
ಮಂಗಳೂರು : ದ.ಕ.ಜಿಲ್ಲೆಯಲ್ಲಿ ಸೆ.19ರಂದು ಗಣೇಶ ಚತುರ್ಥಿ ರಜೆ – ಮನವಿ ಸಲ್ಲಿಸಿದ ಎಂಎಲ್ಸಿ, ಸ್ಪಂದಿಸಿದ ಖಾದರ್, ಅಸ್ತು ಎಂದ ಸಿಎಂ
- ಕರಾವಳಿ
- September 14, 2023
- No Comment
- 106
ನ್ಯೂಸ್ ಆ್ಯರೋ : ಗಣೇಶ ಚತುರ್ಥಿ ಪ್ರಯುಕ್ತ ಸೆ.18ರಿಂದ 19ರವರೆಗೆ ಸರ್ಕಾರಿ ರಜೆ ಬದಲಾವಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಎಂಎಲ್ಸಿ ಪ್ರತಾಪಸಿಂಹ ನಾಯಕ್ ಮನವಿ ಮೇರೆಗೆ ಗುಂಡೂರಾವ್ ಸೂಚನೆ ನೀಡಿದರು. ಉಡುಪಿ ಜಿಲ್ಲೆಯಲ್ಲಿ ರಜೆ ಬದಲಾವಣೆ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ‘ ‘ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಸೆ.18ರಿಂದ 19ರ ವರೆಗೆ ಸರಕಾರಿ ಬದಲಾವಣೆ ಮಾಡಬೇಕೆಂಬ ಮನವಿಗೆ ಸ್ಪೀಕರ್ ಯು.ಟಿ.ಖಾದರ್ ತಕ್ಷಣ ಸ್ಪಂದಿಸಿದ್ದಾರೆ.
ಅವರು ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ್ದು, ಸೆಪ್ಟೆಂಬರ್ 19 ರಂದು ರಜೆ ಘೋಷಿಸುವ ಭರವಸೆ ಇದೆ ಎಂದು ಹೇಳಿದ್ದಾರೆ.

ಕರ್ನಾಟಕ ವಿಧಾನಸಭಾಧ್ಯಕ್ಷ ಮತ್ತು ಮಂಗಳೂರು (ಉಳ್ಳಾಲ) ಶಾಸಕ ಯು.ಟಿ.ಖಾದರ್ ರಜಾ ದಿನಾಂಕದ ಈ ಬದಲಾವಣೆಯನ್ನು ಸಮರ್ಥಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.