
ಬೆಳ್ತಂಗಡಿ : ಬಜಿಲಪಾದೆಯಲ್ಲಿ ಚಿರತೆ ಪ್ರತ್ಯಕ್ಷ – ಆತಂಕದಲ್ಲಿ ಸ್ಥಳೀಯರು, ವಿಡಿಯೋ ವೈರಲ್, ..!!
- ಕರಾವಳಿ
- May 26, 2023
- No Comment
- 92
ನ್ಯೂಸ್ ಆ್ಯರೋ : ಬೆಳ್ತಂಗಡಿ ತಾಲೂಕಿನ ನಾರಾವಿ ವೇಣೂರು ರಸ್ತೆಯ ನಡುವೆ ಇರುವ ಬಜಿಲಪಾದೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಭೀತಿ ಉಂಟುಮಾಡಿದೆ.
ಕಳೆದ ಕೆಲದಿನಗಳಿಂದ ಅಲ್ಲಲ್ಲಿ ನಾಯಿಗಳನ್ನು ಬೇಟೆಯಾಡುತ್ತಿದ್ದು, ಈ ಭಾಗದ ಜನರ ಆತಂಕ ಮನೆಮಾಡಿತ್ತು. ನಿನ್ನೆ ರಾತ್ರಿ 8:30 ರ ವೇಳೆ ಸ್ಥಳೀಯರು ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಚಿರತೆ ಕಣ್ಣಿಗೆ ಬಿದ್ದಿದೆ.
ರಸ್ತೆಯ ಪಕ್ಕದಲ್ಲೇ ಕುಳಿತಿದ್ದ ಚಿರತೆಯು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಬಳಿಕ ಕತ್ತಲಲ್ಲಿ ಕಣ್ಮರೆಯಾಗಿದೆ.
ಅರಣ್ಯ ಅಧಿಕಾರಿಗಳು ಈ ಮೊದಲೇ ಬೋನು ಇಡುವ ಬಗ್ಗೆ ಚಿಂತಿಸಿದ್ದು, ನಾಯಿಗಳನ್ನು ಕೊಂದು ತಿನ್ನುತ್ತಿದ್ದ ಪ್ರಾಣಿಯ ಬಗ್ಗೆ ಅನುಮಾನ ಮೂಡಿತ್ತು. ಇದೀಗ ಚಿರತೆಯೇ ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ಚಿರತೆಯನ್ನು ಬಂಧಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.