ಇಸ್ರೇಲ್ ವೈಮಾನಿಕ ದಾಳಿಗೆ ಲೆಬನಾನ್ ತತ್ತರ; 3 ಮಂದಿ ಸಾವು

20240908 135216
Spread the love

ನ್ಯೂಸ್ ಆ್ಯರೋ : ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಲೆಬನಾನ್ ನಾಗರಿಕ ರಕ್ಷಣಾ ಪಡೆಯ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ದಕ್ಷಿಣ ಲೆಬನಾನ್ ನ ಗಡಿ ಪ್ರದೇಶದ ವಾಡಿ ಫ್ರೌನ್ ನಲ್ಲಿ ಶನಿವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ಉಂಟಾದ ಬೆಂಕಿಯನ್ನು ನಂದಿಸುವಾಗ ಮತ್ತೇ ರಕ್ಷಣಾ ಸಿಬ್ಬಂದಿಗಳ ಮೇಲೆ ಇಸ್ರೇಲ್ ಕ್ಷಿಪಣಿಯನ್ನು ಹಾರಿಸಿದೆ ಲೆಬನಾನ್ ನ ನಾಗರಿಕ ರಕ್ಷಣಾ ಸಂಸ್ಥೆಯು ತಿಳಿಸಿದೆ.

ಮೃತರನ್ನು ಅಬ್ಬಾಸ್ ಹಮ್ಮೌದ್, ಮುಹಮ್ಮದ್ ಹಾಶೆಮ್ ಮತ್ತು ಖಾಸಿಮ್ ಬಾಝಿ ಎಂದು ಗುರುತಿಸಲಾಗಿದ್ದು, ಮೃತದೇಹಗಳನ್ನು ದಕ್ಷಿಣ ಲೆಬನಾನ್ ನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದಿದೆ.

ಇಸ್ರೇಲ್ ಯುದ್ಧವಿಮಾನಗಳು ಮತ್ತು ಡ್ರೋನ್ ಗಳ ಮೂಲಕ ದಕ್ಷಿಣ ಲೆಬನಾನ್ ನ ನಾಲ್ಕು ಗಡಿ ಪ್ರದೇಶಗಳ ಮೇಲೆ ಆರು ದಾಳಿಗಳನ್ನು ನಡೆಸಿವೆ ಎಂದು ಮೂಲಗಳು ತಿಳಿಸಿವೆ.

Leave a Comment

Leave a Reply

Your email address will not be published. Required fields are marked *

error: Content is protected !!