ಫೋನ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್ – ಡೆಬಿಟ್ ಕಾರ್ಡ್ ಇಲ್ಲದೇ ಫೋನ್​ ಪೇ ಆ್ಯಕ್ಟಿವೇಟ್ ಮಾಡಲು‌ ಹೀಗೆ ಮಾಡಿ…

ಫೋನ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್ – ಡೆಬಿಟ್ ಕಾರ್ಡ್ ಇಲ್ಲದೇ ಫೋನ್​ ಪೇ ಆ್ಯಕ್ಟಿವೇಟ್ ಮಾಡಲು‌ ಹೀಗೆ ಮಾಡಿ…

ನ್ಯೂಸ್ ಆ್ಯರೋ : ಭಾರತದಲ್ಲೇ ಅತಿಹೆಚ್ಚು ಬಳಕೆದಾರರನ್ನು ಹೊಂದಿರುವ ನಂ.1 ಆನ್‌ಲೈನ್ ಪೇಮೆಂಟ್ ಅಪ್ಲಿಕೇಶನ್ ಫೋನ್​ ಪೇ ಇದೀಗ ಆಧಾರ್ ಆಧಾರಿತವಾಗಿ ಯುಪಿಐ ಪೇಮೆಂಟ್ ನಡೆಸಲು ಅವಕಾಶ ಕಲ್ಪಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಆಧಾರ್ ಸಂಖ್ಯೆಯ ಮೂಲಕ ಯುಪಿಐ ಆಕ್ಟಿವೇಟ್‌ ಮಾಡಲು ಅವಕಾಶ ಮಾಡಿಕೊಟ್ಟ ಮೊದಲ ಅಪ್ಲಿಕೇಶನ್‌ ಫೋನ್​ ಪೇ ಆಗಿದ್ದು, ಇದರಿಂದ ಭಾರತೀಯರು ಡೆಬಿಟ್ ಕಾರ್ಡ್‌ ಹೊಂದಿಲ್ಲದವರು ಸಹ ಯುಪಿಐ ಅಪ್ಲಿಕೇಶನ್‌ ಬಳಸಲು ಸಾಧ್ಯವಾಗಲಿದೆ ಎಂದು ಫೋನ್​ ಪೇ ಸಂಸ್ಥೆ ತಿಳಿಸಿದೆ. ಹಾಗಾದರೆ ಈ ಹೊಸ ಆಧಾರ್ ಆಧಾರಿತ ಯುಪಿಐ ಪೇಮೆಂಟ್ ಸೇವೆಯನ್ನು ಬಳಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಆಧಾರ್ ಆಧಾರಿತವಾಗಿ ಯುಪಿಐ ಪೇಮೆಂಟ್ ಸೇವೆಯ ಬಗ್ಗೆ ಸುಲಭವಾಗಿ ಹೇಳಬೇಕೆಂದರೆ, ನೀವು ಇದೀಗ ಫೋನ್​ ಪೇ ಅಪ್ಲಿಕೇಶನ್‌ನಲ್ಲಿ ಆಧಾರ್ ಕಾರ್ಡ್ ಮೂಲಕ ಯುಪಿಐ ಆಕ್ಟಿವೇಟ್ ಮಾಡಬಹುದು. ಇದಕ್ಕಾಗಿ, ಗ್ರಾಹಕರು ತಮ್ಮ ಆಧಾರ್ ಕಾರ್ಡ್‌ನ ಕೊನೆಯ ಆರು ಅಂಕೆಗಳನ್ನು ಬಳಸಿ ಯುಪಿಐ ಸೇವೆಗೆ ಲಾಗ್ ಇನ್ ಮಾಡಬೇಕಾಗುತ್ತದೆ ಎಂದು ಫೋನ್​ ಪೇ ಸಂಸ್ಥೆ ತಿಳಿಸಿದೆ. ನಂತರ ದೃಢೀಕರಣ ಹಂತಗಳನ್ನು ಪೂರ್ಣಗೊಳಿಸಲು UIDAI ಮತ್ತು ಗ್ರಾಹಕರ ಬ್ಯಾಂಕ್‌ಗಳಿಂದ ಒಟಿಪಿ ಸ್ವೀಕರಿಸುತ್ತಾರೆ. ಈ ಎರಡೂ ಒಟಿಪಿಗಳನ್ನು ಯಶಸ್ವಿಯಾಗಿ ನಮೂದಿಸುವ ಗ್ರಾಹಕರ ಬ್ಯಾಂಕ್ ಖಾತೆಯು ಯುಪಿಐ ಸೇವೆಗೆ ಆಕ್ಟಿವೇಟ್ ಆಗಲಿದೆ.

