ಪುತ್ತೂರು : ನೇಣಿಗೆ ಶರಣಾದ DRDO ಯುವ ವಿಜ್ಞಾನಿ ಭರತ್ ಕಲ್ಲರ್ಪೆ – DRDO ಕಚೇರಿಯಲ್ಲಿ ಅಂಥಾದ್ದೇನಾಗಿತ್ತು?

ನ್ಯೂಸ್ ಆ್ಯರೋ : ಪುತ್ತೂರಿನ ನಿವಾಸಿ ಡಿಆರ್ಡಿಓ ಹೈದರಾಬಾದ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವ ವಿಜ್ಞಾನಿ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತರನ್ನು ಪುತ್ತೂರಿನ ಕಲ್ಲರ್ಪೆ ನಿವಾಸಿ ಭರತ್ ಕಲ್ಲರ್ಪೆ(24) ಎಂದು ಗುರುತಿಸಲಾಗಿದೆ.

ಈತ ಎರಡು ತಿಂಗಳ ಹಿಂದೆಯಷ್ಟೇ ಹೈದರಾಬಾದ್ ನಲ್ಲಿರುವ DRDO ಸಂಸ್ಥೆಗೆ ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಈ ನಡುವೆ ಕಳೆದ ಒಂದು ವಾರದ ಹಿಂದೆ ಸಂಸ್ಥೆಗೆ ರಾಜೀನಾಮೆ ನೀಡಿ ಊರಿಗೆ ಬಂದಿದ್ದರು‌. ಆದರೆ ಸಂಸ್ಥೆಗೆ ರಾಜೀನಾಮೆ ಪತ್ರ ನೀಡಿದ್ದರೂ ರಾಜೀನಾಮೆ ಸ್ವೀಕಾರ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ.

ಈ ನಡುವೆ ನಿನ್ನೆ ರಾತ್ರಿ DRDO ಕಛೇರಿಯಿಂದ ಫೋನ್ ಬಂದಿತ್ತು ಎಂದು ಹೇಳಲಾಗಿದ್ದು, ಅದಾದ ಬಳಿಕ ಅವರು ಮನೆಯ ಸಮೀಪದ ತಮ್ಮ ತೋಟದ ಮರವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ಕುರಿತಂತೆ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.