
ಚಂದ್ರನ ದಕ್ಷಿಣ ಧ್ರುವದ ಹೊಸ ಮಾಹಿತಿ ಕಳುಹಿಸಿದ ವಿಕ್ರಮ್ ಲ್ಯಾಂಡರ್ – ಚಂದ್ರನ ಅಂಗಳದಲ್ಲಿ ಎಷ್ಟಿದೆ ಗೊತ್ತಾ ತಾಪಮಾನ?
- ಕೌತುಕ-ವಿಜ್ಞಾನ
- August 27, 2023
- No Comment
- 88
ನ್ಯೂಸ್ ಆ್ಯರೋ : ಹಲವು ಕೌತುಕಗಳನ್ನು ಹೊಂದಿರುವ ಚಂದ್ರನ ದಕ್ಷಿಣ ಧ್ರುವದ ಬಗ್ಗೆ ವಿಕ್ರಮ್ ಲ್ಯಾಂಡರ್ ಒಂದು ಮಹತ್ವದ ಮಾಹಿತಿ ರವಾನಿಸಿದ್ದು ಇತಿಹಾಸದಲ್ಲೇ ಮೊದಲ ಬಾರಿಗೆ ಚಂದ್ರನ ಸೌತ್ ಪೋಲ್‌ನ ಮಣ್ಣಿನ ತಾಪಮಾನದ ಬಗ್ಗೆ ವಿವರಿಸಿದೆ.
ChaSTE ಪೆಲೋಡ್ ಎಂದರೆ ಚಂದ್ರನ ಮೇಲ್ಮೈ ಥರ್ಮೋಫಿಸಿಕಲ್ ಪ್ರಯೋಗದ ಮೂಲಕ ಚಂದ್ರಯಾನ 3 ಮಾಡಿದ ತಾಪಮಾನದ ಅವಲೋಕನವನ್ನು ಇಸ್ರೋ ಹಂಚಿಕೊಂಡಿದೆ.
ಚಂದ್ರನ ದಕ್ಷಿಣ ಧ್ರುವದ ಮಣ್ಣಿನ ತಾಪಮಾನದ ಬಗ್ಗೆ ಮಾಹಿತಿ ನೀಡಿದ್ದು, ಆಳಕ್ಕೆ ಸಾಗಿದಂತೆ ತಾಪಮಾನ ಹೇಗೆ ಕಡಿಮೆ ಆಗುತ್ತಾ ಬಂದಿದ್ದು, ಉಷ್ಣತೆ ಹೇಗೆ ಕಡಿಮೆಯಾಗಿದೆ ಎಂಬುದನ್ನು ವಿವರಿಸಿದೆ. ಆಳದ ಪ್ರಮಾಣವನ್ನು ಅವಲಂಬಿಸಿ ಹೇಗೆ ತಾಪಮಾನ -10 ಡಿಗ್ರಿ ಸೆಲ್ಸಿಯಸ್ ನಿಂದ 60 ಡಿಗ್ರಿ ವರೆಗೆ ವ್ಯತ್ಯಾಸವಾಗುತ್ತದೆ ಎಂಬುದನ್ನು ಇಸ್ರೋ ಹಂಚಿಕೊಂಡ ಗ್ರಾಫ್ ನಲ್ಲಿ ನೋಡಬಹುದಾಗಿದೆ. ಈ ಅಧ್ಯಯನಕ್ಕೆ 10 ಪ್ರತ್ಯೇಕ ತಾಪಮಾನ ಸಂವೇದಕಗಳನ್ನು ಅಳವಡಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಅಹಮದಾಬಾದ್ ನ ಭೌತಿಕ ಸಂಶೋಧನಾ ಪ್ರಯೋಗಾಲಯ ಸಹಯೋಗದೊಂದಿದೆ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯ ಪೇಲೋಡ್‌ಗಳನ್ನು ಅಭಿವೃದ್ಧಿ ಪಡಿಸಿದೆ