
ಪುತ್ತೂರು : ಜಗಳವಾಡಿದ ಬಳಿಕ ಯುವತಿಯ ಕತ್ತು ಸೀಳಿ ಪರಾರಿಯಾದ ಯುವಕ – ರಕ್ತಸಿಕ್ತ ಸ್ಥಿತಿಯಲ್ಲಿ ರಸ್ತೆ ಬದಿಯೇ ಕುಸಿದು ಬಿದ್ದ ಯುವತಿ
- ಕರಾವಳಿ
- August 24, 2023
- No Comment
- 150
ನ್ಯೂಸ್ ಆ್ಯರೋ : ಬಸ್ ಸ್ಟಾಂಡ್ ನಲ್ಲಿ ಯುವತಿಯ ಜೊತೆ ಜಗಳವಾದ ಬಳಿಕ ಆಕೆಯ ಬೆನ್ನತ್ತಿ ಬಂದ ಯುವಕನೊಬ್ಬ ಪೋಲಿಸ್ ಠಾಣೆಯ ಸಮೀಪವೇ ಯುವತಿಯ ಕತ್ತು ಸೀಳಿ ಪರಾರಿಯಾದ ಘಟನೆ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲೇ ನಡೆದಿರುವ ಘಟನೆ ಇದಾಗಿದ್ದು, ಮೂರರಿಂದ ನಾಲ್ಕು ಬಾರಿ ಆ ಯುವಕ ಯುವತಿಯ ಕತ್ತು ಸೀಳಿದ್ದಾನೆ ಎನ್ನಲಾಗಿದೆ.
ಮೊದಲಿಗೆ ಪುತ್ತೂರು ಬಸ್ ನಿಲ್ದಾಣದಲ್ಲಿ ಯುವಕ ಮತ್ತು ಯುವತಿ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಕೊನೆಗೆ ಆಕೆ ಮಹಿಳಾ ಪೊಲೀಸ್ ಠಾಣೆಯ ಬಳಿ ಬಂದಾಗ ಬೈಕ್ ನಲ್ಲಿ ಬಂದ ಯುವಕ ಆಕೆಯ ಕತ್ತಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ.
ಗಾಯಗೊಂಡ ಯುವತಿಯನ್ನು ಕುದ್ದು ಪದವಿನ ವಿಜಯನ್ ಎಂಬವರ ಪುತ್ರಿ ಗೌರಿ ಎಂದು ಗುರುತಿಸಲಾಗಿದ್ದು, ಯುವಕನ ಬೈಕ್ ನಂಬರ್ ಆಧಾರದಲ್ಲಿ ಬರೆಪ್ಪಾಡಿಯ ಪದ್ಮರಾಜ್ ಎಂದು ಹೇಳಲಾಗಿದೆ.
ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಶಿಫ್ಟ್ ಮಾಡಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.