ನಾಳೆಯಿಂದಲೇ ಗ್ರಾಹಕರ ಕೈ ಸೇರಲಿದೆ ಡಿಜಿಟಲ್ ರೂಪಾಯಿ ಬೆಂಗಳೂರು ಸೇರಿದಂತೆ ಪ್ರಮುಖ ನಾಲ್ಕು ನಗರಗಳಲ್ಲಿ ಲಭ್ಯ ; ಏನಿದು ಡಿಜಿಟಲ್ ಕರೆನ್ಸಿ? ವಿವರ ಇಲ್ಲಿದೆ…

ನ್ಯೂಸ್ ಆ್ಯರೋ : ಡಿಜಿಟಲ್ ರೂಪಾಯಿ ಅನ್ನು ಪ್ರಾಯೋಗಿಕವಾಗಿ ಬಳಸಲು ಡಿಸೆಂಬರ್ 1ರಂದು ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ಮೊದಲು ದೇಶದ ಪ್ರಮುಖ ನಾಲ್ಕು ನಗರಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಚಾಲನೆ ನೀಡಲಿದ್ದು, ಆ ನಗರದಲ್ಲಿ ಬೆಂಗಳೂರು ಒಂದಾಗಿದೆ.

ಈ ಸಂಬಂಧ ಆರ್‌ಬಿಐ ಪ್ರಕಟಣೆಯನ್ನು ಹೊರಡಿಸಿದ್ದು, ಮೊದಲು ಪ್ರಮುಖ ನಾಲ್ಕು ನಗರಗಳಾದ ನವದೆಹಲಿ, ಬೆಂಗಳೂರು, ಮುಂಬೈ, ಭುವನೇಶ್ವರದಲ್ಲಿ ಮೊದಲು ಇಲ್ಲಿ ಆರಂಭ ಮಾಡಲಾಗುತ್ತದೆ. ಬಳಿಕ ಅಹಮದಾಬಾದ್, ಗಾಂಗ್ಟಾಕ್, ಗುವಾಹಟಿ, ಹೈದಾರಾಬಾದ್, ಇಂದೋರ್, ಕೊಚ್ಚಿ, ಲಕ್ನೋ, ಪಾಟ್ನಾ, ಶಿಮ್ಲಾದಲ್ಲಿ ರಿಟೇಲ್ ಡಿಜಿಟಲ್ ರೂಪಾಯಿ ಆರಂಭ ಮಾಡಲಾಗುತ್ತದೆ. ಬಳಿಕ ಇನ್ನಷ್ಟು ಪ್ರದೇಶ, ಬ್ಯಾಂಕ್‌ಗಳಿಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.

ಡಿಜಿಟಲ್ ರೂಪಾಯಿ ಎಂದರೆ ಏನು?

ಡಿಜಿಟಲ್ ರೂಪಾಯಿ ವ್ಯಾಲೆಟ್ ರೂಪದಲ್ಲಿದ್ದು, ಇದು ಬ್ಯಾಂಕ್‌ಗಳು ನೀಡುವ ಪೇಪರ್ ಕರೆನ್ಸಿಯ ಡಿಜಿಟಲ್ ರೂಪಾಂತರವಾಗಿದೆ. ಸರಳವಾಗಿ ಹೇಳುವುದಾದರೆ ಇದು ಹಣದ ಎಲೆಕ್ಟ್ರಾನಿಕ್ ರೂಪವಾಗಿದೆ. ಬ್ಯಾಂಕ್‌ಗಳು ನೀಡುವ ಡಿಜಿಟಲ್ ವ್ಯಾಲೆಟ್‌ನಲ್ಲಿರುವ ಈ ಡಿಜಿಟಲ್ ರೂಪಾಯಿಯನ್ನು ಗ್ರಾಹಕರು ಮೊಬೈಲ್‌ ಫೋನ್‌ಗಳ ಮೂಲಕ ಬಳಕೆ ಮಾಡಬಹುದು.

ವ್ಯಾಪಾರ– ವಹಿವಾಟುವಿಗೆ ಉಪಯೋಗಿಸಬಹುದು..

