ಸಿಗರೇಟ್ ತುಂಡುಗಳಿಂದ ರೆಡಿಯಾಯ್ತು ಕ್ಯೂಟ್ ಟೆಡ್ಡಿ ಬೇರ್; ಇದನ್ನು ಹೇಗೆ ತಯಾರು ಮಾಡ್ತಾರೆ ನೋಡಿ
ನ್ಯೂಸ್ ಆ್ಯರೋ: ಕಸದಿಂದ ರಸ ಎನ್ನುವ ಪರಿಕಲ್ಪನೆ ಹಿಂದಿನಿಂದಲೂ ನಮ್ಮಲ್ಲಿದೆ. ಈ ಪರಿಕಲ್ಪನೆಯಡಿ ಕಸ, ತ್ಯಾಜ್ಯ ಎಂದು ಬಿಸಾಡುವ ಪ್ಲಾಸ್ಟಿಕ್ ಸೇರಿದಂತೆ ಅದೆಷ್ಟೋ ವಸ್ತುಗಳಿಗೆ ಅದೆಷ್ಟೋ ಜನ ತಮ್ಮ ಕ್ರಿಯೆಟಿವಿಗಳಿಂದಲೇ ಹೊಸ ರೂಪಗಳನ್ನು ನೀಡಿದ್ದಾರೆ. ಅದೇ ರೀತಿ ಇಲ್ಲೊಬ್ರು ವ್ಯಕ್ತಿ ಕೂಡಾ ಸಿಗರೇಟ್ ತುಂಡುಗಳಿಂದ ಟೆಡ್ಡಿ ಬೇರ್, ಸಾಫ್ಟ್ ಟಾಯ್‌ಗಳನ್ನು ತಯಾರಿಸುವ ಮೂಲಕ ಸಿಗರೇಟ್ ತ್ಯಾಜ್ಯಕ್ಕೆ ಹೊಸ ರೂಪವನ್ನು ನೀಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಪರಿಸರ ಕಾಳಜಿಯ ದೃಷ್ಟಿಯಿಂದ ನೋಯ್ಡಾದ ನಮನ್ ಗುಪ್ತಾ ಎಂಬವರು ಕಸದಿಂದ ರಸ ಎನ್ನುವ ಪರಿಕಲ್ಪನೆಯಡಿ ಸಿಗರೇಟ್ ತುಂಡುಗಳಿಂದ ಸುಂದರವಾದ ಟೆಡ್ಡಿಬೇರ್ ಮತ್ತು ಸಾಫ್ಟ್ ಟಾಯ್‌ಗಳನ್ನು ತಯಾರಿಸುತ್ತಿದ್ದಾರೆ.
ನಮನ್ ತಮ್ಮ ಸಹೋದರರ ಜೊತೆ ಸೇರಿ ಎಫರ್ಡ್ ಪ್ರೈವೇಟ್ ಮಿಲಿಟೆಡ್ ಸಂಸ್ಥೆಯನ್ನು ಸ್ಥಾಪಿಸಿ, ಇದರ ಮೂಲಕ ಸಿಗರೇಟ್ ತುಂಡುಗಳ ತ್ಯಾಜ್ಯಗಳನ್ನು ಮರು ಬಳಕೆ ಮಾಡಿ ಅದರಿಂದ ಸುಂದರ ಗೊಂಬೆಗಳು ಸೇರಿದಂತೆ ಇತರೆ ಸ್ಟಫ್ಡ್ ಟಾಯ್‌ಗಳನ್ನು ತಯಾರಿಸುತ್ತಿದ್ದಾರೆ.
60secodocs ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವೇಸ್ಟ್ ಸಿಗರೇಟ್ ತುಂಡುಗಳನ್ನು ಸ್ವಚ್ಛಗೊಳಿಸಿ ಮತ್ತು ಶುದ್ಧೀಕರಿಸಿ ನಂತರ ಅದರಿಂದ ಸಫ್ಡ್ ಟಾಯ್‌ಗಳನ್ನು ತಯಾರಿಸುವ ಮೂಲಕ ಹೇಗೆ ತ್ಯಾಜ್ಯವನ್ನು ಮರು ಬಳಕೆ ಮಾಡುತ್ತಿದ್ದಾರೆ ಎಂಬ ದೃಶ್ಯವನ್ನು ಕಾಣಬಹುದು.
Leave a Comment