ಚಾರಣಿಗರಿಗೆ ಗುಡ್ ನ್ಯೂಸ್: ಇಂದಿನಿಂದ ಕುಮಾರ ಪರ್ವತ ಚಾರಣ ಆರಂಭ

ಸುಬ್ರಹ್ಮಣ್ಯ:ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮೀಪದ ಕುಮಾರ ಪರ್ವತ ಚಾರಣ ಪಥವು ಅ.3 (ಗುರುವಾರ)ರಂದು ಮರು ಪ್ರಾರಂಭವಾಗಲಿದೆ.
ಜ. 26 ಹಾಗೂ 27ರಂದು ಮಿತಿಗೂ ಮೀರಿದ ಚಾರಣಿಗರು ಆಗಮಿಸಿದ್ದ ಕಾರಣ ಜನದಟ್ಟಣೆ ಉಂಟಾಗಿತ್ತು.
ಆದ್ದರಿಂದ, ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫೆ.1ರಿಂದ ಚಾರಣ ಪಥವನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಕುಮಾರ ಪರ್ವತ ಚಾರಣಿಗರ ಫೇವರಿಟ್ ತಾಣವೂ ಆಗಿದೆ. ಮಳೆಗಾಲದಲ್ಲಿ ಇಲ್ಲಿಗೆ ಬಹುತೇಕ ನಿರ್ಬಂಧ ವಿಧಿಸಲಾಗಿರುತ್ತದೆ.
Leave a Comment