
ಪ್ರಾಣಕ್ಕೇ ಕುತ್ತು ತಂದ ಪ್ಲಾಸ್ಟಿಕ್ ಸರ್ಜರಿ – ಖ್ಯಾತ ನಟಿ, ಮಾಡೆಲ್ ಸಾವು
- ಅಂತಾರಾಷ್ಟ್ರೀಯ ಸುದ್ದಿ
- September 2, 2023
- No Comment
- 83
ನ್ಯೂಸ್ ಆ್ಯರೋ : ಕೆಲವೊಮ್ಮೆ ಸೌಂದರ್ಯವರ್ಧಕ ಶಸ್ತ್ರ ಚಿಕಿತ್ಸೆ ಜೀವಕ್ಕೇ ಕುತ್ತು ತರುತ್ತದೆ. ಅರ್ಜೆಂಟೀನಾ ನಟಿ, ಮಾಡೆಲ್, ಟಿವಿ ನಿರೂಪಕಿ ಸಿಲ್ವಿನಾ ಲೂನಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಪರಿಣಾಮ ಮತ್ತು ಕಿಡ್ನಿ ವೈಫಲ್ಯಗಳಿಂದ ಮೃತಪಟ್ಟಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು.
13 ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆ
ಲೂನಾ 2010ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಗಂಭೀರ ಸಮಸ್ಯೆ ಎದುರಿಸುತ್ತಿದ್ದರು. ಅಲ್ಲದೆ ಕಿಡ್ನಿ ವೈಫಲ್ಯ ಕಾರಣದಿಂದ ವಾರಕ್ಕೆ ಹಲವು ಬಾರಿ ಡಯಾಲಿಸಿಸ್ ಗೆ ಒಳಗಾಗುತ್ತಿದ್ದರು. ಜೂನ್ 13ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಸುಮಾರು 2 ತಿಂಗಳ ಬಳಿಕ ನಿಧನ ಹೊಂದಿದರು.
ಲೂನಾ 2010ರಲ್ಲಿ ಅರ್ಜೆಂಟೀನಾದಲ್ಲಿ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಬಳಿಕ ಆಗಾಗ ಅನಾರೋಗ್ಯ ಕಾಡುತ್ತಿತ್ತು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ನಟಿಯ ನಿಧನಕ್ಕೆ ಸ್ನೇಹಿತರು, ಸಿನಿಮಾ ತಂಡದವರು ಕಂಬನಿ ಮಿಡಿದಿದ್ದಾರೆ.
ಲೂನಾ ಜೊತೆ ಸುಮಾರು 20 ವರ್ಷಗಳ ಕಾಲ ಕೆಲಸ ಮಾಡಿದ್ದೆ. ಅವರ ಜೊತೆ ಕಳೆದ ಪ್ರತಿಯೊಂದು ಕ್ಷಣವೂ ಸಂತಸದಿಂದ ಕೂಡಿತ್ತು ಎಂದು ಅವರ ಗೆಳೆಯ, ಪತ್ರಕರ್ತ ಏಂಜೆಲ್ ಡಿ ಬ್ರಿಟೊ ನೆನೆಪಿಸಿಕೊಂಡಿದ್ದಾರೆ.