ಔಷಧ, ಇಂಧನ ಸೇರಿ ಭಾರತ 10 ಒಪ್ಪಂದ; ಇನ್ಮುಂದೆ ಈ ದೇಶದಲ್ಲಿಯೂ UPI ಸೇವೆ ಆರಂಭ
ನ್ಯೂಸ್ ಆ್ಯರೋ: ‘ವಿವಿಧ ಕ್ಷೇತ್ರಗಳಲ್ಲಿ ಕೆರಿಬಿಯನ್ (ವೆಸ್ಟ್ ಇಂಡೀಸ್) ದೇಶಗಳೊಂದಿಗಿನ ಸಹಕಾರ ವೃದ್ಧಿಸಲು ಭಾರತ ಉತ್ಸುಕವಾಗಿದೆ ‘ ಎಂದು ವಿಂಡೀಸ್ ದ್ವೀಪ ಸಮೂಹದ ಗಯಾನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗಯಾನಾಗೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಇರ್ಫಾನ್ ಅಲಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದಮೋದಿ, ಉಭಯ ದೇಶಗಳ ನಡುವೆ ಔಷಧ, ಇಂಧನ, ಕೆರಿಬಿಯನ್‌ನಲ್ಲಿ ಯುಪಿಐ ಡಿಜಿಟಲ್ ಪೇಮೆಂಟ್ ಸೇವೆ ಆರಂಭಸೇರಿದಂತೆ 10 ಒಪ್ಪಂದಕ್ಕೆ ಸಹಿ ಹಾಕಿದರು. ಅಲ್ಲದೆ, 2ನೇ ಭಾರತ- ಕ್ಯಾರಿಕೋಮ್ ಶೃಂಗಸಭೆಯಲ್ಲಿ ಮಾತನಾಡಿದರು. ‘ಗಯಾನಾಗೆ56 ವರ್ಷ ನಂತರ ಭಾರತದ ಪ್ರಧಾನಿ ಭೇಟಿ ನೀಡುತ್ತಿದ್ದಾರೆ.
ಈ ವೇಳೆ ಏರ್ಪಟ್ಟ ಸಹಕಾರವು ಆರ್ಥಿಕ ಸಹಕಾರ. ಕೃಷಿ ಹಾಗೂ ಆಹಾರ ಭದ್ರತೆ, ಆರೋಗ್ಯ ಹಾಗೂ ಔಷಧ, ವಿಜ್ಞಾನ, ಯುಪಿಐ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿನ ಸಂಬಂಧ ಮತ್ತಷ್ಟು ಬಲಪಡಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ವಿಂಡೀಸ್‌ನಲ್ಲಿ ಯುಪಿಐ ಸೇವೆ ಆರಂಭವಾಗಲಿದ್ದು, ಈ ಸೇವೆ ಆರಂಭಿಸಿರುವ 7ನೇ ದೇಶ ವೆಸ್ಟ್ ಇಂಡೀಸ್ ಆಗಲಿದೆ ಎಂದು ಹರ್ಷಿಸಿದರು.
ಇನ್ನು ಗಯಾನಾ ಅಧ್ಯಕ್ಷ ಡಾ. ಇರ್ಫಾನ್ ಅಲಿ ಜಾರ್ಜ್‌ಟೌನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್ ಆಫ್ ಎಕ್ಸಲೆನ್ಸ್’ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ, ಗಯಾನಾದ ಅತ್ಯುನ್ನತ ಪ್ರಶಸ್ತಿಯನ್ನು ನನಗೆ ನೀಡಿ ಗೌರವಿಸಿದ್ದಕ್ಕಾಗಿ ನನ್ನ ಸ್ನೇಹಿತ ಅಧ್ಯಕ್ಷ ಇರ್ಫಾನ್ ಅಲಿ ಅವರಿಗೆ ನಾನು ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
Leave a Comment