ಸ್ಯಾಮ್‌-ಚೈ ಬ್ರೇಕಪ್​​ಗೆ ಮಾಜಿ ಸಿಎಂ ಪುತ್ರ ಕಾರಣ; ಶಾಕಿಂಗ್​​ ಸತ್ಯ ಬಿಚ್ಚಿಟ್ಟ ಸಚಿವೆ

Samantha, Chaitanya’s divorce
Spread the love

ನ್ಯೂಸ್ ಆ್ಯರೋ: ತೆಲಂಗಾಣದ ಮಂತ್ರಿ ಕೊಂಡಾ ಸುರೇಖಾ, ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್​ ಬಗ್ಗೆ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಅವರು ಹೇಳುವ ಪ್ರಕಾರ ನಾಗಚೈತನ್ಯ ಹಾಗೂ ಸಮಂತಾ ನಡುವಿನ ಮದುವೆ ಮುರಿದು ಬೀಳಲು ಪ್ರಮುಖ ಕಾರಣ ಬಿಆರ್​ಎಸ್​​ನ ಕಾರ್ಯಕಾರಿ ಅಧ್ಯಕ್ಷ ಕೆ ಟಿ ರಾಮರಾವ್ ಅಂತೆ. ಸದ್ಯ ಮಿನಿಸ್ಟರ್ ಕೊಂಡಾ ಸುರೇಖಾ ಅವರು ನೀಡಿದ ಹೇಳಿಕೆ ದೊಡ್ಡ ಸದ್ದು ಮಾಡುತ್ತಿದೆ.

ಮಾಧ್ಯಮಗಳ ಎದುರು ಮಾತನಾಡಿದ ಕೊಂಡಾ ಸುರೇಖಾ ಕೇವಲ ಸಮಂತಾ ಮಾತ್ರವಲ್ಲ ಅನೇಕ ನಟಿಯರು ವಿಚ್ಛೇದನ ಪಡೆಯಲು ಪ್ರಮುಖ ಕಾರಣವೇ ಕೆಟಿಆರ್ ಎಂದು ಆರೋಪಿಸಿದ್ದಾರೆ. ಅವರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ, ರೇವ್ ಪಾರ್ಟಿ ಮಾಡುತ್ತಾರೆ. ಅವರು ಬೇರೆಯವರ ಭಾವನೆಗಳ ಜೊತೆ ಆಟವಾಡಿ ಅವರನ್ನು ಬ್ಲ್ಯಾಕ್​ಮೇಲ್ ಮಾಡುತ್ತಾರೆ. ಹೀಗಾಗಿ ಹಲವು ನಟಿಯರ ವೈವಾಹಿಕ ಬದುಕು ಒಡೆಯಲು ಅವರೇ ಕಾರಣ ಎಂದು ಸುರೇಖಾ ಆರೋಪಿಸಿದ್ದಾರೆ.

ಸಮಂತಾ ಮತ್ತು ನಾಗಚೈತನ್ಯ ನಡುವಿನ ಬಿರುಕಿಗೆ ಅಸಲಿ ಕಾರಣವೇ ಕೆಟಿಆರ್. ಎನ್​ ಕನ್ವಿನ್ಷನ್ ಹಾಲ್ ಕಟ್ಟಡ ಧ್ವಂಸಗೊಳಿಸಬಾರದು ಅಂದ್ರೆ ನೀನು ಸಮಂತಾಳನ್ನ ನನ್ನ ಕಡೆ ಕಳಿಸಿಕೊಡು ಎಂದು ಕೆಟಿಆರ್​ ಧಮ್ಕಿ ಹಾಕಿದ್ರು. ನಾಗಾರ್ಜುನ ಕೆ.ಟಿ.ರಾಮರಾವ್ ಜೊತೆ ಹೋಗುವಂತೆ ಕೇಳಿಕೊಂಡಿದ್ದರು. ಸಮಂತಾ ನಿರಾಕರಿಸಿದಾಗ ಅವಳನ್ನು ಬಿಟ್ಟುಬಿಡುವಂತೆ ಕೆಟಿಆರ್​ ನಾಗಚೈತನ್ಯಗೆ ಬೆದರಿಕೆ ಹಾಕಿದ್ದಾರೆ. ಹೀಗಾಗಿಯೇ ಅವರ ಮದುವೆ ಮುರಿದು ಬಿದ್ದಿದೆ ಎಂದು ಸುರೇಖಾ ಗಂಭೀರ ಆರೋಪ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗ್ತಿದೆ.

Leave a Comment

Leave a Reply

Your email address will not be published. Required fields are marked *