ಸ್ಯಾಮ್ ಸಂಗ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್; ಚಾಲೆಂಜ್ ಗೆಲ್ಲಿ ಗ್ಯಾಲಕ್ಸಿ ವಾಚ್ ಅಲ್ಟ್ರಾ ನಿಮ್ಮದಾಗಿಸಿಕೊಳ್ಳಿ
ನ್ಯೂಸ್ ಆ್ಯರೋ: ಸ್ಯಾಮ್ ಸಂಗ್ ತನ್ನ ಗ್ರಾಹಕರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡ್ತಿದೆ. ಆರೋಗ್ಯದ ಜೊತೆ ಭರ್ಜರಿ ಗಿಫ್ಟ್ ನೀಡಲು ಸ್ಯಾಮ್ ಸಂಗ್ ಮುಂದಾಗಿದೆ. ಸ್ಯಾಮ್‌ಸಂಗ್ ಇಂಡಿಯಾ, ವಾಕ್-ಎ-ಥಾನ್ ಇಂಡಿಯಾ ಚಾಲೆಂಜ್ ಘೋಷಿಸಿ, ಬಳಕೆದಾರರನ್ನು ರೋಮಾಂಚನಗೊಳಿಸಿದೆ. ಇದ್ರಲ್ಲಿ ನೀವು ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ವಾಚ್ ಅಲ್ಟ್ರಾ ಗೆಲ್ಲುವ ಅವಕಾಶ ಸಿಗ್ತಿದೆ.
ಭಾರತೀಯ ಬಳಕೆದಾರರಿಗಾಗಿ ಪ್ರತ್ಯೇಕವಾಗಿ ರಚಿಸಲಾದ ಒಂದು ವಿಶಿಷ್ಟ ಉಪಕ್ರಮ ಸ್ಯಾಮ್‌ಸಂಗ್ ಹೆಲ್ತ್ ಅಪ್ಲಿಕೇಶನ್. ಜನವರಿ 30 ರಿಂದಲೇ ವಾಕ್-ಎ-ಥಾನ್ ಇಂಡಿಯಾ ಚಾಲೆಂಜ್ ಶುರುವಾಗಿದೆ. ಫೆಬ್ರವರಿ 28, 2025 ರವರೆಗೆ ಈ ಚಾಲೆಂಜ್ ಇರಲಿದೆ. ಈ ದಿನದಲ್ಲಿ ನೀವು 200,000 ಹೆಜ್ಜೆ ನಡೆಯಬೇಕು. 30 ದಿನಗಳಲ್ಲಿ ನೀವು 200,000 ಹೆಜ್ಜೆ ನಡೆದ್ರೆ ನೀವು ಚಾಲೆಂಜ್ ಗೆಲ್ಲಲಿದ್ದೀರಿ. ಸ್ಯಾಮ್‌ಸಂಗ್ ಹೆಲ್ತ್‌ನ ಟುಗೆದರ್ ವೈಶಿಷ್ಟ್ಯದಿಂದ ನಡೆಸಲ್ಪಡುವ ಈ ಚಾಲೆಂಜ್ ಉದ್ದೇಶ ಕೇವಲ ಫಿಟ್‌ನೆಸ್ ಮಾತ್ರ ಅಲ್ಲ. ಇದು ಸಮುದಾಯ, ಆರೋಗ್ಯಕರ ಸ್ಪರ್ಧೆ ಮತ್ತು ವೈಯಕ್ತಿಕ ಸಾಧನೆಯ ಪ್ರಜ್ಞೆಯನ್ನು ಬೆಳೆಸುವುದಾಗಿದೆ.
ನೀವು 200,000 ಹೆಜ್ಜೆಯ ಚಾಲೆಂಜ್ ಪೂರ್ಣಗೊಳಿಸಿದ ನಂತ್ರ ಸ್ಯಾಮ್‌ಸಂಗ್ ಸದಸ್ಯರ ಅಪ್ಲಿಕೇಶನ್‌ನಲ್ಲಿ ಸ್ಕ್ರೀನ್ ಶಾರ್ಟ್ ಪೋಸ್ಟ್ ಮಾಡ್ಬೇಕು. ಪಾಲ್ಗೊಂಡವರಲ್ಲಿ ಮೂವರನ್ನು ಕಂಪನಿ ಅದೃಷ್ಟಶಾಲಿ ವಿಜೇತರನ್ನಾಗಿ ಆಯ್ಕೆ ಮಾಡುತ್ತದೆ. ಗೆದ್ದ ಮೂವರಿಗೆ ಗ್ಯಾಲಕ್ಸಿ ವಾಚ್ ಅಲ್ಟ್ರಾ ( Galaxy Watch Ultra) ಸಿಗಲಿದೆ.
ಇನ್ನು ಭಾರತದಲ್ಲಿ ಸ್ಯಾಮ್‌ಸಂಗ್ ಹೆಲ್ತ್ ಅಪ್ಲಿಕೇಶನ್ಗೆ ಎಂಟ್ರಿಯಾದಾಗ ಎಲ್ಲ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಉಚಿತವಾಘಿ ಸಿಗಲಿದೆ. ಮೊದಲು ನೀವು ಸ್ಯಾಮ್ ಸಂಗ್ ಹೆಲ್ತ್ ಅಪ್ಲಿಕೇಶನ್ ಓಪನ್ ಮಾಡ್ಬೇಕು. ಅಲ್ಲಿ ಟುಗೆದರ್ ಆಯ್ಕೆ ಮಾಡಿ. ಜನವರಿ 30, 2025 ರಿಂದ ಪ್ರಾರಂಭವಾಗಿರುವ ವಾಕ್-ಎ-ಥಾನ್ ಇಂಡಿಯಾ ಚಾಲೆಂಜ್ ಗೆ ಜಾಯಿನ್ ಆಗಿ. ನೀವು ವಾಕ್ ಮಾಡುವಾಗ ಬೂಟುಗಳನ್ನು ಧರಿಸಿ. ನಿಮ್ಮ ಹೆಜ್ಜೆಗಳನ್ನು ಟ್ರ್ಯಾಕ್ ಮಾಡಿ ಮತ್ತು 30 ದಿನಗಳಲ್ಲಿ 200,000 ಹೆಜ್ಜೆಗಳನ್ನು ನಡೆಯಿರಿ. ಲಕ್ಕಿ ಡ್ರಾಗೆ ಅರ್ಹತೆ ಪಡೆಯಲು ನೀವು ಪೂರ್ಣಗೊಂಡ ಸ್ಕ್ರೀನ್‌ಶಾಟ್ ಅನ್ನು #WalkathonIndia ನಲ್ಲಿ Samsung ಸದಸ್ಯರ ಅಪ್ಲಿಕೇಶನ್‌ನಲ್ಲಿ ಪೋಸ್ಟ್ ಮಾಡಿ.
ಸ್ಯಾಮ್‌ಸಂಗ್ ಹೆಲ್ತ್, ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿವೆ. ಈ ಭಾರತದ ಜನರಿಗೆ ನಿರ್ದಿಷ್ಟ ಸವಾಲನ್ನು ನೀಡಿದೆ. ಇದು ಎಲ್ಲರನ್ನು ಒಂದು ಸಮುದಾಯವಾಗಿ ಒಗ್ಗೂಡಿಸಲು, ಸಣ್ಣ ವಿಜಯಗಳನ್ನು ಆಚರಿಸಲು ಮತ್ತು ಉತ್ತಮ ಭವಿಷ್ಯದತ್ತ ದೊಡ್ಡ ಹೆಜ್ಜೆ ಇಡಲು ಒಂದು ಅವಕಾಶವಾಗಿದೆ.
Leave a Comment