ಪತಿ/ ಪತ್ನಿ ಸಹಬಾಳ್ವೆಗೆ ನಿರಾಕರಿಸಿದರೆ ಅದು ಅಪರಾಧ – ಹೈಕೋರ್ಟ್ ನಿಂದ ಮಹತ್ವದ ಹೇಳಿಕೆ

20240901 100729
Spread the love

ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ದಾಂಪತ್ಯದ ಕಲಹದಿಂದ ಕೋರ್ಟ್ ಮೆಟ್ಟಿಲಿರುವ ದಂಪತಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಹೊಸ ಆದೇಶ ಹೊರಡಿಸಿದೆ.

ಅಲಹಾಬಾದ್‌ ಹೈಕೋರ್ಟ್‌ನ ಲಕ್ಕೋ ಪೀಠವು ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 ರ ಪ್ರಕಾರ ಪತ್ನಿ ಅಥವಾ ಪತಿ ತನ್ನ ಜೀವನ ಸಂಗಾತಿಯನ್ನು ಪ್ರತ್ಯೇಕ ಕೋಣೆಯಲ್ಲಿ ವಾಸಿಸುವಂತೆ ಒತ್ತಾಯಿಸುವುದು ಅಪರಾಧ ಎಂದು ಹೇಳಿದೆ.

ಹೊಂದಾಣಿಕೆ ಅಥವಾ ಸಹಬಾಳ್ವೆ ಎಂಬುದು ದಾಂಪತ್ಯ ಜೀವನದ ಗುಟ್ಟು. ಪತಿ/ ಪತ್ನಿ ಸಹಬಾಳ್ವೆಗೆ ನಿರಾಕರಿಸಿ, ಪ್ರತೀಕ ಕೊಣೆಯಲ್ಲಿ ಇರಲು ಮುಂದಾದರೆ, ಇದು ಅವರಿಬ್ಬರ ಮಾನಸಿಕ ಅಥವಾ ದೈಹಿಕ ಖಿನ್ನತೆಗೆ ಕಾರಣವಾಗಬಹುದು ಎಂದು ಹೈಕೋರ್ಟ್ ಮಹತ್ವದ ಹೇಳಿಕೆ ನೀಡಿದೆ.

Leave a Comment

Leave a Reply

Your email address will not be published. Required fields are marked *