
ಬಂಟ್ವಾಳದಲ್ಲಿ ರಿಯಲ್ ಗರುಡಗಮನ ವೃಷಭವಾಹನ ; ಹುಲಿ ವೇಷ ವಿಚಾರವಾಗಿ ಎರಡು ತಂಡಗಳ ನಡುವೆ ಘರ್ಷಣೆ – ಸಹೋದರರಿಬ್ಬರಿಗೆ ಚೂರಿ ಇರಿತ, ಆರೋಪಿಗಳು ಪರಾರಿ..!
- ಕರಾವಳಿ
- October 26, 2023
- No Comment
- 128
ನ್ಯೂಸ್ ಆ್ಯರೋ : ಹುಲಿ ವೇಷದ ವಿಚಾರವಾಗಿ ಎರಡು ತಂಡಗಳ ನಡುವೆ ಘರ್ಷಣೆ ಉಂಟಾಗಿದ್ದು, ಬಳಿಕ ಒಂದೇ ತಂಡದ ಇಬ್ಬರು ಯುವಕರಿಗೆ ಎದುರಾಳಿ ತಂಡದವರು ಚೂರಿ ಇರಿದ ಘಟನೆ ಬಂಟ್ವಾಳ ತಾಲೂಕಿನ ಮೇಲ್ಕಾರಿನಲ್ಲಿ ಇಂದು ರಾತ್ರಿ ನಡೆದಿದೆ.
ಬಂಟ್ವಾಳ ತಾಲೂಕಿನ ಮೆಲ್ಕಾರಿನಲ್ಲಿ ಈ ಘಟನೆ ನಡೆದಿದ್ದು ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎನ್ನುವ ಮಾಹಿತಿ ದೊರೆತಿದೆ.
ಎರಡು ದಿನಗಳ ಹಿಂದೆಯಷ್ಟೇ ಮೇಲ್ಕಾರಿನಲ್ಲಿ ಈ ಎರಡು ತಂಡಗಳ ನಡುವೆ ಹುಲಿ ವೇಷ ವಿಚಾರವಾಗಿ ಗಲಾಟೆ ನಡೆದಿತ್ತು. ಆಗ ಎರಡೂ ತಂಡಗಳ ಸದಸ್ಯರು ಕೂಡ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಇದೇ ದ್ವೇಷದ ಹಿನ್ನೆಲೆಯಲ್ಲಿ ಘಟನೆ ನಡೆದಿದ್ದು, ಸಹೋದರರಾದ ಸಂದೀಪ್ ಮತ್ತು ಸಂತು ಚೂರಿ ಇರಿತಕ್ಕೊಳಗಾದವರಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.