
ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ ಭೇಟಿ ನೀಡಿದ ರಕ್ಷಿತಾ ಪ್ರೇಮ್ – ಕೊರಗಜ್ಜನ ಬಗ್ಗೆ ಭಕ್ತಿಯಿಂದ ಏನ್ ಹೇಳಿದ್ರು ನೋಡಿ…
- ಕರಾವಳಿ
- September 2, 2023
- No Comment
- 85
ನ್ಯೂಸ್ ಆ್ಯರೋ : ಸ್ಯಾಂಡಲ್ ವುಡ್ ಸ್ಟಾರ್ ನಟಿಯಾಗಿದ್ದ ರಕ್ಷಿತಾ ಪ್ರೇಮ್ ಅವರು ಕುತ್ತಾರಿನ ಕೊರಗಜ್ಜ ದೈವದ ಆದಿಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಳಿಕ ಅವರು ಕುತ್ತಾರು ಭಂಡಾರ ಬೈಲಿನ ಪಂಜಂದಾಯ, ಬಂಟ, ವೈದ್ಯನಾಥ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕುತ್ತಾರಿನ ಕೊರಗಜ್ಜ ಮತ್ತು ಪಂಜಂದಾಯ, ಬಂಟ ಕ್ಷೇತ್ರದ ಕಾರಣೀಕ ಹೇಳಲು ಅಸಾಧ್ಯ. ಕೊರಗಜ್ಜನೇ ಇಲ್ಲಿಗೆ ಮೂರು ತಿಂಗಳಿಗೊಮ್ಮೆ ನನ್ನನ್ನು ಕರೆಸ್ಕೋತಾರೆ ಅಂದುಕೊಂಡಿದ್ದೇನೆ. ವಿಶೇಷವಾಗಿ ಭಂಡಾರ ಬೈಲಿನ ಪಂಜಂದಾಯ ದೈವದ ಕ್ಷೇತ್ರವು ಪ್ರಶಾಂತವಾಗಿ ಮನಸಿಗೆ ನೆಮ್ಮದಿ ಕೊಡುತ್ತದೆ. ಹಾಗಾಗಿ ಕುತ್ತಾರಿಗೆ ಭೇಟಿ ನೀಡಿದಾಗ ಪಂಜಂದಾಯ ಕ್ಷೇತ್ರದಲ್ಲಿ ಕುಳಿತು ಹೋಗುತ್ತೇನೆ. ಹೆಚ್ಚಿನ ಬೇಡಿಕೆ ಏನೂ ಇಡಲ್ಲ, ಎಲ್ಲವನ್ನೂ ಕೊಟ್ಟ ದೈವ, ದೇವತೆಗಳು ನನ್ನ ಕೈಬಿಡದಂತೆ ಪ್ರಾರ್ಥಿಸುತ್ತೇನೆ.
ಇಲ್ಲಿಂದ ಪ್ರತೀ ಬಾರಿ ಕಟೀಲು, ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡುವ ವಾಡಿಕೆ ಬೆಳೆಸಿದ್ದೇನೆ. ಹಾಗೆಯೇ ಕುತ್ತಾರು ಕೊರಗಜ್ಜನ ಆದಿಸ್ಥಳ, ಭಂಡಾರ ಬೈಲು ಪಂಜಂದಾಯ, ಬಂಟ, ವೈದ್ಯನಾಥ ಕ್ಷೇತ್ರಕ್ಕೆ ಮೂರು ತಿಂಗಳಿಗೊಮ್ಮೆ ಬಂದೇ ಬರ್ತೇನೆ ಎಂದು ಸ್ಯಾಂಡಲ್ ವುಡ್ ನಟಿ ರಕ್ಷಿತಾ ಪ್ರೇಮ್ ಹೇಳಿದ್ದಾರೆ.
ರಕ್ಷಿತಾ ಭೇಟಿಯ ವೇಳೆ ಅಪಾರ ಅಭಿಮಾನಿಗಳ ಹಾಜರಿದ್ದು ನೆಚ್ಚಿನ ನಟಿ ರಕ್ಷಿತಾ ಜೊತೆ ಸೆಲ್ಫಿ ತೆಗೆದು ಸಂಭ್ರಮಿಸಿದರು.