10th,12th ಪದವಿ ಪಾಸಾದವರಿಗೆ BARC ನಲ್ಲಿ ಭರ್ಜರಿ ಉದ್ಯೋಗಾವಕಾಶ – ಖಾಲಿಯಿರುವ 4374 ಹುದ್ದೆಗಳ ನೇಮಕಾತಿ, ವೇತನದ ಬಗ್ಗೆ ಇಲ್ಲಿದೆ ಮಾಹಿತಿ…

10th,12th ಪದವಿ ಪಾಸಾದವರಿಗೆ BARC ನಲ್ಲಿ ಭರ್ಜರಿ ಉದ್ಯೋಗಾವಕಾಶ – ಖಾಲಿಯಿರುವ 4374 ಹುದ್ದೆಗಳ ನೇಮಕಾತಿ, ವೇತನದ ಬಗ್ಗೆ ಇಲ್ಲಿದೆ ಮಾಹಿತಿ…

ನ್ಯೂಸ್ ಆ್ಯರೋ : ಉದ್ಯೋಗ ಅರಸುತ್ತಿರುವವರಿಗೆ ಒಂದು ಗುಡ್ ನ್ಯೂಸ್. ಬಾಬಾ ಅಣುವಿದ್ಯುತ್ ಪರಿಶೋಧನಾ ಕೇಂದ್ರ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದ್ದು, ಈ ಹುದ್ದೆಗಳನ್ನು ನೇರ ನೇಮಕಾತಿ ಮತ್ತು ತರಬೇತಿ ಯೋಜನೆಯಡಿ ನೇಮಕ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಏಪ್ರಿಲ್ 24ರಿಂದ ಮೇ.22ರ ವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

BARC ನಲ್ಲಿ‌ ಒಟ್ಟು 4,374 ಹುದ್ದೆಗಳು ಖಾಲಿ ಇದ್ದು ಅವುಗಳಲ್ಲಿ 212 ಹುದ್ದೆಗಳನ್ನು‌ ನೇರ ನೇಮಕಾತಿ ಮೂಲಕ ಹಾಗೂ 4,162 ಹುದ್ದೆಗಳನ್ನು ತರಬೇತಿ ಯೋಜನೆಯಡಿ ಭರ್ತಿ ಮಾಡಲಾಗುತ್ತದೆ. ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21,500 ರಿಂದ 56,100ರ ವರೆಗೆ ವೇತನ ನೀಡಲಾಗುವುದು.

ಖಾಲಿ ಇರುವ ಹುದ್ದೆಗಳು

ಬಯೋ ಸೈನ್ಸ್, ಕೆಮಿಸ್ಟ್ರಿ, ಫಿಸಿಕ್ಸ್, ಆರ್ಕಿಟೆಕ್ಚರ್, ಕೆಮಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಡ್ರಿಲ್ಲಿಂಗ್, ಎಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಮೆಟಲರ್ಜಿ, ಇನ್ಸ್ಟ್ರುಮೆಂಟ್ಸ್, ಮೆಕ್ಯಾನಿಕಲ್, ಮೈನಿಂಗ್ ಇತ್ಯಾದಿ ವಿಭಾಗಿಯ ಹುದ್ದೆಗಳು ಖಾಲಿ‌ ಇವೆ.

ವಿದ್ಯಾರ್ಹತೆ ಏನು?

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10th,12th, ಐಟಿಐ, ಡಿಪ್ಲೊಮಾ, ಬಿಇ, ಬಿಟೆಕ್, ಬಿಎಸ್ಸಿ, ಎಂಎಸ್ಸಿ, ಎಂಎಲ್ಐಎಸ್ಸಿ ಪದವಿ ಪಡೆದಿರಬೇಕು.

ವಯೋಮಿತಿ

2023 ಮೇ 22ಕ್ಕೆ ಅನುಗುಣವಾಗುವಂತೆ ಟೆಕ್ನಿಕಲ್ ಆಫೀಸ್‌ಗೆ 18-35 ವರ್ಷ, ಸೈಂಟಿಫಿಕ್‌ ಅಸಿಸ್ಟೆಂಟ್ ಗೆ 18-25 ವರ್ಷಗಳು, ಸ್ಟೈಫಂಡರಿ ಟ್ರೈನಿ ವರ್ಗ-1ಕ್ಕೆ 19-24 ವರ್ಷ ಹಾಗೂ ಸ್ಟೈಫಂಡರಿ ಟ್ರೈನಿ ವರ್ಗ-2ಕ್ಕೆ 18-22 ವರ್ಷಗಳಾಗಿರಬೇಕು.

ಅರ್ಜಿ ಶುಲ್ಕ

ಇನ್ನು ಅರ್ಜಿ ಶುಲ್ಕದ ಬಗ್ಗೆ ನೋಡುವುದಾದರೆ ಸಾಮಾನ್ಯ ವರ್ಗಕ್ಕೆ 500 ಹಾಗೂ SC/ST, ಅಂಗವಿಕಲ ಮತ್ತು‌ ಮಹಿಳೆಯರಿಗೆ ಶುಲ್ಕದ ಮೇಲೆ ಸಂಪೂರ್ಣ ವಿನಾಯಿತಿ ಇದೆ.

ಆಯ್ಕೆ ಪ್ರಕ್ರಿಯೆ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಪ್ರಾಥಮಿಕ ಪರೀಕ್ಷೆ, ಸುಧಾರಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಸಂದರ್ಶನ, ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪೂರ್ವಭಾವಿ ಪರೀಕ್ಷೆ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ‌ ಇದ್ದು, ಒಟ್ಟು 50 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಇದರಲ್ಲಿ ಗಣಿತಕ್ಕೆ 20, ವಿಜ್ಞಾನಕ್ಕೆ 20 ಮತ್ತು ಸಾಮಾನ್ಯ ಜ್ಞಾನಕ್ಕೆ 10 ಅಂಕ ನಿಗದಿಪಡಿಸಲಾಗಿದೆ. ಪ್ರತಿ ಒಂದು ಸರಿ ಉತ್ತರಕ್ಕೆ 3 ಅಂಕಗಳು ಹಾಗೂ ಪ್ರತಿ ತಪ್ಪು ಉತ್ತರಕ್ಕೆ 1 ಅಂಕಗಳ ಕಡಿತವಾಗಲಿದೆ‌.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *