ಪ್ರಯಾಣಿಕರಿಗೆ ಬಿಗ್‌ ಶಾಕಿಂಗ್ ನ್ಯೂಸ್; ಬಸ್ ಪ್ರಯಾಣ ದರ ಏರಿಕೆ, ಎಷ್ಟು ಹೆಚ್ಚಳ?

ksrtc-bus
Spread the love

ನ್ಯೂಸ್ ಆ್ಯರೋ: ಹೊಸ ವರ್ಷದ ಮರು ದಿನವೇ ರಾಜ್ಯದ ಜನರಿಗೆ ಸರ್ಕಾರ ಶಾಕಿಂಗ್ ನ್ಯೂಸ್‌ ಕೊಟ್ಟಿದೆ. ಬಸ್ ಪ್ರಯಾಣ ದರ ಶೇಕಡಾ 15ರಷ್ಟು ಹೆಚ್ಚಳ ಮಾಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಬಸ್ ಟಿಕೆಟ್ ದರ ಏರಿಕೆಗೆ ಸಂಪುಟ ಅನುಮೋದನೆ ನೀಡಿದೆ. ಸಾರಿಗೆ ದರ ಏರಿಕೆಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಬಸ್ ಪ್ರಯಾಣ ದರ ಶೇಕಡಾ 15ರಷ್ಟು ಹೆಚ್ಚಳಕ್ಕೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಶೇಕಡಾ 15 ರಷ್ಟು ದರ ಏರಿಕೆ ಅಂದ್ರೆ ನೀವು ಇದುವರೆಗೂ 100 ರೂಪಾಯಿಗೆ ಟಿಕೆಟ್‌ ಕೊಟ್ಟು ಪ್ರಯಾಣಿಸುತ್ತಿದ್ದರೆ ಇನ್ನು ಮುಂದೆ 115 ರೂಪಾಯಿ ಪಾವತಿಸಬೇಕು.

ಸರ್ಕಾರಿ ಬಸ್‌ನಲ್ಲಿ 200 ರೂಪಾಯಿ ಕೊಟ್ಟು ಪ್ರಯಾಣಿಸುವವರು 230 ರೂಪಾಯಿ ಕೊಡಬೇಕು. ಬೆಂಗಳೂರಿನಿಂದ ಹುಬ್ಬಳ್ಳಿ, ಮಂಗಳೂರಿನ ಕಡೆ ಪ್ರಯಾಣಿಸುವವರು ಸುಮಾರು 75 ರೂಪಾಯಿಗೂ ಹೆಚ್ಚು ಹಣ ಪಾವತಿಸಬೇಕಾಗುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!