ಇಬ್ಬರು ವ್ಯಕ್ತಿಗಳ ನಡುವೆ ಹಾಗೂ ಗ್ರಾಹಕ ಮತ್ತು ವ್ಯಾಪಾರಿ ನಡುವೆ ವಹಿವಾಟುಗಳಿಗೆ ಇದನ್ನು ಬಳಸಬಹುದು. ದಿನನಿತ್ಯದ ವಹಿವಾಟುಗಳಲ್ಲಿ ಬಳಸಿಕೊಳ್ಳುವ ನಗದು ಹಣದ ರೀತಿಯಲ್ಲಿಯೇ ಡಿಜಿಟಲ್ ರೂಪಾಯಿಯನ್ನು ಠೇವಣಿ ಇರಿಸಲು ಬಳಸಬಹುದು.

ಮೊದಲು ನಾಲ್ಕು ಬ್ಯಾಂಕ್‌ಗಳಲ್ಲಿ ಪ್ರಾಯೋಗಿಕ ಪ್ರಾರಂಭ:

ಪ್ರಮುಖವಾಗಿ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಐಸಿಐಸಿಐ ಬ್ಯಾಂಕ್, ಯೆಸ್‌ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್‌ ಮೂಲಕ ಪ್ರಮುಖ ನಾಲ್ಕು ನಗರಗಳಲ್ಲಿ ಈ ರಿಟೇಲ್ ಡಿಜಿಟಲ್ ರೂಪಾಯಿ ಪ್ರಾಯೋಗಿಕ ಬಳಕೆ ಆರಂಭಿಸಲಾಗುತ್ತದೆ. ಬ್ಯಾಂಕ್ ಆಫ್‌ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಹಂತ ಹಂತವಾಗಿ ಈ ಪ್ರಕ್ರಿಯೆಗೆ ಜೊತೆಯಾಗಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಕೇಂದ್ರ ಬಜೆಟ್‌ನಲ್ಲಿ ಡಿಜಿಟಲ್ ರೂಪಾಯಿ ಘೋಷಣೆ ಮಾಡುವಾಗ ಬಗ್ಗೆ ಹೇಳಿದ್ದರು. ಇದೀಗ ಈ ಯೋಜನೆಗೆ ನಾಳೆಯೇ‌ ಅಧಿಕೃತ ಮುದ್ರೆ ಬೀಳಲಿದೆ.

Related post

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 22-04-2024 ಸೋಮವಾರ| ಇಂದಿನ ರಾಶಿಫಲ ಹೀಗಿದೆ..

ಮೇಷತುಂಬಾ ಚಿಂತೆ ಮಾನಸಿಕ ಶಾಂತಿಗೆ ಭಂಗ ತರಬಹುದು. ಆತಂಕ, ಉದ್ವೇಗದ ಪ್ರತೀ ತುಣುಕೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದರಿಂದ ಇದನ್ನು ತಡೆಯಿರಿ. ಬಯಸದೆ ಇರುವ ಯಾವುದೇ ಅತಿಥಿ…
Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ – 102 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ 1625 ಅಭ್ಯರ್ಥಿಗಳು

Loksabha Election 2024 : ಇಂದು ಮೊದಲ ಹಂತದ ಮತದಾನ ಆರಂಭ…

ನ್ಯೂಸ್ ಆ್ಯರೋ : ದೇಶದ ಚುಕ್ಕಾಣಿ ಹಿಡಿಯಲು ಐದು ವರ್ಷಗಳಿಗೊಮ್ಮೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯ 7 ಹಂತದ ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಶುಕ್ರವಾರ ಚಾಲನೆ ಸಿಗಲಿದ್ದು,…
ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 19-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಆಹಾರವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ ಮತ್ತು ಫಿಟ್ ಆಗಿ ಉಳಿಯಲು ವ್ಯಾಯಾಮ ಮಾಡಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಒಂದು ಒಳ್ಳೆಯ ಸುದ್ದಿ ಪಡೆಯುವ ಸಾಧ್ಯತೆಯಿದ್ದು ಇದು ನಿಮ್ಮನ್ನಷ್ಟೇ…

Leave a Reply

Your email address will not be published. Required fields are marked *