ಬಳಕೆ ಹೇಗೆ…?

ಸ್ಮಾರ್ಟ್‌ಫೋನ್ ನಲ್ಲಿ ಫೋನ್​ ಪೇ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿ ( ಈಗಾಗಲೇ ಡೌನ್‌ಲೋಡ್ ಮಾಡಿರದಿದ್ದರೆ) ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಒಟಿಪಿ ಸಂಖ್ಯೆಯ ಮೂಲಕ ಫೋನ್​ ಪೇ ಅಪ್ಲಿಕೇಶನ್‌ಗೆ ಲಾಗಿನ್ ಮಾಡಿ. ಬಳಿಕ ಫೋನ್​ ಪೇ ಅಪ್ಲಿಕೇಶನ್‌ನಲ್ಲಿ ಮೇಲೆ ಎಡಭಾಗದಲ್ಲಿರುವ ನಿಮ್ಮ ಫ್ರೊಫೈಲ್ ಮೇಲೆ ಕ್ಲಿಕ್ ಮಾಡಿ. ಆಗ ನಿಮಗೆ ‘ಪೇಮೆಂಟ್ ಇನ್ಟ್ರುಮೆಂಟ್’ ಎಂಬ ಆಯ್ಕೆ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಬ್ಯಾಂಕ್ ಯಾವುದು ಕ್ಲಿಕ್ ಮಾಡಿ.

ಇದಕ್ಕಾಗಿ, “Add New Bank Account” ಬಟನ್ ಒತ್ತಿ. ಫೋನ್​ ಪೇ ಇದೀಗ ಅಪ್ಲಿಕೇಶನ್ ನಿಮ್ಮ ಮೊಬೈಲ್ ನಂಬರ್ ಜೊತೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ತೆರೆಯುತ್ತದೆ, ಇಲ್ಲಿ ನಿಮ್ಮ ಡೆಬಿಟ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಂಬರ್ (ಕೊನೆಯ 6 ಸಂಖ್ಯೆಗಳು) ಕೇಳಲಾಗುತ್ತದೆ.

ಇಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿದ ನಂತರ UIDAI ನಿಂದ ನಿಮ್ಮ ಮೊಬೈಲ್‌ಗೆ ಒಟಿಪಿ ಬರಲಿದ್ದು, ಹಾಗೂ, ನಿಮ್ಮ ಬ್ಯಾಂಕ್ ಕಡೆಯಿಂದಲೂ ಒಂದು ಒಟಿಪಿ ಬರುತ್ತದೆ. ಈ ಎರಡೂ ಒಟಿಪಿ ಗಳನ್ನು ಯಶಸ್ವಿಯಾಗಿ ನಮೂದಿಸಿ. ಇದೀಗ ನಿಮ್ಮ ಬ್ಯಾಂಕ್ ಖಾತೆ ಯುಪಿಐ ಪೇಮೆಂಟ್ ಸೇವೆಗೆ ಸಿದ್ಧವಾಗಿದೆ. ನೀವು ಯುಪಿಐ ಪಿನ್ ನಮೂದಿಸಿ ಮುಂದುವರೆಯಿರಿ.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *