಳಗೆ ಪತ್ತೆಹಚ್ಚಿ ಸೂಕ್ತ ದಾಖಲೆಗಳ ಆಧಾರದಲ್ಲಿ ಹಣ ಮರುಪಾವತಿ ಮಾಡಬೇಕು. ಅಥವಾ ಖಾತೆ ಚಾಲ್ತಿಯಲ್ಲಿಡಲು ಪ್ರಯತ್ನಿಸಬೇಕು. ಸಾಧ್ಯವಾಗದಿದ್ದರೆ ಆರ್.ಬಿ.ಐ. ನಿರ್ದೇಶನದಂತೆ ಪ್ರತ್ಯೇಕ ಖಾತೆಗೆ ವರ್ಗಾಯಿಸಬೇಕು.
ನಿಷ್ಕ್ರಿಯವಾಗುವುದು ಹೇಗೆ?
ಬ್ಯಾಂಕ್ ನ ಉಳಿತಾಯ ಖಾತೆ, ನಿರಖು ಠೇವಣಿ, ಆರ್.ಡಿ. ಇತ್ಯಾದಿ ವಿಧಾನಗಳ ಮೂಲಕ ದುಡ್ಡಿಟ್ಟು ಅವಧಿ ಮುಗಿದ, 10 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಯಾವುದೇ ವ್ಯವಹಾರ ನಡೆಸದಿದ್ದರೆ ಅದನ್ನು ನಿಷ್ಕ್ರಿಯ ಖಾತೆಯಾಗಿ ಪರಿಗಣಿಸಲಾಗುತ್ತದೆ. ಪತ್ನಿ, ಮಕ್ಕಳಿಗೆ ತನ್ನ ಸಂಪಾದನೆ ಹಣ ಗೊತ್ತಾಗಬಾರದೆಂದು ರಹಸ್ಯ ಕಾಪಾಡಿಕೊಂಡವರ ನಿಧನ ನಂತರ ಹಣ ಖಾತೆಯಲ್ಲೇ ಉಳಿದು ಬಿಡುತ್ತದೆ.
ಹಣ ಪಡೆಯುವುದು ಹೇಗೆ?
ನಿಷ್ಕ್ರಿಯ ಖಾತೆಗೆ ಸಂಬಂಧಿಸಿದ ವಾರಸುದಾರರು, ಉತ್ತರಾದಿಕಾರಿಗಳು ಕ್ಲೇಮ್ ಸಲ್ಲಿಸಿ ಖಾತೆಯಲ್ಲಿರುವ ಹಣವನ್ನು ಬಡ್ಡಿ ಸಮೇತ ಮರಳಿ ಪಡೆಯಲು ಅಭಿಯಾನ ಸಹಾಯ ಮಾಡುತ್ತದೆ. ಖಾತೆದಾರರ ಮರಣ ಪ್ರಮಾಣ ಪತ್ರ ಸಹಿತ ಇತರ ದಾಖಲೆಗಳನ್ನು ಸಲ್ಲಿಸಿ ನಿಷ್ಕ್ರಿಯ ಖಾತೆಯಿಂದ ಹಣ ಪಡೆಯಬಹುದು.
ಅನ್ ಕ್ಲೇಮ್ಡ್ ಮೊತ್ತ: ಯಾವ ಬ್ಯಾಂಕ್ ನಲ್ಲಿ ಎಷ್ಟು?
*ಎಸ್.ಬಿ.ಐ.-8,086 ಕೋಟಿ ರೂ.
*ಪಂಜಾಬ್ ನ್ಯಾಷನಲ್ ಬ್ಯಾಂಕ್-5,340 ಕೋಟಿ ರೂ.
*ಕೆನರಾ ಬ್ಯಾಂಕ್-4,558 ಕೋಟಿ ರೂ.
*ಬ್ಯಾಂಕ್ ಆಫ್ ಬರೋಡಾ-3,904 ಕೋಟಿ ರೂ.