
ಹಳೆಯ ಕರೆನ್ಸಿಗಳಿಗೆ ಫುಲ್ ಡಿಮ್ಯಾಂಡ್ – ಯಾವ್ದಕ್ಕೂ ಈ ಸುದ್ದಿ ನೋಡಿ ಒಮ್ಮೆ!
- ಹಣಕಾಸು
- July 18, 2023
- No Comment
- 286
ನ್ಯೂಸ್ ಆ್ಯರೋ: ಯಾವುದೇ ಒಂದು ದೇಶ ಕಾಲ ಬದಲಾದಂತೆ ತನ್ನ ವ್ಯವಸ್ಥೆಯಲ್ಲಿ ಬದಲಾವಣೆ ತರುತ್ತದೆ. ಅದಕ್ಕೆ ಉತ್ತಮ ಉದಾಹರಣೆ ಕರೆನ್ಸಿ. ಹಲವು ವರ್ಷಗಳಿಗೊಮ್ಮೆ ಕರೆನ್ಸಿಗಳನ್ನು ಬದಲಾಯಿಸಲಾಗುತ್ತದೆ. ಇದಕ್ಕೆ ಭಾರತವೂ ಹೊರತಲ್ಲ.
ಪ್ರಾಮುಖ್ಯತೆ ಪಡೆದ ಹಳೆಯನೋಟು
ಸದ್ಯ ಭಾರತದಲ್ಲಿ ಹೊಸ ವಿನ್ಯಾಸದ ನೋಟುಗಳು ಚಾಲ್ತಿಯಲ್ಲಿವೆ. ಈ ಮಧ್ಯೆ ಹಳೆ ವಿನ್ಯಾಸದ ನೋಟುಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಚಲಾವಣೆಯಲ್ಲಿಲ್ಲದ ನೋಟುಗಳನ್ನು ನೀವು ಹೊಂದಿದ್ದರೆ ಅವನ್ನು ಹರಾಜು ಹಾಕುವ ಮೂಲಕ 1 ಲಕ್ಷ ರೂ.ವರೆಗೆ ಹಣಗಳಿಸಬಹುದು. ಹಳೆಯ ಕರೆನ್ಸಿಗಳನ್ನು eBayಯಲ್ಲಿ ಮಾರಾಟ ಮಾಡಬಹುದು.
1 ರೂ. ಹಳೆಯ ನೋಟು ನಿಮ್ಮಲಿದ್ಯಾ?
1 ರೂ. ಸೇರಿದಂತೆ ಯಾವುದೇ ಹಳೆಯ ನೋಟುಗಳನ್ನು eBayಯಂತಹ ಆನ್ ಲೈನ್ ಫ್ಲಾಟ್ ಫಾರ್ಮ್‍ಗಳಲ್ಲಿ ಮಾರಾಟ ಮಾಡಬಹುದು. ಈ ಮೂಲಕ ಹೆಚ್ಚಿನ ಹಣ ಗಳಿಸಬಹುದು.
ಷರತ್ತುಗಳೇನು?
ಆದರೆ ಎಲ್ಲಾ ಹಳೆಯ ನೋಟುಗಳು ಹೆಚ್ಚಿನ ಮೌಲ್ಯಕ್ಕೆ ಮಾರಾಟವಾಗಬೇಕೆಂದಿಲ್ಲ. ಐತಿಹಾಸಿಕ ಪ್ರಾಮುಖ್ಯತೆಯ ಆದಾರದಲ್ಲಿ ಮೌಲ್ಯ ನಿರ್ಣಯಿಸಲಾಗುತ್ತದೆ. ಸೀಮಿತ ಆವೃತ್ತಿಗಳು, ಅನನ್ಯ ಸರಣಿ ಸಂಖ್ಯೆಗಳು, ನಿರ್ದಿಷ್ಟ ಯುಗ ಅಥವಾ ಸರಕಾರದ ಟಿಪ್ಪಣಿಗಳನ್ನು ಒಳಗೊಂಡ ಕರೆನ್ಸಿಗಳು ಮಾತ್ರ ಲಕ್ಷಗಟ್ಟಲೆ ಬೆಳೆ ಬಾಳುತ್ತವೆ. ಜೊತೆಗೆ ಆನ್ ಲೈನ್ ಮೂಲಕ ಹೀಗೆ ನೋಟುಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರ ಎನ್ನುವುದನ್ನು ಗಮನಿಸಬೇಕು.