ಐಪಿಎಲ್ 2025ರಲ್ಲಿ ಅಚ್ಚರಿಯ ನಿರ್ಧಾರ; ಮ್ಯಾಚ್ ವಿನ್ನರ್​ಗಳನ್ನೇ ಹೊರಹಾಕಿದ 6 ಫ್ರಾಂಚೈಸಿಗಳು

IPL 2025 Retentions
Spread the love

ನ್ಯೂಸ್ ಆ್ಯರೋ: ಎಲ್ಲಾ 10 ಐಪಿಎಲ್ ತಂಡಗಳು ತಮ್ಮ ಧಾರಣ ಪಟ್ಟಿಯನ್ನು ಪ್ರಕಟಿಸಿವೆ. ತಾವು ಉಳಿಸಿಕೊಂಡಿರುವ ಪಟ್ಟಿಯನ್ನು ಪ್ರಕಟಿಸುವುದಕ್ಕೂ ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡಿರುವ ಕೆಲವು ಫ್ರಾಂಚೈಸಿಗಳು ತಮ್ಮ ತಂಡದಲ್ಲಿದ್ದ ಕೆಲವು ಸ್ಟಾರ್ ಆಟಗಾರನನ್ನು ತಂಡದಿಂದ ಕೈಬಿಟ್ಟಿವೆ. ಈ ಪಟ್ಟಿಯಲ್ಲಿ 6 ಆಟಗಾರರು ತಂಡದಿಂದ ಹೊರಬಿದ್ದಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ.

IMG PANT 6 1 V9CQ3LOO

ಹೌದು. . ಕಳೆದ 9 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಜೀವಾಳವಾಗಿದ್ದ ರಿಷಬ್ ಪಂತ್ ಇದೇ ಮೊದಲ ಬಾರಿಗೆ ತಂಡದಿಂದ ಹೊರಬರಲು ನಿರ್ಧರಿಸಿದ್ದು, ಮುಂದಿನ ಆವೃತ್ತಿಯಿಂದ ಅವರು ಹೊಸ ತಂಡದಲ್ಲಿ ಆಡುವುದನ್ನು ಕಾಣಬಹುದು. ಪಂತ್​ರನ್ನು ತಂಡದಿಂದ ಕೈಬಿಟ್ಟಿರುವ ಡೆಲ್ಲಿ ಫ್ರಾಂಚೈಸಿ ಐದು ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿದೆ.

Kl Rahul

ತಂಡದಿಂದ ಹೊರಬಿದ್ದಿರುವ ಎರಡನೇಯ ಅಚ್ಚರಿಯ ಆಯ್ಕೆಯೆಂದರೆ, ಅದು ಕನ್ನಡಿಗ ಕೆಎಲ್ ರಾಹುಲ್. ವಾಸ್ತವವಾಗಿ ಕಳೆದ ಕೆಲವು ದಿನಗಳಿಂದ ರಾಹುಲ್​ ಬಗ್ಗೆ ಈ ರೀತಿಯ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಇದೀಗ ಆ ಸುದ್ದಿ ನಿಜವಾಗಿದ್ದು, ಕನ್ನಡಿಗ ರಾಹುಲ್ ಲಕ್ನೋ ತಂಡದಿಂದ ಹೊರಬಿದ್ದಿದ್ದು, ಅವರೀಗ ಹರಾಜಿನಲ್ಲಿ ಯಾವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

114730283

ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದ ನಾಯಕತ್ವವಹಿಸಿ ತಂಡವನ್ನು ಚಾಂಪಿಯನ್‌ ಆಗಿ ಮಾಡಿದ್ದ ಶ್ರೇಯಸ್ ಅಯ್ಯರ್​ ಅವರನ್ನು ಕೆಕೆಆರ್ ಫ್ರಾಂಚೈಸಿ ತಂಡದಿಂದ ಕೈಬಿಟ್ಟಿದೆ. ಅಯ್ಯರ್ ಅವರನ್ನು ಹೊರಗಿಟ್ಟಿರುವ ಕೆಕೆಆರ್ 6 ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದೆ.

Arshdeep Singh

ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ ಎನಿಸಿಕೊಂಡಿದ್ದ ಅರ್ಷದೀಪ್ ಸಿಂಗ್ ಅವರನ್ನು ತಂಡದಿಂದ ಹೊರಗಿಡುವ ಅಚ್ಚರಿಯ ನಿರ್ಧಾರವನ್ನು ಪಂಜಾಬ್ ಫ್ರಾಂಚೈಸಿ ಮಾಡಿದೆ. ಕೇವಲ ಇಬ್ಬರು ಆಟಗಾರರನ್ನು ಅತ್ಯಲ್ಪ ಮೊತ್ತಕ್ಕೆ ಉಳಿಸಿಕೊಂಡಿರುವ ಪಂಜಾಬ್, ಪರ್ಸ್​ನಲ್ಲಿ ಭಾರಿ ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದು, ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿಸಬಹುದು.

Bultr

ರಾಜಸ್ಥಾನ್ ರಾಯಲ್ಸ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್​ ಕೂಡ ತಂಡದಿಂದ ಹೊರಬಿದ್ದಿದ್ದಾರೆ. ತಂಡದ ಬ್ಯಾಟಿಂಗ್‌ ಬೆನ್ನೇಲುಬಾಗಿದ್ದ ಬಟ್ಲರ್​ ಅವರನ್ನು ತಂಡದಿಂದ ಕೈಬಿಟ್ಟಿರುವ ಫ್ರಾಂಚೈಸಿ ಈಗಾಗಲೇ 6 ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಇದರರ್ಥ ಬಟ್ಲರ್ ಹರಾಜಿನಲ್ಲಿ ಹೊಸ ತಂಡ ಸೇರುವ ಸಾಧ್ಯತೆಗಳಿವೆ.

Ishan

ಇನ್ನು ಮುಂಬೈ ತಂಡದ ಆರಂಭಿಕ ಆಟಗಾರ ಹಾಗೂ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರನ್ನು ತಂಡದಿಂದ ಕೈಬಿಡುವ ಅಚ್ಚರಿಯ ನಿರ್ಧಾರವನ್ನ ಮುಂಬೈ ಫ್ರಾಂಚೈಸಿ ತೆಗೆದುಕೊಂಡಿದೆ. ಕಳೆದ ಕೆಲವು ಆವೃತ್ತಿಗಳಲ್ಲಿ ಕಿಶನ್ ಪ್ರದರ್ಶನ ಅಷ್ಟು ಉತ್ತಮವಾಗಿರಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಟ್ಟಿರುವ ಸಾಧ್ಯತೆಗಳು ಹೆಚ್ಚಾಗಿವೆ

Leave a Comment

Leave a Reply

Your email address will not be published. Required fields are marked *

error: Content is protected !!