
ಬೇಜವಾಬ್ದಾರಿ ಉದ್ಯೋಗಿಯಿಂದ ಚಿಲ್ಲರೆ ಎಡವಟ್ಟು – ವಿಶ್ವದ ಬೃಹತ್ ಪರಮಾಣು ಸ್ಥಾವರ ಭವಿಷ್ಯವೇ ಅತಂತ್ರ..!!
- ಅಂತಾರಾಷ್ಟ್ರೀಯ ಸುದ್ದಿ
- May 26, 2023
- No Comment
- 107
ನ್ಯೂಸ್ ಆ್ಯರೋ : ಸುರಕ್ಷತಾ ಮಾನದಂಡಗಳನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ವಿಶ್ವದ ಬೃಹತ್ ಪರಮಾಣು ಸ್ಥಾವರ ಜಪಾನ್ ನ ಟೋಕಿಯೋ ಎಲೆಕ್ಟ್ರಿಕ್ ಪವರ್ ಕಂಪನಿ (ಟೆಪ್ಕೋ) ಕಾರ್ಯಾಚರಣೆಗೆ ಇತ್ತೀಚೆಗೆ ತಡೆ ನೀಡಲಾಗಿದ್ದು, ಇದೀಗ ಅದೇ ಸಂಸ್ಥೆಯ ಉದ್ಯೋಗಿಯೊಬ್ಬರ ನಿರ್ಲಕ್ಷ್ಯದಿಂದ ಕಂಪನಿಯ ಅಗತ್ಯ ದಾಖಲೆಗಳು ಕಳೆದುಹೋಗಿದೆ. ಇದರಿಂದ ಸಂಸ್ಥೆ ಮತ್ತಷ್ಟು ಕಾಲ ನಿರ್ಬಂಧ ಎದುರಿಸುವಂತಾಗಿದೆ.
2011ರ ಫುಕುಶಿಮಾ ದುರಂತದ ಬಳಿಕ ಜಪಾನ್ ಪರಮಾಣು ನಿಯಂತ್ರಣ ಪ್ರಾಧಿಕಾರವು ರಾಷ್ಟ್ರದ ಕೆಲವೇ ಕೆಲವು ಪರಮಾಣು ಸ್ಥಾವರಗಳಿಗೆ ಮಾತ್ರ ಕಾರ್ಯಾಚರಣೆ ಅನುಮತಿ ನೀಡಿದೆ.
ಸುರಕ್ಷತೆ ವಿಚಾರ
33 ಸ್ಥಾವರ ಕಾರ್ಯಾಚರಣೆ ಮರು ಆರಂಭಗೊಳಿಸಲು ಅನುಮತಿಗಾಗಿ ಕಾಯುತ್ತಿದ್ದು, ಈ ಪೈಕಿ ಟೆಪ್ಕೋ ಕೂಡ ಸೇರಿದೆ. ಆದರೆ ಸುರಕ್ಷತೆ ವಿಚಾರದಲ್ಲಿ ಅಗತ್ಯ ಮಾನದಂಡ ಪೂರೈಸದ ಹಿನ್ನೆಲೆ ಕಳೆದ ವಾರವಷ್ಟೇ ಪ್ರಾಧಿಕಾರ ಟೆಪ್ಕೋ ಕಾರ್ಯಾಚರಣೆಗೆ ತಡೆ ನೀಡಿತ್ತು.
ಮಾನದಂಡಗಳನ್ನು ಪೂರೈಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಇರುವಂಥ ದಾಖಲೆಗಳನ್ನು ಪ್ರಸ್ತುತಪಡಿಸಲು ಸಂಸ್ಥೆ ಕಂಪನಿಯ ಉದ್ಯೋಗಿಯೊಬ್ಬರಿಗೆ ದಾಖಲೆಗಳನ್ನು ತರುವಂತೆ ಸೂಚಿಸಿತ್ತು. ಆದರೆ ಉದ್ಯೋಗಿ ದಾಖಲೆಗಳನ್ನು ಕಳೆದು ಹಾಕಿದ್ದಾರೆ. ಈಗ ದಾಖಲೆಗಳ ಕೆಲವೇ ಪುಟಗಳು ಸಿಕ್ಕಿದ್ದು, ಇನ್ನೂ 38 ಪುಟಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಹೀಗಾಗಿ ಟೆಪ್ಕೋ ಕಾರ್ಯಾಚರಣೆ ವಿಳಂಬವಾಗಿದೆ.