
ಭಾರತೀಯ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ – SSLC ಪಾಸಾದವರು ಅರ್ಜಿ ಸಲ್ಲಿಸಿ..
- ಉದ್ಯೋಗ ಮಾಹಿತಿ
- February 3, 2023
- No Comment
- 141
ನ್ಯೂಸ್ ಆ್ಯರೋ : ಭಾರತೀಯ ಅಂಚೆ ಇದೀಗ ಎಸ್‌ಎಸ್‌ಎಲ್‌ಸಿ ಉತ್ತೀರ್ಣವಾದ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಬರೋಬ್ಬರಿ 40,889 ಜಿಡಿಎಸ್ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.
ಗ್ರಾಮೀಣ ಡಾಕ್ ಸೇವಕ್, ಬ್ರ್ಯಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ / 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರನ್ನು ಅವರ ಎಸ್‌ಎಸ್‌ಎಲ್‌ಸಿ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ. ಹುದ್ದೆಗಳ ಕುರಿತು ಇತರೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಒಟ್ಟು 40889 ಹುದ್ದೆಗಳು ಖಾಲಿ ಇದ್ದು, ಕರ್ನಾಟಕದಲ್ಲಿ 3036 ಉದ್ಯೋಗವಕಾಶವಿದೆ.
ಶೈಕ್ಷಣಿಕ ಅರ್ಹತೆ
ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀಣವಾಗಿರುವವರು ಅರ್ಜಿ ಸಲ್ಲಿಸಬಹುದು.
ವಯಸ್ಸಿನ ಮಿತಿ
ಅರ್ಜಿ ಸಲ್ಲಿಸಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಠ 40 ವರ್ಷ ವಯಸ್ಸಾಗಿರಬೇಕು. ಅಧಿಸೂಚನೆಯಲ್ಲಿ ನೀಡಿರುವ ಪ್ರಕಾರ, ಎಸ್‌ಸಿ, ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ 05 ವರ್ಷ ಹಾಗೂ ಹಿಂದುಳಿದ ವರ್ಗದವರಿಗೆ ಮೂರು ವರ್ಷ ವಯಸ್ಸಿನ ಸಡಿಲಿಕೆ ಇದೆ. ಅಂಗವಿಕಲರಿಗೆ ಒಟ್ಟು 10ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ವೇತನದ ವಿವರ
ಅಂಚೆ ಇಲಾಖೆಯ ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ (ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗೆ) 12,000 ರೂ.ನಿಂದ 29,3800 ರೂಪಾಯಿ ಹಾಗೂ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮ್ಯಾನೇಜರ್ ಹುದ್ದೆಗೆ 10,000ರೂ. ನಿಂದ 24,470ರೂ. ಸಂಬಳ ಇರಲಿದೆ.
ಅರ್ಜಿ ಶುಲ್ಕ/ ಆಯ್ಕೆ ಹೇಗಿರಲಿದೆ?
ಎಲ್ಲ ವರ್ಗದವರಿಗೂ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಕೆ ಶುಲ್ಕ 100 ರೂ. ಇರಲಿದ್ದು, ಇನ್ನು ಅಭ್ಯರ್ಥಿಗಳನ್ನು ಮೊದಲು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ನಂತರ ಮೆರಿಟ್ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ. ಅರ್ಜಿ ಸಲ್ಲಿಕೆಗೆ ಫೆಬ್ರವರಿ 16 ಕೊನೆಯ ದಿನವಾಗಿದೆ.