ಪುಟ್ಟ ಲಕ್ಷ್ಮಿಗೆ ಜನ್ಮ ಕೊಟ್ಟ ಮಿಲನ ನಾಗರಾಜ್; ಖುಷಿ ಸುದ್ದಿ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

20240905 130103
Spread the love

ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಎನ್ನಿಸಿಕೊಂಡ ಡಾರ್ಲಿಂಗ್ ಕೃಷ್ಣ ದಂಪತಿಗಳು ಮುದ್ದು ಗೊಂಬೆಗೆ ಜನ್ಮ ನೀಡುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

ಮಿಲನ ಮತ್ತು ಕೃಷ್ಣ ಇತ್ತೀಚೆಗೆ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿದ್ದು, ಗಂಡು ಮಗು ಆದರೂ ಖುಷಿನೇ ಹೆಣ್ಣು ಮಗು ಆದರೂ ಖುಷಿಯೇ ಎಂದು ಪೋಸ್ಟ್ ಹಾಕಿದ್ದರು. ಇದೀಗ ಮಿಲನ ಮನೆಗೆ ಪುಟ್ಟಲಕ್ಷ್ಮಿ ಕಾಲಿಟ್ಟಿದ್ದಾಳೆ.

ಇತ್ತೀಚೆಗಷ್ಟೇ ಡಾರ್ಲಿಂಗ್ ಕೃಷ್ಣ ಮಿಲನ ಅವರ ಸೀಮಂತವನ್ನು ಬಹಳ ಅದ್ದೂರಿಯಾಗಿ ಸ್ಟಾರ್ ನಟರ ಉಪಸ್ಥಿತಿಯಲ್ಲಿ ಮಾಡಿದರು. ಮೊದಲ ಮಗುವಿನ ಆಗಮನಕ್ಕೆ ದಂಪತಿಗಳಿಬ್ಬರು ಕಾತುರತೆಯಿಂದ ಕಾದಿದ್ದರು.

“ನನಗೆ ಮಗಳು ಹುಟ್ಟಿದ್ದಾಳೆ. ಮಿಲನ ನಾಗರಾಜ್‌ಗೆ ಧ್ಯನವಾದಗಳು. ಮಗಳನ್ನು ಕೊಟ್ಟಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ. ಅಮ್ಮ ಮತ್ತು ಮಗಳು ಇಬ್ಬರು ಚೆನ್ನಾಗಿದ್ದಾರೆ. ನನಗೆ ಮಿಲನ ಬಗ್ಗೆ ಹೆಮ್ಮೆ ಆಗುತ್ತಿದೆ. ನಮ್ಮ ಈ ಬಾಳ ಪಯಣದಲ್ಲಿ ತ್ಯಾಗ, ನೋವು ಹಾಗೂ ಸಂತಸವನ್ನು ನೋಡಿದ್ದೇನೆ. ಈಗ ನಾನು ಮಗಳನ್ನು ಪಡೆದಿದ್ದೇನೆ ಹೌದು ನಾನು ಈಗ ಹೆಮ್ಮೆಯ ತಂದೆ” ಎಂದು ಡಾರ್ಲಿಂಗ್ ಕೃಷ್ಣ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

20240905 1302563902665948025155246

Leave a Comment

Leave a Reply

Your email address will not be published. Required fields are marked *

error: Content is protected !!