
ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರಿಗೆ ಯಾವ ಆಹಾರ ಇಷ್ಟ ಗೊತ್ತಾ? – ಇವರ ಅಡುಗೆಭಟ್ಟರ ಸಂಬಳ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..!!
- ಕೌತುಕ-ವಿಜ್ಞಾನ
- March 17, 2023
- No Comment
- 449
ನ್ಯೂಸ್ ಆ್ಯರೋ : ಜಗತ್ತಿನ ಶ್ರೀಮಂತ ಉದ್ಯಮಿಗಳಲ್ಲಿ ಮುಕೇಶ್ ಅಂಬಾನಿ ಒಬ್ಬರು. ತಮ್ಮ ರಿಲಯನ್ಸ್ ಸಮೂಹ ಸಂಸ್ಥೆಗಳ ಮೂಲಕ ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಪ್ರತಿವರ್ಷ ಸ್ಥಾನ ಪಡೆಯುತ್ತಾರೆ.
ಜಗತ್ತಿನಲ್ಲಿ 2ನೇ ಅತ್ಯಂತ ಶ್ರೀಮಂತ ಹಾಗೂ ಮುಂಬೈನಲ್ಲಿ ದೊಡ್ಡ ಬಂಗಲೆಯನ್ನು ಹೊಂದಿರುವ ಅವರು ತಮ್ಮ ಅಡುಗೆಭಟ್ಟರಿಗೆ ಕೊಡುವ ವೇತನ ಕೇಳಿದ್ರೆ ಆಶ್ಚರ್ಯವಾಗುತ್ತದೆ.
ಮುಕೇಶ್ ಅಂಬಾನಿ ಪಕ್ಕ ಸಸ್ಯಾಹಾರಿಯಾಗಿದ್ದು, ಬೆಳಗ್ಗಿನ ಉಪಾಹಾರದಲ್ಲಿ ಸೌತ್ ಇಂಡಿಯನ್ ತಿಂಡಿ ಆಗಿರುವ ಇಡ್ಲಿ ಸಾಂಬಾರ್ ಅನ್ನು ಇಷ್ಟಪಡುತ್ತಾರೆ. ದಿನದಲ್ಲಿ ಎಷ್ಟೇ ಬ್ಯುಸಿ ಇದ್ದರೂ ರಾತ್ರಿ ಊಟ ಮಾತ್ರ ಕುಟುಂಬದ ಜೊತೆಗೆ ತಮ್ಮ ಮನೆಯಲ್ಲಿ ತಿನ್ನಬೇಕು ಎನ್ನುವುದು ಅವರ ಜೀವನದ ಶಿಸ್ತಿನ ನಿಯಮ. ಅವರು ತಿನ್ನೋದು ಸಿಂಪಲ್ ಅಡುಗೆ ಆಗಿದ್ದರೂ ಅದನ್ನು ರುಚಿಕರವಾಗಿ ತಯಾರಿಸಬೇಕು ಎಂಬುದು ಅವರ ಪಾಲಿಸಿ.
ತಮ್ಮ ಆಹಾರಕ್ಕಾಗಿ ಸರ್ಟಿಫೈಡ್ ಶೆಫ್ ಅನ್ನು ಅಡುಗೆಭಟ್ಟನಾಗಿ ನೇಮಿಸಿದ್ದಾರೆ. ಅದಕ್ಕೆ ಆತ ಕೇವಲ ಅಡುಗೆ ಮಾಡುವುದಕ್ಕಾಗಿ ತಿಂಗಳಿಗೆ ಬರೋಬ್ಬರಿ ₹ 2 ಲಕ್ಷ ಸಂಭಾವನೆ ತೆಗೆದುಕೊಳ್ಳುತ್ತಾನೆ ಎಂಬುದಾಗಿ ತಿಳಿದು ಬಂದಿದೆ. ಕೇವಲ ಇಷ್ಟು ಮಾತ್ರವಲ್ಲದೆ ಈ ಲೆಕ್ಕಚಾರದಲ್ಲಿ ನೋಡಿದರೂ ಕೂಡ ವರ್ಷಕ್ಕೆ ₹ 24 ಲಕ್ಷ ಸಂಭಾವನೆಯನ್ನು ಆತ ಪಡೆಯುತ್ತಾನೆ.
ಇದು ಯಾವುದೇ ಕಂಪನಿಯ ಸಿಇಒಗಳ ಆದಾಯಕ್ಕೂ ಕೂಡ ಕಡಿಮೆ ಇಲ್ಲದಂತಿದೆ. ಇದರ ಜೊತೆಗೆ ಅಡುಗೆಭಟ್ಟರ ಕುಟುಂಬಕ್ಕೆ ಕೂಡ ಹಲವಾರು ಸೌಲಭ್ಯಗಳನ್ನು ಅಂಬಾನಿ ಕುಟುಂಬವೇ ವ್ಯವಸ್ಥೆ ಮಾಡಿಕೊಡುತ್ತಿದೆ.