
ಬರೋಬ್ಬರಿ 145 ಕೋಟಿ ರೂ.ಗೆ ಬಿಕರಿಯಾಯ್ತು ವಿಜಯ್ ಮಲ್ಯನ ‘ದುರಾದೃಷ್ಟ’ದ ಖಡ್ಗ – ಏನಿದು ಖಡ್ಗದ ಇತಿಹಾಸ?
- ಅಂತಾರಾಷ್ಟ್ರೀಯ ಸುದ್ದಿ
- May 25, 2023
- No Comment
- 52
ನ್ಯೂಸ್ ಆ್ಯರೋ : ಭಾರತದಿಂದ ಇಂಗ್ಲೆಂಡ್ ಗೆ ಪಲಾಯನ ಮಾಡಿರುವ ಉದ್ಯಮಿ, ಮದ್ಯದ ದೊರೆ ವಿಜಯ್ ಮಲ್ಯ ಬಳಿಯಿದ್ದ ಟಿಪ್ಪು ಸುಲ್ತಾನ್ ಖಡ್ಗ 145 ಕೋಟಿ ರೂ.ಗೆ ಮತ್ತೊಮ್ಮೆ ಹರಾಜಾಗಿದೆ. ಸುರಕ್ಷತೆ ದೃಷ್ಟಿಯಿಂದ ಖರೀದಿದಾರರ ಹೆಸರು ಬಹಿರಂಗ ಪಡಿಸಿಲ್ಲ.
ವಿಜಯ್ ಮಲ್ಯ ದಿವಾಳಿಯಾಗಲು ಕಾರಣವಾಯಿತು ಎಂದು ಹೇಳಲಾಗುವ ಚಾರಿತ್ರಿಕ ಹಿನ್ನೆಲೆಯ ಖಡ್ಗವನ್ನು ಮಂಗಳವಾರ ಲಂಡನ್‌ನಲ್ಲಿ ಹರಾಜು ಮಾಡಲಾಗಿದ್ದು, ಅನಾಮಧೇಯ ವ್ಯಕ್ತಿಯ ಪರವಾಗಿ ಬೋನ್‌ಹ್ಯಾಮ್ ಹರಾಜು ಸಂಸ್ಥೆ 145 ಕೋಟಿ ರೂ.ಗೆ ಖರೀದಿಸಿದೆ. ಬ್ರಿಟಿಷರ ರಾಜಮನೆತನದ ವಸ್ತು ಸಂಗ್ರಹಾಲಯದಲ್ಲಿದ್ದ ಟಿಪ್ಪು ಖಡ್ಗವನ್ನು 2004ರಲ್ಲಿ ವಿಜಯ್ ಮಲ್ಯ 1.57 ಕೋಟಿ ರೂ.ಗೆ ಹರಾಜಿನಲ್ಲಿ ಖರೀದಿಸಿದ್ದರು.
2016ರಲ್ಲಿ ಲಂಡನ್ ಹೈಕೋರ್ಟ್ ಮೆಟ್ಟಿಲೇರಿದ್ದ ಭಾರತೀಯ ಬ್ಯಾಂಕ್‌ಗಳ ಒಕ್ಕೂಟವು ಮಲ್ಯ ಅವರ ಯಾವುದೇ ಚರ, ಸ್ಥಿರ ಆಸ್ತಿ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಲು ಕೋರಿದ್ದವು. ಈ ವೇಳೆ ಉತ್ತರ ನೀಡಿದ್ದ ಮಲ್ಯ ನಮ್ಮ ಕುಟುಂಬಕ್ಕೆ ದುರಾದೃಷ್ಟವಾಗಿ ಕಾಡಿದ್ದ ಖಡ್ಗವನ್ನು ಮಾರಾಟ ಮಾಡಿರುವುದಾಗಿ ಹೇಳಿದ್ದರು.
ಖಡ್ಗದ ಇತಿಹಾಸ
1799ರಲ್ಲಿ ನಡೆದ 4ನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಮರಣ ಹೊಂದಿದಾಗ ಅರಮನೆಯಲ್ಲಿ ಪತ್ತೆಯಾಗಿದ್ದ ಈ ಖಡ್ಗವನ್ನು ತೆಗೆದುಕೊಂಡು ಹೋಗಿದ್ದ ಬ್ರಿಟಿಷ್ ಸೇನೆ ಮೇಜರ್ ಜನರಲ್ ಬೇರ್ಡೆಗೆ ಅರ್ಪಿಸಿತ್ತು.