
ಇಂಗ್ಲೆಂಡ್ ನ 2ನೇ ದೊಡ್ಡ ನಗರ ಬರ್ಮಿಂಗ್‌ಹ್ಯಾಂ ದಿವಾಳಿ – ಭಾರತವನ್ನು ದೋಚಿದ್ದ ದೇಶದಲ್ಲಿ ಇದೇನಾಯ್ತು?
- ಅಂತಾರಾಷ್ಟ್ರೀಯ ಸುದ್ದಿ
- September 7, 2023
- No Comment
- 95
ನ್ಯೂಸ್ ಆ್ಯರೋ : ಬ್ರಿಟನ್‌ನ ಎರಡನೇ ದೊಡ್ಡ ನಗರವಾದ ಬರ್ಮಿಂಗ್‌ಹ್ಯಾಂನ ಸ್ಥಳೀಯ ಆಡಳಿತವು ದಿವಾಳಿಯಾಗಿರುವುದಾಗಿ ಘೋಷಣೆ ಮಾಡಿಕೊಂಡಿದೆ. ಆಡಳಿತದ ವಾರ್ಷಿಕ ಬಜೆಟ್‌ನಲ್ಲಿ ಲಕ್ಷಾಂತರ ಕೊರತೆಯಾದ ಕಾರಣ ಈ ನಿರ್ಧಾರವನ್ನು ಕೈಗೊಂಡಿದೆ.
ದುರ್ಬಲರ ರಕ್ಷಣೆ, ಶಾಸನಬದ್ಧ ಸೇವೆ ಸೇರಿದಂತೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಖರ್ಚುಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಬರ್ಮಿಂಗ್‌ಹ್ಯಾಮ್ ಸ್ಥಳೀಯ ಆಡಳಿತ ಮಂಡಳಿ ನೋಟಿಸ್ ಜಾರಿ ಮಾಡಿದೆ. ಈ ಸ್ಥಳೀಯ ಆಡಳಿತವು ವಿರುದ್ಧ ಪಕ್ಷವಾದ ಲೇಬರ್ ಪಕ್ಷದ ಆಡಳಿತಕ್ಕೆ ಒಳಪಟ್ಟಿದೆ. ಇದು ಯುರೋಪ್‌ನ ಅತ್ಯಂತ ಸ್ಥಳೀಯ ಆಡಳಿತವಾಗಿದ್ದು, ಸುಮಾರು 100 ಕೌನ್ಸಿರ್‌ಗಳನ್ನು ಒಳಗೊಂಡಿದೆ.
ಸ್ಥಳೀಯ ಆಡಳಿತದ ಉಪ ನಾಯಕಿ ಶರೋನ್ ಥಾಂಪ್ಸನ್ ಮಾಧ್ಯಮಗಳೊಂದಿಗೆ ಮಾತನಾಡಿ, ಐತಿಹಾಸಿಕ ಸಮಾನ ವೇತನ ಹೊಣೆಗಾರಿಕೆ ಕಾಳಜಿ ಸೇರಿದಂತೆ ದೀರ್ಘಕಾಲದ ಸಮಸ್ಯೆಗಳನ್ನು ಬರ್ಮಿಂಗ್‌ಹ್ಯಾಂನ ಸ್ಥಳೀಯ ಆಡಳಿತ ಎದುರಿಸುತ್ತಿದೆ. ಈಗಾಗಲೇ ಸರ್ಕಾರದಿಂದ 1 ಶತಕೋಟಿ ಪೌಂಡ್ ಅನ್ನು ಕನ್ಸರ್ವೇಟಿವ್ ಸರ್ಕಾರ ತೆಗೆದುಕೊಂಡಿದೆ. ಈ ನಷ್ಟಕ್ಕೆ ಆ ಸರ್ಕಾರವೇ ಕಾರಣ ಎಂದು ದೂರಿದರು.
ದೇಶದಾದ್ಯಂತ ಇರುವ ಕೌನ್ಸಿಲ್‌ಗಳಂತೆ, ವಯಸ್ಕರ ಸಾಮಾಜಿಕ ಕಾಳಜಿಯ ಬೇಡಿಕೆಯಲ್ಲಿನ ಭಾರೀ ಹೆಚ್ಚಳದಿಂದ ಮತ್ತು ವ್ಯಾಪಾರ ದರಗಳ ಆದಾಯದಲ್ಲಿನ ನಾಟಕೀಯ ಕಡಿತದಿಂದ, ಅತಿರೇಕದ ಹಣದುಬ್ಬರದ ಪ್ರಭಾವದವರೆಗೆ ಈ ಮಂಡಳಿಯು ಅಭೂತಪೂರ್ವ ಹಣಕಾಸಿನ ಸವಾಲುಗಳನ್ನು ಎದುರಿಸುತ್ತಿದೆ. ಕೌನ್ಸಿಲ್ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿರುವಾಗ, ನಗರವು ಇನ್ನೂ ವ್ಯಾಪಾರಕ್ಕಾಗಿ ಮುಕ್ತವಾಗಿದೆ ಮತ್ತು ಜನರು ಬಂದಂತೆ ನಾವು ಸ್ವಾಗತಿಸುತ್ತಿದ್ದೇವೆ ಎಂದು ಅವರು ಈ ವೇಳೆ ಹೇಳಿದರು.