
ಕರೊನಾ ಸೃಷ್ಟಿಕರ್ತ ಚೀನಾದಲ್ಲಿ ಕರೊನಾ ಸೋಂಕು ದಿಢೀರ್ ಹೆಚ್ಚಳ – ಸ್ಮಶಾನದಲ್ಲಿ ಹೆಚ್ಚುತ್ತಿದೆ ಶವಗಳ ಸಂಖ್ಯೆ
- ಅಂತಾರಾಷ್ಟ್ರೀಯ ಸುದ್ದಿ
- December 21, 2022
- No Comment
- 167
ನ್ಯೂಸ್ ಆ್ಯರೋ : ಕರೊನಾ ಸೃಷ್ಟಿಸಿದ ದೇಶ ಎಂಬ ಕುಖ್ಯಾತಿಯ ಚೀನಾ ಸಂಕಷ್ಟಕ್ಕೆ ಸಿಲುಕಿದೆ. ಕರೊನಾ ವೈರಸ್ ನಿರ್ಬಂಧಗಳನ್ನು ಸಂಪೂರ್ಣ ಸಡಿಲಗೊಳಿಸಿದ ಬೆನ್ನಲ್ಲೇ ಕೋವಿಡ್-19 ತವರು ಚೀನಾದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮರಣ ಮೃದಂಗ ಬಾರಿಸುತ್ತಿದೆ. ಚೀನಾ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದಾಗಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್ ಫೀಗಲ್ ಡಿಂಗ್ ಎಂಬುವರು ತಿಳಿಸಿದ್ದಾರೆ.
ಮುಂದಿನ 90 ದಿನಗಳಲ್ಲಿ ಚೀನಾದ ಶೇ. 60 ಕ್ಕಿಂತ ಹೆಚ್ಚು ಮತ್ತು ಭೂಮಿಯ ಜನಸಂಖ್ಯೆಯ ಶೇ. 10 ಪ್ರತಿಶತದಷ್ಟು ಜನರು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಅಂದಾಜಿಸಿದ್ದಾರೆ ಮತ್ತು ಲಕ್ಷಾಂತರ ಜನರು ಸಾವನ್ನಪ್ಪುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ಚೀನಾ ರಾಜ್ಯಧಾನಿ ಬೀಜಿಂಗ್‌ಲ್ಲಿ ಕೋವಿಡ್ -19 ರೋಗಿಗಳಿಗೆ ಗೊತ್ತುಪಡಿಸಿದ ಸ್ಮಶಾನವು ಇತ್ತೀಚಿಗೆ ಮೃತದೇಹಗಳಿಂದ ತುಂಬಿದೆ. ವೈರಸ್ ಚೀನಾದ ರಾಜಧಾನಿಯ ಮೂಲಕ ವ್ಯಾಪಿಸುತ್ತಿದೆ. ದೇಶದಲ್ಲಿ ಕರೊನಾ ನಿರ್ಬಂಧಗಳ ಹಠಾತ್ ಸಡಿಲಿಕೆಯಿಂದ ಕರೊನಾ ಸ್ಫೋಟವಾಗಿದ್ದು, ಮತ್ತೊಮ್ಮೆ ಮನುಷ್ಯರು ಇದರ ದುಷ್ಪರಿಣಾಮ ಎದುರಿಸುವ ಸಾಧ್ಯತೆ ದಟ್ಟವಾಗಿದೆ.
ಸ್ಮಶಾನಕ್ಕೆ ಪ್ರತಿ ದಿನ ಸುಮಾರು 200 ದೇಹಗಳು ಬರುತ್ತಿವೆ ಎಂದು ಡೊಂಗ್‌ಜಿಯಾವೊ ಸ್ಮಶಾನದ ಮಹಿಳೆಯೊಬ್ಬರು ಅಂದಾಜಿಸಿದ್ದಾರೆ. ಸಾಮಾನ್ಯ ದಿನದಲ್ಲಿ 30 ಅಥವಾ 40 ದೇಹಗಳು ಬರುತ್ತವೆ. ಆದರೆ, ಸ್ಮಶಾನದಲ್ಲಿ ಸಿಬ್ಬಂದಿಗೆ ಕೆಲಸದ ಹೊರೆ ಹೆಚ್ಚಾಗಿದೆ ಎಂದು ತಿಳಿಸಿದ್ದು, ಮತ್ತೊಮ್ಮೆ ಕರೊನಾ ಆತಂಕ ಸೃಷ್ಟಿಯಾಗಿದೆ.