ಹಮಾಸ್ ಸುರಂಗ ಕಂಡು ಬೆಚ್ಚಿಬಿದ್ದ ಇಸ್ರೇಲ್ ಪಡೆ – ವೀಡಿಯೋ ರಿಲೀಸ್ ಮಾಡಿ ವಿವರಿಸಿದ IDF ವಕ್ತಾರ..!

ಹಮಾಸ್ ಸುರಂಗ ಕಂಡು ಬೆಚ್ಚಿಬಿದ್ದ ಇಸ್ರೇಲ್ ಪಡೆ – ವೀಡಿಯೋ ರಿಲೀಸ್ ಮಾಡಿ ವಿವರಿಸಿದ IDF ವಕ್ತಾರ..!

ನ್ಯೂಸ್ ಆ್ಯರೋ : ಹಮಾಸ್ ಬಂಡುಕೋರರು ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಭೀಕರತೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೀಗ ಹಮಾಸ್ ಬಂಡುಕೋರರು ಅಡಗುದಾಣಗಳ ಧ್ವಂಸ ಮಾಡಲು ಮುಂದಾಗಿರುವ ಇಸ್ರೇಲ್ ಹೊಸ ವೀಡಿಯೋ ಹಂಚಿಕೊಂಡಿದೆ. ಗಾಜಾದಲ್ಲಿರುವ ಆಸ್ಪತ್ರೆಯೇ ಹಮಾಸ್ ಬಂಡುಕೋರರ ಟನಲ್ ಪ್ರವೇಶಕ್ಕೆ ರಹದಾರಿಯಾಗಿದೆ ಎಂದು ತಿಳಿಸಿದೆ.

ಗಾಜಾ ಆಸ್ಪತ್ರೆ ಹಿಂಭಾಗದಲ್ಲಿ ಸುರಂಗವನ್ನು ಕಂಡುಹಿಡಿದ ಇಸ್ರೇಲ್ ಪಡೆ ಅದನ್ನು ಧ್ವಂಸಗೊಳಿಸಿತ್ತು. ಸುರಂಗವನ್ನು ಪರಿಶೀಲನೆ ನಡೆಸಿರುವ ಇಸ್ರೇಲ್ ಪಡೆಗೆ ಶಾಕ್ ಕಾದಿತ್ತು. ಈ ಸುರಂಗ ಮಾರ್ಗವು ಅತ್ಯಾಧುನಿಕ ತಂತ್ರಗಳ ಬಳಸಿ ರಚಿಸಲಾಗಿದೆ.

ಈ ಸುರಂಗಕ್ಕೆ ಸೋಲಾರ್ ಮೂಲಕ ವಿದ್ಯುತ್ ಸಂಚಾರವಾಗುತ್ತಿದ್ದು ಸುಮಾರು 20 ಅಡಿ ಆಳವಿದೆ‌. ಈ ಮಾರ್ಗ ನೇರವಾಗಿ ಆಸ್ಪತ್ರೆಯ ನೆಲಮಹಡಿ ತಲುಪಿರುವುದನ್ನು ಇಸ್ರೇಲ್ ಪಡೆ ಪತ್ತೆ ಮಾಡಿದೆ. ಮೇಲಿನಿಂದ ಸುರಂಗ ಮಾರ್ಗವನ್ನು ಪತ್ತೆ ಮಾಡಲು ಕಷ್ಟವಾಗುವ ರೀತಿಯಲ್ಲಿ ಸುರಂಗ ಕೊರೆಯಲಾಗಿದೆ.

ಈ ಸುರಂಗ ಮಾರ್ಗದಿಂದ ರಾಂಟಿಸಿ ಆಸ್ಪತ್ರೆಯು ಕೇವಲ 200 ಗಜಗಳ ದೂರದಲ್ಲಿದೆ. ಹಮಾಸ್ ಆಸ್ಪತ್ರೆಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೇಲ್ ಪಡೆ ಆರೋಪಿಸಿ ಆಸ್ಪತ್ರೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿತ್ತು. ಆದರೆ ಸುರಂಗ ಪತ್ತೆ ಮಾಡಲು ವಿಫಲವಾಗಿತ್ತು.

ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಇಸ್ರೇಲ್ ಭದ್ರತಾ ಪಡೆಗಳು ‘ಈ ಸುರಂಗದ ಒಳಗೆ ಹಮಾಸ್ ಭಯೋತ್ಪಾದಕರು ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ಜೊತೆಗೆ ಅವರು ಇಲ್ಲಿಂದಲೇ ನಮ್ಮ ಮೇಲೆ ತಂತ್ರ ರೂಪಿಸುತ್ತಾರೆ’ ಎಂದು ಹೇಳಿದೆ.

ಈ ಸುರಂಗ ಪ್ರವೇಶಿಸಿದ ಇಸ್ರೇಲಿ ಪಡೆಗಳಿಗೆ ಗ್ರೆನೇಡ್, ಬಾಂಬುಗಳು, ಬುಲೆಟ್ ಫ್ರೂಪ್ ಜಾಕೆಟ್, ರಾಕೆಟ್ ಲಾಂಚರ್ ಗಳು ಸೇರಿ ಗನ್ ಗಳು ಸಿಕ್ಕಿವೆ. ಗಾಜಾದಲ್ಲಿರುವ ಇತರೆ ಸುರಂಗದಲ್ಲೂ ಈ ರೀತಿ ಶಸ್ತಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

Related post

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ – ಇನ್ಸ್ಟಾಗ್ರಾಮ್ ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನು?

ಮೋದಿ ನನ್ನ ಜೀವದ ಗೆಳೆಯ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ…

ನ್ಯೂಸ್ ಆ್ಯರೋ : ಮನುಷ್ಯ ಅಂದ ಮೇಲೆ ಆತ ಸಂಘಜೀವಿ. ವ್ಯಕ್ತಿ ಅದೆಷ್ಟೇ ದೊಡ್ಡ ಮಟ್ಟದ ಸ್ಥಾನದಲ್ಲಿದ್ದರೂ ಅವನಿಗೂ ಒಬ್ಬ ಸ್ನೇಹಿತ, ಸ್ನೇಹ ಸಂಬಂಧ ಇದ್ದೇ ಇರುತ್ತದೆ‌. ಇದೀಗ…
20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ – ಅರೆಸ್ಟ್ ‌ಮಾಡಿದ್ಯಾರು‌ ಗೊತ್ತಾ?

20 ಲಕ್ಷ ಲಂಚ ಪೀಕುತ್ತಿದ್ದ ED ಅಧಿಕಾರಿ ರೆಡ್ ಹ್ಯಾಂಡ್ ಆಗಿ…

ನ್ಯೂಸ್ ಆ್ಯರೋ : ಹಣದ ದಾಹ ಯಾರಿಗಿಲ್ಲ ಹೇಳಿ. ಆದರೆ ಒಂದಂತೂ ಸತ್ಯ. ಅತ್ಯಂತ ಉತ್ತಮ ವೃತ್ತಿಯಲ್ಲಿರುವ, ದೊಡ್ಡ ಮೊತ್ತದ ವೇತನ ಸಂಪಾದಿಸುತ್ತಿರುವವರಿಗಂತೂ ಧನದಾಹ ದುಪ್ಪಟ್ಟು ಇರುತ್ತದೆ. ಇದಕ್ಕೆ…
ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ ಇವ್ರಿಗೆ ಲವ್ ಆಗಿದ್ದು ಹೇಗೆ ಗೊತ್ತಾ..?

ನೆದರ್ಲೆಂಡ್ಸ್‌ ಗೆಳತಿಯನ್ನು ಹಿಂದೂ ಸಂಪ್ರದಾಯದಂತೆ ಮದ್ವೆಯಾದ ಹಳ್ಳಿ ಹೈದ…! – ಅಷ್ಟಕ್ಕೂ…

ನ್ಯೂಸ್ ಆ್ಯರೋ : ‘ಪ್ರೀತಿಗೆ ಕಣ್ಣಿಲ್ಲ’ ಅಂತಾರೆ. ಜಾತಿ, ಧರ್ಮ, ದೇಶ ಇದ್ಯಾವುದರ ಮಾನದಂಡವೂ ಪ್ರೀತಿಗಿಲ್ಲ. ಅದೆಲ್ಲಕ್ಕಿಂತಲೂ ಪರಿಶುದ್ಧವಾದ ಸಂಬಂಧ ಅಂದ್ರೆ ಅದು ಪ್ರೀತಿ ಸಂಬಂಧ. ಪ್ರೀತಿಸಿದ ವ್ಯಕ್ತಿಗಾಗಿ…

Leave a Reply

Your email address will not be published. Required fields are marked *