
ಚಂದ್ರನತ್ತ ಸಾಗಿದ ಜಪಾನ್ ನ ಲ್ಯಾಂಡರ್ – ಜಪಾನ್ ಯಶಸ್ವಿ ಉಡಾವಣೆ, ಇಸ್ರೋ ಶ್ಲಾಘನೆ
- ಅಂತಾರಾಷ್ಟ್ರೀಯ ಸುದ್ದಿ
- September 7, 2023
- No Comment
- 51
ನ್ಯೂಸ್ ಆ್ಯರೋ : ಭಾರತದ ಸಾಧನೆ ಬೆನ್ನಲ್ಲೇ ಇದೀಗ ಜಪಾನ್ ಬಾಹ್ಯಾಕಾಶ ಶೋಧನಾ ಏಜೆನ್ಸಿ ಚಂದ್ರನ ಅನ್ವೇಷಣೆಗಾಗಿ ಲ್ಯಾಂಡರ್ ಹೊತ್ತ ರಾಕೆಟ್ ಅನ್ನು ಯಶಸ್ವಿಯಾಗಿ ಇಂದು ಉಡಾವಣೆ ಮಾಡಿದೆ.
ಜಪಾನ್ ಬಾಹ್ಯಾಕಾಶ ಶೋಧನಾ ಏಜೆನ್ಸಿಯ ಯಶಸ್ವಿ ರಾಕೆಟ್ ಉಡ್ಡಯನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಶುಭಾಶಯ ಹೇಳಿದೆ. ತನ್ನ ಎಕ್ಸ್ ಖಾತೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಇಸ್ರೊ, ಜಾಗತಿಕ ಬಾಹ್ಯಾಕಾಶ ಸಮುದಾಯದಿಂದ ಚಂದ್ರನದ ಅನ್ವೇಷಣೆಗಾಗಿ ಕಳುಹಿಸಿದ ಮತ್ತೊಂದು ಯಶಸ್ವಿ ಉಡ್ಡಯಕ್ಕೆ ಅಭಿನಂದನೆಗಳು ಸಲ್ಲಿಸಿದೆ.
ಈ ಲ್ಯಾಂಡರ್ ಮುಂದಿನ ವರ್ಷ ಫೆಬ್ರವರಿಯಲ್ಲಿ ಚಂದ್ರನ ಅಂಗಳದಲ್ಲಿ ಇಳಿಯಲಿದೆ. ಜಪಾನ್‌ನ ಈ ಬಾಹ್ಯಾಕಾಶ ಯೋಜನೆ ಯಶಸ್ವಿಯಾದಲ್ಲಿ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಲ್ಯಾಂಡರ್ ಇಳಿಸಿದ ಜಗತ್ತಿನ 5ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಜಪಾನ್ ಪಾತ್ರವಾಗಲಿದೆ.
ಜಾಕ್ಸ್‌ನ ಅಧ್ಯಕ್ಷ ಹಿರೋಷಿ ಯಮಕಾವ ಮಾತನಾಡಿ, ಚಂದ್ರನ ಅಂಗಳದಲ್ಲಿ ಎಲ್ಲಿಯಾದರೂ ಇಳಿಯುವುದಕ್ಕಿಂತ, ಉದ್ದೇಶಿತ ಜಾಗದ ಅತ್ಯಂತ ಸಮೀಪದಲ್ಲಿ ಇಳಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಎರಡು ಬಾರಿ ವಿಫಲಗೊಂಡ ಜಪಾನ್
ಚಂದ್ರನ ಅನ್ವೇಷಣೆಗಾಗಿ ಎರಡು ಬಾರಿ ನಡೆಸಿದ ಪ್ರಯತ್ನದಲ್ಲಿ ಜಪಾನ್ ವಿಫಲಗೊಂಡಿತ್ತು. ಕಳೆದ ನವೆಂಬರ್‌ನಲ್ಲಿ ಜಾಕ್ಸ್ ಕಳುಹಿಸಿದ್ದ ಒಮೊಟೆನಾಷಿ ಎಂಬ ಲ್ಯಾಂಡರ್ ಲ್ಯಾಂಡಿಂಗ್ ವೇಳೆಯಲ್ಲಿ ಸಂಪರ್ಕ ಕಳೆದುಕೊಂಡಿತು. ಹುಕುಟೊ ಆರ್ ಮಿಷನ್ 1 ಲ್ಯಾಂಡರ್ ಅನ್ನು ಕಳೆದ ಏಪ್ರಿಲ್‌ನಲ್ಲಿ ಕಳುಹಿಸಲಾಗಿತ್ತು. ಚಂದ್ರನ ಅಂಗಳದಲ್ಲಿ ಇಳಿಯುವ ಹಂತದಲ್ಲಿ ಅದು ಪತನಗೊಂಡಿತು.