ಸಶಸ್ತ್ರ, ಕಾನ್ಸ್ ಟೇಬಲ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಭಾವ್ಯ ದಿನಾಂಕ ಪ್ರಕಟ: ಜುಲೈ 2ರಿಂದ ಲಿಖಿತ ಪರೀಕ್ಷೆ ಆರಂಭ
- ಉದ್ಯೋಗ ಮಾಹಿತಿ
- March 27, 2023
- No Comment
- 250
ನ್ಯೂಸ್ ಆ್ಯರೋ : ಕರ್ನಾಟಕ ಪೊಲೀಸ್ ಇಲಾಖೆಯ ಸಶಸ್ತ್ರ ಹಾಗೂ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುವ ಸಂಭಾವ್ಯ ಪಟ್ಟಿಯನ್ನು ಕರ್ನಾಟಕ ಡಿಜಿಪಿ ಅವರು ಟ್ವೀಟ್ ಮಾಡಿದ್ದಾರೆ.
ಜುಲೈ 2, 9, 16 ಹಾಗೂ 23 ರಂದು ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಸಂಭಾವ್ಯ ಪಟ್ಟಿಯನ್ನು ಕರ್ನಾಟಕ ಡಿಜಿಪಿ ಟ್ವೀಟ್ ಮಾಡಿದ್ದಾರೆ.
ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ 1137+45ಎಚ್ ಕೆ ಹುದ್ದೆಗಳಿಗೆ ಪೊಲೀಸ್ ಇಲಾಖೆಯು 2022 ರ ಅಕ್ಟೋಬರ್ 20 ರಂದು ಅಧಿಸೂಚನೆ ಹೊರಡಿಸಿ, ನವೆಂಬರ್ 21ರ ವರೆಗೆ ಅರ್ಜಿ ಸ್ವೀಕಾರಿಸಲಾಗಿತ್ತು.
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ 3064 (ಉಳಿಕೆ ಮೂಲ ವೃಂದ) ಮತ್ತು 420 ಹೈದೆರಾಬಾದ್ ಕರ್ನಾಟಕ ಹುದ್ದೆಗಳ ಭರ್ತಿಗೆ 2022 ರ ಸೆಪ್ಟೆಂಬರ್ 19 ರಂದು ಅಧಿಸೂಚನೆ ಬಿಡುಗಡೆ ಮಾಡಿ, ನವೆಂಬರ್ 30ರ ವರೆಗೆ ಅರ್ಜಿ ಸ್ವೀಕರಿಸಲಾಗಿತ್ತು.