
ಕೇಂದ್ರ ಲೋಕಸೇವಾ ಆಯೋಗದಿಂದ ಡಿಗ್ರಿ ಪಾಸಾದ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ – 577 ಹುದ್ದೆಗಳಿಗೆ ಅರ್ಜಿ ಆಹ್ವಾನ
- ಉದ್ಯೋಗ ಮಾಹಿತಿ
- February 22, 2023
- No Comment
- 92
ನ್ಯೂಸ್ ಆ್ಯರೋ : ಕೇಂದ್ರ ಲೋಕಸೇವಾ ಆಯೋಗವು ನಿರುದ್ಯೋಗಿಗಳಿಗೆ ಸಿಹಿಸುದ್ದಿ ನೀಡಿದೆ. ಕೇಂದ್ರ ಕಾರ್ಮಿಕ ಇಲಾಖೆಯ ಅಧೀನದಲ್ಲಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು 577 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ.
ಯುಪಿಎಸ್‌ಪಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಜಾರಿ ಅಧಿಕಾರಿ (ಇಒ), ಖಾತೆ ಅಧಿಕಾರಿ (ಎಒ) ಮತ್ತು ಸಹಾಯಕ ಭವಿಷ್ಯ ನಿಧಿ ಆಯುಕ್ತ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನಾಲ್ಕೈದು ದಿನಗಳಲ್ಲಿ ಈ ಪರೀಕ್ಷೆಯ ಸಂಪೂರ್ಣ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ.
ಪರೀಕ್ಷಾ ದಿನಾಂಕ ಮತ್ತು ಎಲ್ಲಾ ಇತರ ವಿವರಗಳೊಂದಿಗೆ ಅಧಿಸೂಚನೆಯನ್ನು ಕೆಲವೇ ದಿನಗಳಲ್ಲಿ upsc.gov.in / upsconline.nic.in ಮೂಲಕ ಬಿಡುಗಡೆ ಮಾಡಲಾಗುತ್ತದೆ. ಇದು ಈ ಉದ್ಯೋಗಗಳ ಬಗ್ಗೆ ಹೆಚ್ಚು ಸ್ಪಷ್ಟತೆಯನ್ನ ತರುತ್ತದೆ. UPSC ಈ ಹುದ್ದೆಗಳಿಗೆ ಆನ್ಲೈನ್ ಅರ್ಜಿಗಳನ್ನ ಸ್ವೀಕರಿಸುತ್ತದೆ.
ಪ್ರಮುಖ ವಿವರಗಳು:
ಒಟ್ಟು ಉದ್ಯೋಗಗಳು : 577. ಅವುಗಳಲ್ಲಿ 418 ಎನ್ಫೋರ್ಸ್ಮೆಂಟ್ ಆಫೀಸರ್ (ಇಒ)/ ಅಕೌಂಟ್ಸ್ ಆಫೀಸರ್ (ಎಒ) ಹುದ್ದೆಗಳು ಮತ್ತು 159 ಅಸಿಸ್ಟೆಂಟ್ ಪ್ರಾವಿಡೆಂಟ್ ಫಂಡ್ ಕಮಿಷನರ್ ಹುದ್ದೆಗಳು ಸೇರಿವೆ.
ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಫೆ. 25 ರಂದು ಮಧ್ಯಾಹ್ನ 12 ರಿಂದ ಪ್ರಾರಂಭವಾಗುತ್ತದೆ. ಇದು ಮಾರ್ಚ್ 17 ರಂದು ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ.
ಶೈಕ್ಷಣಿಕ ಅರ್ಹತೆ/ ವಯಸ್ಸಿನ ಮಿತಿ: ಯಾವುದೇ ಪದವಿ. EO/AO ಉದ್ಯೋಗಗಳಿಗೆ 18 ರಿಂದ 30 ವರ್ಷಗಳು. APFC ಹುದ್ದೆಗಳಿಗೆ ವಯೋಮಿತಿ 18 ರಿಂದ 35 ವರ್ಷಗಳು.
ಪರೀಕ್ಷಾ ಶುಲ್ಕ: ಸಾಮಾನ್ಯ / ಒಬಿಸಿ/ ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ ₹ 25. ಎಸ್‌ಸಿ, ಎಸ್‌ಟಿ, ಪಿಬಿಡಬ್ಲ್ಯೂಡಿ ಮತ್ತು ಮಹಿಳೆಯರಿಗೆ ಯಾವುದೇ ಶುಲ್ಕವಿಲ್ಲ. ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು.
ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ವಿಧಾನ
- ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಮೊದಲು ಅಧಿಕೃತ ವೆಬ್ಸೈಟ್ upsconline.nic.in ಗೆ ಹೋಗಬೇಕು
- ಅಪ್ಲಿಕೇಶನ್ ತೆರದ ನಂತರ ಯುಪಿಎಸ್ಸಿ ಇಪಿಎಫ್‌ಒ ನೇಮಕಾತಿ 2023 ಲಿಂಕ್ ಓಪನ್ ಮಾಡಬೇಕು
- ಮುಂದಿನ ಪುಟದಲ್ಲಿ ಅಗತ್ಯವಿರುವ ವಿವರಗಳನ್ನ ಭರ್ತಿ ಮಾಡುವ ಮೂಲಕ ನೋಂದಣಿ ಮಾಡಲಾಗುತ್ತದೆ.
- ನೋಂದಣಿ ನಂತರ, ಅಭ್ಯರ್ಥಿಗಳು ಅರ್ಜಿ ನಮೂನೆಯನ್ನ ಭರ್ತಿ ಮಾಡಬಹುದು.
- ಅರ್ಜಿಯನ್ನ ಸಲ್ಲಿಸಿದ ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಬೇಕು.