ದಿನಕ್ಕೆ 36,000 ಸಂಬಳದೊಂದಿಗೆ ಇನ್ನಷ್ಟು ಕೊಡುಗೆಗಳು – ಆದ್ರೆ ಕೆಲ್ಸಕ್ಕೆ ಜನರೇ ಬರುತ್ತಿಲ್ಲ..!!

ದಿನಕ್ಕೆ 36,000 ಸಂಬಳದೊಂದಿಗೆ ಇನ್ನಷ್ಟು ಕೊಡುಗೆಗಳು – ಆದ್ರೆ ಕೆಲ್ಸಕ್ಕೆ ಜನರೇ ಬರುತ್ತಿಲ್ಲ..!!

ನ್ಯೂಸ್ ಆ್ಯರೋ : ಒಳ್ಳೆಯ ಉದ್ಯೋಗ, ಒಂದಿಷ್ಟು ಇತರೆ ಸೌಕರ್ಯಗಳಿರುವ ಕೆಲಸಕ್ಕಾಗಿ ಎಲ್ಲರೂ ಹವಣಿಸುತ್ತಾರೆ. ಹಾಗಿರುವಾಗ ಪ್ರಯಾಣದ ರಜೆ, ತಿಂಗಳಿಗೆ 4 ಲಕ್ಷ ಆರಂಭಿಕ ವೇತನ ಇರುವಂತಹ ಕೆಲಸ ಸಿಕ್ಕಿದ್ರೆ ಯಾರಾದ್ರೂ ಬೇಡ ಅನ್ನುತ್ತಾರಾ?

ಇದು ಸುಳ್ಳಲ್ಲ. ಇಂತಹದ್ದೊಂದು ಸುವರ್ಣಾವಕಾಶದ ಬಾಗಿಲು ಈಗಲೂ ತೆರೆದೇ ಇದೆ. ಆದರೆ ಈ ಕೆಲಸಕ್ಕೆ ಸೇರಲು ಜನರೆ ಸಿಗುತ್ತಿಲ್ಲ. ಸ್ಕಾಟ್ಲೆಂಡ್‌ನ ಅಬರ್ಡೀನ್ ಕರಾವಳಿಯ ಉತ್ತರ ಸಮುದ್ರದಲ್ಲಿ ನೆಲೆಗೊಂಡಿರುವ ಕಡಲಾಚೆಯ ರಿಗ್ಗರ್‌ ಉದ್ಯೋಗಕ್ಕಾಗಿ ಇಂಥದ್ದೊಂದು ಆಫರ್‌ ನೀಡಲಾಗಿದೆ. ರಿಗ್ ಎಂಬುದು ನೀರಿನಲ್ಲಿ ಅಥವಾ ಬಾವಿಗಳನ್ನು ಕೊರೆಯಲು, ತೈಲ ಮತ್ತು ಅನಿಲವನ್ನು ಹೊರತೆಗೆಯಲು, ಸಂಸ್ಕರಿಸಲು, ಅದನ್ನು ಭೂಮಿಗೆ ಸಾಗಿಸುವವರೆಗೆ ಸಂಗ್ರಹಿಸಲು ಬಳಸಲಾಗುವ ಒಂದು ದೊಡ್ಡ ರಚನೆ.

ಈ ಹುದ್ದೆಗೆ ನೇಮಕಗೊಂಡವರನ್ನು ಒಂದೇ ಬಾರಿಗೆ ಒಂದರಿಂದ ಆರು ತಿಂಗಳ ಅವಧಿಗೆ ಆಫ್‌ಶೋರ್ ರಿಗ್‌ಗೆ ಕಳುಹಿಸಲಾಗುವುದು. ಅವರು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕು, ದಿನಕ್ಕೆ 36,000 ರೂಪಾಯಿ ಮೂಲ ವೇತನ ನೀಡಲಾಗುತ್ತದೆ. ಎಂಡಿಇ ಕನ್ಸಲ್ಟೆಂಟ್ಸ್ ಸಂಸ್ಥೆ ಈ ಆಫರ್‌ ಕೊಟ್ಟಿದೆ. ಆದರೆ ಉದ್ಯೋಗಿ 2 ವರ್ಷಗಳ ಕಾಲ ಅಲ್ಲೇ ಇರಬೇಕು.

ತಲಾ 6-6 ತಿಂಗಳ 2 ಶಿಫ್ಟ್‌ಗಳನ್ನು ಪೂರ್ಣಗೊಳಿಸಿದರೆ ನಂತರ ಸಂಬಳ 95,420 ಡಾಲರ್‌ ಅಂದ್ರೆ ಸುಮಾರು 1 ಕೋಟಿ ರೂಪಾಯಿವರೆಗೆ ಹೆಚ್ಚಳವಾಗಲಿದೆ ಎಂದು‌ ಕನ್ಸಲ್ಟನ್ಸಿ ತಿಳಿಸಿದೆ.

ಇಂತಹದ್ದೊಂದು ಸುವರ್ಣಾವಕಾಶ ನೀಡುತ್ತಿರುವ ಕಂಪೆನಿಯ ಹೆಸರು ಬಹಿರಂಗ ಗೊಂಡಿಲ್ಲವಾದರೂ, ಈ ಕೆಲಸವನ್ನು ಒಪ್ಪಿ ಸೇರಿಕೊಂಡರೆ ಅಂಥವರಿಗೆ ರಜಾದಿನದ ವೇತನವು ದಿನಕ್ಕೆ 3,877 ರೂಪಾಯಿ ಇರುತ್ತದೆ. ಒಂದು ವಾರದವರೆಗೆ ಅನಾರೋಗ್ಯದ ರಜೆ ಕೂಡ ಸಿಗಲಿದೆ.

ಈ ಉದ್ಯೋಗಕ್ಕೆ ಸೇರಲು ತಾಂತ್ರಿಕ ಮತ್ತು ಸುರಕ್ಷತಾ ತರಬೇತಿ BOSIET (ಬೇಸಿಕ್ ಆಫ್‌ಶೋರ್ ಸೇಫ್ಟಿ ಇಂಡಕ್ಷನ್ ಮತ್ತು ಎಮರ್ಜೆನ್ಸಿ ಟ್ರೈನಿಂಗ್), FOET (ಮುಂದೆ ಕಡಲಾಚೆಯ ತುರ್ತು ತರಬೇತಿ), CA-EBS (ಸಂಕುಚಿತ ವಾಯು ತುರ್ತು ಉಸಿರಾಟದ ವ್ಯವಸ್ಥೆ) ಮತ್ತು OGUK ವೈದ್ಯಕೀಯ ತರಬೇತಿಯನ್ನು ಪಡೆದುಕೊಂಡಿರಬೇಕು. ಈ ಅರ್ಹತೆಗಳಿದ್ದರೆ ಯಾರು ಬೇಕಿದ್ದರೂ ಅರ್ಜಿ ಸಲ್ಲಿಸಬಹುದಾಗಿದೆ‌.

Related post

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ ಸುತ್ತ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು

ಗ್ಯಾಂಗ್‌ಸ್ಟಾರ್‌ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ…

ನ್ಯೂಸ್‌ ಆ್ಯರೋ : ಬಾಲಿವುಡ್‌ ನಟ ಸಲ್ಮಾನ್ ಖಾನ್‌ಗೆ ಇದೀಗ ಜೀವ ಬೆದರಿಕೆಯೊಡ್ಡಿ ಇ ಮೇಲ್‌ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಲೂ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಕಳೆದ ವರ್ಷ…
ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ ಉದ್ಘಾಟಿಸಿ ಪೋಷಕರಿಗೆ ಕಿವಿಮಾತು ಹೇಳಿದ್ದೇನು?

ಸಾಧಕರೆಲ್ಲ ಓದಿದ್ದು ಸರ್ಕಾರಿ ಶಾಲೆಯಲ್ಲಿ ಎಂದ ರಿಷಬ್ – ಸರ್ಕಾರಿ ಶಾಲೆ…

ನ್ಯೂಸ್‌ ಆ್ಯರೋ : ಸರ್ಕಾರಿ ಶಾಲೆ ಉಳಿವಿಗಾಗಿ ಮಕ್ಕಳು, ಗ್ರಾಮಸ್ಥರು ಹೋರಾಡುವ ಕಥೆಯನ್ನು ಸಿನಿಮಾ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ನಾನು…
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ ಸಾಧ್ಯತೆ, ಪಕ್ಷಗಳಲ್ಲಿ ಚಟುವಟಿಕೆ ಬಿರುಸು

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೌಂಟ್‌ಡೌನ್‌ – ಇದೇ ತಿಂಗಳು ದಿನಾಂಕ ಘೋಷಣೆ…

ನ್ಯೂಸ್‌ ಆ್ಯರೋ : ಕರ್ನಾಟಕ ವಿಧಾನಸಭೆಯ ಚುನಾವಣೆಗೆ ಸಿದ್ಧತೆ ನಡೆಸಿರುವ ಕೇಂದ್ರ ಚುನಾವಣಾ ಆಯೋಗವು ಇದೇ ತಿಂಗಳ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಮೇ…

Leave a Reply

Your email address will not be published. Required fields are marked *