
ನಾಲ್ಕು ದಿನ ಬ್ಯಾಂಕ್ ವ್ಯವಹಾರ ಬಂದ್: ಎಟಿಎಂನಲ್ಲೂ ಹಣ ಇರುವುದು ಡೌನ್, ಈಗಲೇ ಪ್ಲಾನ್ ಮಾಡಿ ವ್ಯವಹಾರ ಮುಗಿಸಿ
- ಹಣಕಾಸು
- January 14, 2023
- No Comment
- 117
ನ್ಯೂಸ್ ಆ್ಯರೋ: ಈ ತಿಂಗಳ ಕೊನೆಯ ಎರಡು ದಿನ ಸಾರ್ವಜನಿಕ ರಜೆಗಳಿದ್ದು, ಇನ್ನೆರಡು ದಿನ ಬ್ಯಾಂಕ್ ಮುಷ್ಕರ ನಡೆಸಲು ನಿರ್ಧರಿಸಿದ ಹಿನ್ನೆಲೆ ನಾಲ್ಕು ದಿನ ಬ್ಯಾಂಕ್‌ಗಳಲ್ಲಿ ವ್ಯವಹಾರಗಳಿಗೆ ರಜೆ ಇರಲಿದ್ದು, ಗ್ರಾಹಕರು ಬ್ಯಾಂಕ್ ವ್ಯವಹಾರಕ್ಕೆ ಸಮಯವನ್ನು ಹೊಂದಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಜನವರಿ 28 ರಿಂದ ಜನವರಿ 31 ರವರೆಗೆ ಬ್ಯಾಂಕಿಂಗ್ ಕೆಲಸವನ್ನು ನಿಭಾಯಿಸುವಲ್ಲಿ ನಿಮಗೆ ಅಡಚಣೆಗಳು ಎದುರಾಗುವ ಸಾಧ್ಯತೆ ಇದೆ. ಎರಡು ದಿನ ಸಾರ್ವಜನಿಕ ರಜೆಗಳಿದ್ದು, ಇನ್ನೆರಡು ದಿನ ಬ್ಯಾಂಕ್ ಯೂನಿಯನ್ ಮುಷ್ಕರ ನಡೆಸಲು ನಿರ್ಧರಿಸಿದೆ. ಇದರಿಂದ ನಾಲ್ಕು ದಿನ ಬ್ಯಾಂಕ್ ವ್ಯವಹಾರಗಳು ನಡೆಯುವುದು ಕಷ್ಟಕರವಾಗಿದೆ.
ಜನವರಿ 28 ರಂದು ತಿಂಗಳ ನಾಲ್ಕನೇ ಶನಿವಾರ, ಈ ಕಾರಣದಿಂದಾಗಿ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಇದರ ಬೆನ್ನಲ್ಲೇ ಭಾನುವಾರದ ಕಾರಣ ಜನವರಿ 29 ರಂದು ದೇಶಾದ್ಯಂತ ಬ್ಯಾಂಕುಗಳಿಗೆ ಸಾರ್ವಜನಿಕ ರಜಾದಿನ ಇರಲಿದೆ. ಇದೆಲ್ಲದರ ಹೊರತಾಗಿ ಬ್ಯಾಂಕ್ ಯೂನಿಯನ್ ಜನವರಿ 30 ಮತ್ತು 31 ರಂದು ಮುಷ್ಕರವನ್ನು ಘೋಷಿಸಿದೆ. ಇದರಿಂದ ನಾಲ್ಕು ದಿನ ಗ್ರಾಹಕರು ತೊಂದರೆ ಅನುಭವಿಸಬೇಕಾಗಬಹುದು.
ಎರಡು ದಿನ ಬೇಡಿಕೆ ಈಡೇರಿಕೆಗೆ ಮುಷ್ಕರ:ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಸಭೆಯಲ್ಲಿ ಎರಡು ದಿನ ಮುಷ್ಕರ ನಡೆಸಲು ಬ್ಯಾಂಕ್ ಒಕ್ಕೂಟಗಳು ನಿರ್ಧರಿಸಿವೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಬ್ಯಾಂಕ್ ಒಕ್ಕೂಟಗಳು ಮುಷ್ಕರ ನಡೆಸುತ್ತಿವೆ.
ಏನೆಲ್ಲ ಸಮಸ್ಯೆ ಎದುರಾಗಬಹುದು: ಎಟಿಎಂನಲ್ಲಿ ಹಣ ಖಾಲಿಯಾಗುವ ಸಮಸ್ಯೆ ತಲೆದೋರಬಹುದು. ಇದರೊಂದಿಗೆ, ಚೆಕ್ ಕ್ಲಿಯರೆನ್ಸ್ ಬಗ್ಗೆಯೂ ಸಮಸ್ಯೆಗಳಿರಬಹುದು ಎಂಬುದು ಅಂದಾಜಿಸಲಾಗಿದೆ.