
ಫಿಟ್ನೆಸ್, ಫ್ಯಾಷನ್ ಬಗ್ಗೆ ಮಾಹಿತಿ ನೀಡುತ್ತಿದ್ದ ಮಾಡೆಲ್ ನಿಧನ – 33ರ ಹರೆಯದಲ್ಲೇ ಹೃದಯಾಘಾತಕ್ಕೆ ಬಲಿ
- ಅಂತಾರಾಷ್ಟ್ರೀಯ ಸುದ್ದಿ
- August 31, 2023
- No Comment
- 97
ನ್ಯೂಸ್ ಆ್ಯರೋ : ಇತ್ತೀಚಿನ ದಿನಗಳಲ್ಲಿ ಯುವ ಜನತೆಗೆ ಹೆಚ್ಚಾಗಿ ಹೃದಯಾಘಾತ ಸಂಭವಿಸುತ್ತದೆ ಎನ್ನುವ ಕಳವಳದ ಮಧ್ಯೆಯೇ ಬ್ರೆಜಿಲ್ ನ ಫಿಟ್ನೆಸ್ ತಜ್ಞೆ 33 ವರ್ಷದ ಲಾರಿಸ್ಸಾ ಬೋರ್ಗೆಸ್ (Larissa borges) ಇದೇ ಕಾರಣದಿಂದ ಮೃತಪಟ್ಟಿದ್ದಾರೆ.
2 ಬಾರಿ ಹೃದಯ ಸ್ತಂಭನ
2 ಬಾರಿ ಕಾರ್ಡಿಯಾಕ್ ಅರೆಸ್ಟ್ ಆಗಿದ್ದರಿಂದ ಈ ಯುವ ಮಾಡೆಲ್, ಫ್ಯಾಷನ್ ನಿಂದ ಗುರುತಿಸಿಕೊಂಡಿದ್ದಾ ಲಾರಿಸ್ಸಾ ಮೃತಪಟ್ಟರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗ್ರಾಮಡೋ ಎಂಬಲ್ಲಿ ಪ್ರಯಾಣಿಸುತ್ತಿದ್ದ ಲಾರಿಸ್ಸಾ ಅವರಿಗೆ ಮೊದಲ ಬಾರಿ ಹೃದಯ ಸ್ತಂಭನವಾಗಿತ್ತು. ಹೀಗಾಗಿ ಕೋಮಾಕ್ಕೆ ಜಾರಿದ್ದ ಅವರಿಗೆ ಆಗಸ್ಟ್ 20ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮತ್ತೊಮ್ಮೆಯೂ ಹೃದಯ ಸ್ತಂಭನವಾಗಿ ಅವರು ನಿಧನ ಹೊಂದಿದರು ಎಂದು ವರದಿ ತಿಳಿಸಿದೆ.
ಲಾರಿಸ್ಸಾ ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಫಿಟ್ನೆಸ್, ಫ್ಯಾಷನ್ ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ಕಾರಣಕ್ಕೆ ಸಾಕಷ್ಟು ಖ್ಯಾತಿ ಗಳಿಸಿದ್ದ ಅವರನ್ನು ಇನ್ಸ್ಟಾಗ್ರಾಮ್ ನಲ್ಲಿ ಸಾವಿರಾರು ಮಂದಿ ಫಾಲೋ ಮಡುತ್ತಿದ್ದರು.