ಬಿಗ್ ಬಾಸ್ ಮನೆಯಿಂದ ದಿಢೀರ್ ಹೊರ ಬಂದ ಗೋಲ್ಡ್ ಸುರೇಶ್; ಇಲ್ಲಿದೆ ಅಸಲಿ ವಿಚಾರ
ನ್ಯೂಸ್ ಆ್ಯರೋ: ಬಿಗ್ ಬಾಸ್ ಸೀಸನ್ 11 ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ದಿಢೀರ್ ಹೊರ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಗೋಲ್ಡ್ ಸುರೇಶ್ ಅವರಿಗೆ ಬಿಗ್ ಬಾಸ್ ನಿಮ್ಮ ಕುಟುಂಬದ ಸದಸ್ಯರಲ್ಲಿ ತುರ್ತು ಪರಿಸ್ಥಿತಿ ಇದೆ. ಬಿಗ್ ಬಾಸ್‌ಗಿಂದ ನಿಮ್ಮ ಅಗತ್ಯತೆ ನಿಮ್ಮ ಕುಟುಂಬಸ್ಥರಿಗೆ ಹೆಚ್ಚಿದೆ. ಹೀಗಾಗಿ ತಡ ಮಾಡದೇ ಮನೆಯಿಂದ ಹೊರಡಬೇಕು ಎಂದು ಆದೇಶಿಸಿದರು.
ಬಿಗ್ ಬಾಸ್ ಕೊಟ್ಟ ತುರ್ತು ಮಾಹಿತಿಯಂತೆ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಕಣ್ಣೀರು ಹಾಕುತ್ತಾ ಹೊರ ನಡೆದಿದ್ದಾರೆ. ಇದೀಗ ಗೋಲ್ಡ್ ಸುರೇಶ್ ಅವರು ಹೊರ ಬಂದ ಕಾರಣ ಏನು ಅನ್ನೋದರ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.
ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದ ಕೂಡಲೇ ಸೋಷಿಯಲ್ ಮೀಡಿಯಾದಲ್ಲಿ ನಾನಾ ಪೋಸ್ಟ್‌ಗಳು ಹರಿದಾಡಿದೆ. ಗೋಲ್ಡ್ ಸುರೇಶ್ ಅವರ ತಂದೆಗೆ ಅನಾರೋಗ್ಯವಾಗಿದೆ. ತಂದೆ ಅವರ ಆರೋಗ್ಯದ ಕಾರಣಕ್ಕೆ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ ಅನ್ನೋ ಸುಳ್ಳು ಸುದ್ದಿಯನ್ನ ಹಬ್ಬಿಸಲಾಗಿತ್ತು. ಆದರೆ ಗೋಲ್ಡ್ ಸುರೇಶ್ ಅವರ ತಂದೆ ಆರೋಗ್ಯವಾಗಿದ್ದು, ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದು ಬಂದಿದೆ.
ಖುದ್ದು ಗೋಲ್ಡ್ ಸುರೇಶ್ ಅವರ ತಂದೆ ಶಿವಗೋಡ ಕಾಶಿರಾಮ ನಾರಪ್ಪಗೋಳ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಗೋಲ್ಡ್ ಸುರೇಶ ಮೊಳಕಾಲು ನೋವಿನ ಸಲುವಾಗಿ ಬಿಗ್ ಬಾಸ್ ಬಿಟ್ಟು ಹೊರಗೆ ಬಂದಿರಬೇಕು. ನಮ್ಮ ಮನೆ ಹಾಗೂ ಊರಲ್ಲಿ ಯಾರಿಗೂ ಏನು ಸಮಸ್ಯೆ ಇಲ್ಲ. ಬೆಂಗಳೂರು ಮನೆಯಲ್ಲೂ ಏನೂ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಾರ್ಥನಹಳ್ಳಿಯ ಗೋಲ್ಡ್ ಸುರೇಶ್ ಅವರು ಮನೆಯಲ್ಲಿ ಎಲ್ಲರೂ ಕ್ಷೇಮವಾಗಿದ್ದಾರೆ. ಆದರೂ ಗೋಲ್ಡ್ ಸುರೇಶ್ ಅವರು ಯಾವ ಕಾರಣಕ್ಕೆ ಹೊರ ಬಂದಿದ್ದಾರೆ ಅನ್ನೋದು ತಿಳಿದು ಬಂದಿಲ್ಲ.
ಗೋಲ್ಡ್ ಸುರೇಶ್ ಅವರ ತಂದೆ ನನ್ನ ಮಗ ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಆಟ ಆಡುತ್ತಿದ್ದಾನೆ. ಅವನು ಉತ್ತರ ಕರ್ನಾಟಕಕ್ಕೆ ತುಂಬಾ ಬೇಕಾದವನು ಇದ್ದಾನೆ. ಸುರೇಶ್ ಅವರನ್ನ ಕಾಲು ನೋವಿನಿಂದ ಹೊರಗಡೆ ಬಂದಿರಬೇಕು. ಕಾಲು ನೋವು ಕಡಿಮೆ ಆದ ಮೇಲೆ ಬಿಗ್ ಬಾಸ್ ಮನೆಗೆ ಮತ್ತೆ ಹೋಗಬಹುದು. ಗೋಲ್ಡ್ ಸುರೇಶ ಮತ್ತೆ ಬಿಗ್ ಬಾಸ್ ಮನೆಗೆ ಹೋಗಿ ಆಟ ಆಡಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
Leave a Comment